Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಿಪಬ್ಲಿಕ್ ಟಿವಿ ಸಂದರ್ಶನದಲ್ಲಿ, ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ಪ್ರಧಾನಿ ಮೋದಿ ನವದೆಹಲಿ: ಭಾರತ ಆಗ್ನೇಯ ಏಷ್ಯಾ ರಾಜಧಾನಿಯಾಗಬೇಕೆಂದು ಬಯಸುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಗತಿಯು ಯಾರಿಗೂ ಅಪಾಯವನ್ನುಂಟುಮಾಡುವುದಿಲ್ಲ ಮತ್ತು ಭಾರತ ಮುಂದುವರೆದಂತೆ, ಪ್ರಪಂಚದ ಹೊರೆ ಕಡಿಮೆಯಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ.ರಿಪಬ್ಲಿಕ್ ಟಿವಿ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು ಭಾರತ ಆಗ್ನೇಯ ಏಷ್ಯಾದ ರಾಜಧಾನಿಯಾಗಲು ಏಕೆ ಸಾಧ್ಯವಿಲ್ಲ ಎಂದು ಕೇಳಿದರು.ಈಗ ಭಾರತ ಆಗ್ನೇಯ ಏಷ್ಯಾದ ರಾಜಧಾನಿಯಾಗಬೇಕೆಂದು ನಾನು ಬಯಸುತ್ತೇನೆ ಮತ್ತು ನಾವು ಏಕೆ ಆ ಮನೋಭಾವವನ್ನು ಹೊಂದಿರಬಾರದು? ಪ್ರಪಂಚದ ಎಲ್ಲಾ ದೇಶಗಳು ನಮ್ಮೊಂದಿಗೆ ಸೇರಲು ಏಕೆ ಬಯಸಬಾರದು? ಎಂದು ಕೇಳಿದ ಪ್ರಧಾನಿ, ಕೋಲ್ಕತ್ತಾ ಮತ್ತು ಗುವಾಹಟಿ ಬಹಳ ದೊಡ್ಡ ಕೇಂದ್ರಗಳಾಗಬಹುದು ಎಂದು ಹೇಳಿದರು.ನಾವು ದೈಹಿಕವಾಗಿ ತುಂಬಾ ಹತ್ತಿರವಾಗಿದ್ದೇವೆ. ಗುವಾಹಟಿ ಅಥವಾ ಕೋಲ್ಕತ್ತಾ ಬಹಳ ದೊಡ್ಡ ಕೇಂದ್ರಗಳಾಗಬಹುದು. ಕೋಲ್ಕತ್ತಾವನ್ನು ಇಡೀ ಆಗ್ನೇಯ ಏಷ್ಯಾಕ್ಕೆ ಏಕೆ ದೊಡ್ಡ ಆಕರ್ಷಕ ಸ್ಥಳವನ್ನಾಗಿ ಮಾಡಬಾರದು?…
ಚಿಮ್ಮಡ: ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾದ ೧೫೬ ವಿದ್ಯಾರ್ಥಿಗಳಲ್ಲಿ ೧೧೬ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು ಅದರಲ್ಲಿ೧೫ ವಿದ್ಯಾರ್ಥಿನಿಯರು ಅತ್ಯತ್ತಮ ಶ್ರೇಣಿ ೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಯ ಒಟ್ಟು ಫಲಿತಾಂಶ ಶೇ. ೭೪.೩೫ ಪಡೆದಿದೆ ಎಂದು ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯಿನಿ ಶ್ರೀಮತಿ ಎಂ.ಎಸ್. ಜಿಟ್ಟಿ ತಿಳಿಸಿದ್ದಾರೆ. ಕುಮಾರಿ ಭವಾನಿ ಕಾಡಪ್ಪಾ ನಿಂಬರಗಿ ೬೨೫ಕ್ಕೆ ೬೧೪ (ಶೇ. ೯೮.೨೪) ಕನ್ನಡ ವಿಷಯದಲ್ಲಿ ಶೇ ೧೦೦ ಅಂಕಗಳಿಸುವ ಮೂಲಕ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಕುಮಾರಿ ಸುಷ್ಮಾ ರಮೇಶ ಸಾವಳಗಿ ೬೦೯ (ಶೇ. ೯೭.೪೪) ಅಂಕ ಪಡೆದು ಶಾಲೆಗೆ ದ್ವಿತೀಯ ಪಡೆದಿದ್ದು, ಕುಮಾರಿ ದಾನಮ್ಮ ಗುರುಪಾದಯ್ಯ ಹಳ್ಳದಮಠ ೫೮೦ (೯೨.೮೦) ಪಡೆದು ಶಾಲೆಗೆ ತ್ರತೀಯ ಹಾಗೂ ಕುಮಾರಿ ಉಷಾ ಪುಂಡಲಿಕ ಬಳಗಾರ ೫೮೧ (೯೨.೮೦) ಕುಮಾರಿ ಸ್ಪೂರ್ತಿ…
ಯಡ್ರಾಮಿ: ಬಸವಣ್ಣನವರು ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿಯೂ ತಮ್ಮನ್ನ ತೊಡಗಿಸಿಕೊಂಡು ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಎಂದು ಭಾವಿಸಿ ಸರ್ವ ಸಮಾನತೆ ತರಲು ಹೋರಾಡಿದ ಶ್ರೇಷ್ಟ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.