ವಿಜಯಪುರ: ದೇಶದ ಸುರಕ್ಷತೆ, ಸನಾತನ ಹಿಂದೂ ಧರ್ಮ ಉಳಿವಿಗಾಗಿ ಹಾಗೂ ಅಭಿವೃದ್ಧಿಗೋಸ್ಕರ ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪದೊಂದಿಗೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.
ದಕ್ಷ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸಿಂಗಂ ಎಂಬ ಖ್ಯಾತಿ ಗಳಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಲೋಕಸಭಾ ಚುನಾವಣೆ ಸ್ಟಾರ್ ಪ್ರಚಾರಕರಾದ ಕೆ.ಅಣ್ಣಾಮಲೈ ಅವರೊಂದಿಗೆ, ಆಶ್ರಮ ರಸ್ತೆಯ ಎಂಜಿನಿಯರಿಂಗ್ ಕಾಲೇಜು ಹತ್ತಿರ ಆರಂಭಗೊಂಡ ಬೃಹತ್ ಬೈಕ್ ರ‍್ಯಾಲಿ ಸಿದ್ದೇಶ್ವರ ದೇವಸ್ಥಾನ, ಮಹಾತ್ಮ ಗಾಂಧಿ ಚೌಕ್ ಮಾರ್ಗವಾಗಿ ಮೀನಾಕ್ಷಿ ಚೌಕ್ ಗೆ ತೆರಳಿಯಿತು.
ರ‍್ಯಾಲಿಯುದ್ದಕ್ಕೋ ಬೊಲೋ ಭಾರತ್ ಮಾತಾ ಕೀ ಜೈ, ಒಂದೇ ಮಾತರಂ, ಜೈ ಶ್ರೀ ರಾಮ, ಅಬ್ ಕಿ ಬಾರ್ ಮೋದಿ ಸರ್ಕಾರ್, ನರೇಂದ್ರ ಮೋದಿಯವರಿಗೆ ಜಯವಾಗಲಿ, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜಯವಾಗಲಿ, ರಮೇಶ ಜಿಗಜಿಣಗಿ ಅವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು. ಭಗವಾ ಹಾಗೂ ಬಿಜೆಪಿ ಧ್ವಜಗಳು ರಾರಾಜಿಸಿದವು.
ಸಂಸದ ರಮೇಶ ಜಿಗಜಿಣಗಿ, ಶಾಸಕರು ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ ಧೀರಜ್ ಮುನಿರಾಜ್ ಸೇರಿದಂತೆ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಹಾಗೂ ವಿಜಯಪುರ ನಗರ ಮಂಡಲ ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಬ್ರಹತ್ ಬೈಕ್ ರ‍್ಯಾಲಿ
Related Posts
Add A Comment
