ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ವಾರ್ಡ್ ಸಂಖ್ಯೆ 29 ಹಾಗೂ 30 ರಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ನಡೆಸಿ ಮನೆಮನೆಗೆ ಭೇಟಿ ನೀಡಿ ಮತಪ್ರಚಾರ ನಡೆಸಲಾಯಿತು.
ಮಹಾಸಂಪರ್ಕ ಅಭಿಯಾನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ವಾರ್ಡ್ ಸಂಖ್ಯೆ 29 ಹಾಗೂ 30 ಎರಡೂ ವಾರ್ಡುಗಳ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಕಳೆದ ಹತ್ತು ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳು, ಜನಪರ ಕಾರ್ಯಕ್ರಮಗಳ ಕರಪತ್ರಗಳನ್ನು ಹಂಚಿ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಈ ವೇಳೆ ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಭಾರಿ ಪ್ರಕಾಶ ಅಕ್ಕಲಕೋಟ, ವಿಜಯಪುರ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪಾಪು ಸಿಂಗ್ ರಜಪೂತ್ ಮುಖಂಡರಾದ ವಿಜಯಕುಮಾರ ಗಚ್ಚಿನಕಟ್ಟಿ, ಗಿರೀಶ ಬಿರಾದಾರ, ವೇಣುಗೋಪಾಲ ಜೋಶಿ, ವಿಜಯಪುರದ ವಿಸ್ತಾರಕರಾದ ವೀರೇಂದ್ರ ಏಕ್ಕೆಮಠ ,ವಿಕಾಸ ಪದಕಿ, ಸಚಿನ ಘಾಟಿಗೆ, ಕೋಲಕಾರ್, ಗುರುರಾಜ್ ಹಜೇರಿ, ನಿಂಗರಾಜ್ ಪಾಟೀಲ್, ಗುರು ಓಕಳಿ, ಗುಂಡು ಹಿಪ್ಪರಗಿ, ಲಕ್ಷ್ಮಣ್ ಮೋದಿ, ಶಿವರಾಜ್ ಪೂಜಾರಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