ಯಡ್ರಾಮಿ ಪಟ್ಟಣದಲ್ಲಿ ಶುಕ್ರವಾರ ವಿಶ್ವಗುರು ಬಸವಣ್ಣ ಜಯಂತಿ ಪ್ರಯುಕ್ತ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ದ್ವಜಾರೋಹಣ ನಡೆಸಿ ಮಾತನಾಡಿದ ಅವರು, ವಿಶ್ವ ಜಾಗತಿಕ ಇತಿಹಾಸದಲ್ಲಿ ಧರ್ಮ, ಸಮಾಜ ಮತ್ತು ಸಾಹಿತ್ಯ ಸಂವರ್ಧನೆಗಾಗಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವನು ವಿಶ್ವಗುರು ಬಸವಣ್ಣ. ಬಸವಣ್ಣವರು ಜನರಾಡುವ ಭಾಷೆಯಲ್ಲಿ ವಚನ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿತರಾಗಿದ್ದರು. ಇಂದಿಗೂ ಸಹ ಅವರು ರಚಿಸಿದ ವಚನಗಳು ಮನುಷ್ಯ ಜೀವನದ ಒಂದು ಅಂಗವಾಗಿದೆ ಎಂದು ತಿಳಿಸಿದರು.ನಂತರ ಪಟ್ಟಣದ ಹಳೆ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ವಿರಕ್ತ ಮಠದವರೆಗೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಬಸವಣ್ಣನವರ…
ಸಿಂದಗಿ: ಪಟ್ಟಣದ ಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮಹಾಂತೇಶ ಶೆಟ್ಟರ ವಿಶ್ವಗುರು ಬಸವಣ್ಣವರ ವೇಷದಲ್ಲಿ ಕಂಗೊಳಿಸುತ್ತಿರುವುದು. ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಸಾತವೀರ ಡಗ್ಗಾ ಸಮಾನತೆಯ ಹರಿಕಾರ ಬಸವೇಶ್ವರರ ವೇಷದಲ್ಲಿ ಗೋಚರಿಸಿದ್ದಾನೆ.
ಸಿಂದಗಿ: ಬಸವಣ್ಣನವರು ೧೨ನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರತಿಪಾದಿಸಿ ಲಿಂಗಬೇಧ, ವರ್ಗಬೇಧಗಳನ್ನು ತೊಲಗಿಸಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ನೀಡಿದ ಕೊಡುಗೆ ಅನನ್ಯ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬಸವ ಮತ್ತು ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಪೂಜಾ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನುಡಿದಂತೆ ನಡೆದ ವಚನಗಳ ಮೂಲಕ ಸಮಾನತೆ, ಕಾಯಕ ತತ್ವ, ದಾಸೋಹ ತತ್ವ ಅವರ ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ. ಹೇಮರೆಡ್ಡಿ ಮಲ್ಲಮ್ಮ ತಮ್ಮ ಬುದುಕಿನಲ್ಲಿ ಎದುರಿಸಿದ ಕಷ್ಟಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಬದಲಾಯಿಸಿ ಸಮಾಜದ ಒಳಿತಿಗೆ ಶ್ರಮಿಸಿದ್ದಾರೆ ಎಂದರು.ಈ ವೇಳೆ ಕಂದಾಯ ನೀರಿಕ್ಷಕ ಆಯ್.ಎ.ಮಕಾಂದಾರ, ನೀಖಿಲಅಹ್ಮದ್ ಖಾನಾಪೂರ, ಗುರು ತಾರಾಪೂರ, ಸಿದ್ದಬಸವ ಕುಂಬಾರ, ಆರ್.ಆರ್.ಪಾಟೀಲ ಸೇರಿದಂತೆ ಅನೇಕರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ:ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಬಸವ ಮತ್ತು ಹೇಮರೆಡ್ಡಿ ಮಲ್ಲಮ್ಮ…
ಸಿಂದಗಿ: ಎಲ್ಲ ಧರ್ಮಿಯರು ಸೇರಿಕೊಂಡು ಆಚರಣೆ ಮಾಡುವುದೇ ಬಸವ ಜಯಂತಿ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಬಸವಣ್ಣನವರ ೮೯೧ನೆಯ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧಾರವಾಡದ ಮೃತ್ಯುಂಜಯ ಮಹಾಸ್ವಾಮಿಗಳು ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಣೆಯನ್ನು ದಾವಣಗೇರಿಯಲ್ಲಿ ಪ್ರಾರಂಭ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ನಿರ್ವಿಘ್ನವಾಗಿ ಅತ್ಯಂತ ವಿಜೃಂಭಣೆಯಿಂದ ಮಾಡಿಕೊಳ್ಳುತ್ತಾ ಬರುತ್ತಿದೆ. ಶರಣರು ನಡೆದು ಬಂದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅವರ ತತ್ವಾದರ್ಶ ಸಿದ್ಧಾಂತಗಳನ್ನು ಈಗಿನ ಯುವಕರು ಮೈಗೂಡಿಸಿಕೊಳ್ಳಬೇಕು. ಶರಣರ ಜೀವನವನ್ನು ಮುಂದುವರೆಸಿಕೊಂಡ ಹೋಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು ಎಂದು ಆಶೀರ್ವದಿಸಿದರು.ಈ ವೇಳೆ ಶಾಸಕ ಅಶೋಕ ಮನಗೂಳಿ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಗುರು ತಾರಾಪೂರ, ಶ್ರೀಶೈಲ ಯಳಮೇಲಿ, ಸಿದ್ದಬಸವ ಕುಂಬಾರ, ಅಶೋಕ ಅಲ್ಲಾಪೂರ, ಆನಂದ ಶಾಬಾದಿ, ವಿಶ್ವನಾಥ ಕುರಡೆ, ಶಾಂತೂ ರಾಣಾಗೋಳ, ಶಿವಾನಂದ ಕಲಬುರ್ಗಿ, ಆರ್.ಆರ್.ಪಾಟೀಲ, ವಾಯ್.ಸಿ. ಮಯೂರ, ಜಗದೀಶ ಪಟ್ಟಣಶೆಟ್ಟಿ (ಶುಂಠಿ) ಸೇರಿದಂತೆ ಬಸವಣ್ಣನವರ ಅನುಯಾಯಿಗಳು ಉಪಸ್ಥಿತರಿದ್ದರು.
ಇಂಡಿ: ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಬಸವಣ್ಣ ಕೊಟ್ಟ ಕೊಡುಗೆ ಅಪಾರವಾದದ್ದು. ಅವರ ತತ್ವ ಸಿದ್ಧಾಂತಗಳು ಇಡೀ ವಿಶ್ವ ಒಪ್ಪಿಕೊಳ್ಳುವ ಕಾಲ ಇಂದು ಸನ್ನಿಹಿತವಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷ ಶಿವರಾಯಗೌಡ ಬಿರಾದಾರ ಹೇಳಿದರು.ಶುಕ್ರವಾರ ತಾಲೂಕಿನ ಆಳೂರ ಗ್ರಾಮದ ಕಾರ್ಕಲ್ ವಸತಿ ಹತ್ತಿರ ಬಸವೇಶ್ವರ ಸರ್ಕಲದಲ್ಲಿ ನಡೆದ ಬಸವ ಜಯಂತಿ ಕಾರ‍್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಹಾಗೂ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಸತ್ಯವಾಗಿವೆ, ಅದನ್ನು ಬಹುತೇಕ ಎಲ್ಲಾ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಎಂದ ಅವರು, ಬಸವಣ್ಣನವರ ಆದರ್ಶಗಳನ್ನು ನಾವುಗಳೆಲ್ಲಾ ರೂಢಿಸಿಕೊಳ್ಳಬೇಕೆಂದರು.ಸಮಿತಿಯ ಉಪಾಧ್ಯಕ್ಷ ಜಗದೇವಪ್ಪ ಬಬಲಾದ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ‍್ಯ ನೀಡಿದ ಮೊಟ್ಟಮೊದಲ ದಾರ್ಶನಿಕ ಬಸವಣ್ಣನವರು ಎಂದ ಅವರು, ಹಿಂದಿನ ಕಾಲದಲ್ಲಿ ಹೆಣ್ಣಿನ ಎಲ್ಲಾ ಸ್ವಾತಂತ್ರವನ್ನು ಕಸಿದುಕೊಂಡು ಆಕೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸಲಾಗಿತ್ತು. ಆದರೆ, ೧೨ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಸಮಾನತೆ ಮತ್ತು ಸ್ವಾತಂತ್ರ‍್ಯವನ್ನು ನೀಡುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದರು ಎಂದರು.ನಿರಂಜನ ಬಡಿಗೇರ ಮಾತನಾಡಿ,…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ೩೩/೧೧ಕೆವಿ ವಿದ್ಶುತ್ ವಿತರಣಾ ಕೇಂದ್ರ ಗೋಲಗೇರಿಯಲ್ಲಿ ತುತು೯ ನಿವ೯ಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಶುತ್ ಪೂರೈಕೆಯಲ್ಲಿ ವ್ಶತ್ಶಯವಾಗಲಿದೆ. ವಿದ್ಶುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲ ಗ್ರಾಮಗಳಿಗೆ ಮೆ.೧೨ರಂದು ಬೆಳಗ್ಗೆ ೯ಗಂಟೆಯಿಂದ ಸಂಜೆ ೪ ಗಂಟೆವರೆಗೆ ವಿದ್ಶುತ್ ಪೂರೈಕೆ ಇರುವುದಿಲ್ಲ.ಆದ್ದರಿಂದ ಗ್ರಾಮಗಳ ಸಾವ೯ಜನಿಕರು ಸಹಕರಿಸಬೇಕು ಎಂದು ಸಿಂದಗಿಯ ಹೆಸ್ಕಾಂ ಉಪವಿಭಾಗದ ಸಹಾಯಕ ನಿವಾ೯ಹಕ ಅಭಿಯಂತರ ಚಂದ್ರಕಾಂತ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋಲಗೇರಿ: ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದ ಕಲ್ಶಾಣದೇಶ್ವರ ರಥೋತ್ಸವ ಸಾವಿರಾರು ಭಕ್ತ ಸಮೂಹದ ಮಧ್ಶೆ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಕಾಯಿ ಕಪೂ೯ರ ಒಡೆದು ಭಕ್ತಿ ಸಮಪಿ೯ಸಿದರು. ವಿವಿಧ ವಾಧ್ಶ ವೈಭವಗಳು ರಥೋತ್ಸವಕ್ಕೆ ಮೆರಗು ತಂದವು.ಬೆಳಗ್ಗೆ ಕಲ್ಶಾಣದೇಶ್ವರ ಕತೃ೯ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಆಲೂರು ಕೆಂಚವೃಷಭೇಂದ್ರ ಶಿವಾಚಾಯ೯ರು, ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾಯ೯ರು, ಶ್ರೀಮಠದ ಒಡೆಯ ಕಲ್ಶಾಣದಯ್ಶ ವೀರಘಂಟಯ್ಶ ಸ್ವಾಮೀಜಿ, ವಡವಡಗಿಯ ಶ್ರೀಗಳ ಸಾನ್ನಿಧ್ಶದಲ್ಲಿ ಕಲ್ಶಾಣದೇಶ್ವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಪಾದಗಟ್ಟಿವರೆಗೆ ರಥ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ದೇವಸ್ಥಾನವನ್ನು ವಿದ್ಶುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಲ್ಶಾಣದೇಶ್ವರ ಜಾತ್ರಾ ಸಮಿತಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು. ಪೋಟು ಗೋಲಗೇರಿ ೧೦-೦೨ ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದ ಕಲ್ಶಾಣದೇಶ್ವರ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತ ಸಮೂಹದ ಮಧ್ಶೆ ವಿಜೃಂಭಣೆಯಿಂದ ಜರುಗಿತು.
ಚಡಚಣ: ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ಕೊಡಮಾಡುವ ಸಹೃದಯ ಕಾವ್ಯ ಪುರಸ್ಕಾರಕ್ಕೆ ಹಲಸಂಗಿಯ ಕವಿ ಸುಮಿತ್ ಮೇತ್ರಿ ಆಯ್ಕೆಯಾಗಿದ್ದಾರೆ.2019ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ದತ್ತಿ, ಸಾಹಿತ್ಯ ಸಂಗಮ ಕೊಡಮಾಡುವ ಹರಿಹರ ಪ್ರಶಸ್ತಿ, ಸಾಹಿತ್ಯ ಚಿಗುರು, ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಎರಡು ಬಾರಿ ಸಮೀರವಾಡಿ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುಸ್ತಕ ಬಹುಮಾನ ಹಾಗೂ ಜನಮಿತ್ರ, ಜನಶಕ್ತಿ ಹೀಗೆ ಹಲವು ಕಾವ್ಯಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ಇವರ ಕವಿತೆಗಳು ಇಂಗ್ಲಿಷ್ ಒಳಗೊಂಡಂತೆ ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡಿವೆ. ಹೊಸ ಕನ್ನಡ ಕಾವ್ಯದ ಅತ್ಯಾಕರ್ಷಕ ಧ್ವನಿಗಳಲ್ಲಿ ಒಬ್ಬರಾಗಿ, ಧಗಧಗಿಸುವ ನಿಶ್ಯಬ್ದದೊಂದಿಗೆ ಆತ್ಮವಿಶ್ವಾಸ, ನಿರ್ಭೀತವಾಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಇರುವ ಇವರ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಈಗ ಇವರ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕವನ ಸಂಕಲನಕ್ಕೆ ಸಹೃದಯ ಕಾವ್ಯ ಪ್ರಶಸ್ತಿ ದೊರೆತಿದೆ.
