ಚಿಮ್ಮಡ: ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾದ ೧೫೬ ವಿದ್ಯಾರ್ಥಿಗಳಲ್ಲಿ ೧೧೬ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು ಅದರಲ್ಲಿ೧೫ ವಿದ್ಯಾರ್ಥಿನಿಯರು ಅತ್ಯತ್ತಮ ಶ್ರೇಣಿ ೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಯ ಒಟ್ಟು ಫಲಿತಾಂಶ ಶೇ. ೭೪.೩೫ ಪಡೆದಿದೆ ಎಂದು ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯಿನಿ ಶ್ರೀಮತಿ ಎಂ.ಎಸ್. ಜಿಟ್ಟಿ ತಿಳಿಸಿದ್ದಾರೆ. ಕುಮಾರಿ ಭವಾನಿ ಕಾಡಪ್ಪಾ ನಿಂಬರಗಿ ೬೨೫ಕ್ಕೆ ೬೧೪ (ಶೇ. ೯೮.೨೪) ಕನ್ನಡ ವಿಷಯದಲ್ಲಿ ಶೇ ೧೦೦ ಅಂಕಗಳಿಸುವ ಮೂಲಕ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಕುಮಾರಿ ಸುಷ್ಮಾ ರಮೇಶ ಸಾವಳಗಿ ೬೦೯ (ಶೇ. ೯೭.೪೪) ಅಂಕ ಪಡೆದು ಶಾಲೆಗೆ ದ್ವಿತೀಯ ಪಡೆದಿದ್ದು, ಕುಮಾರಿ ದಾನಮ್ಮ ಗುರುಪಾದಯ್ಯ ಹಳ್ಳದಮಠ ೫೮೦ (೯೨.೮೦) ಪಡೆದು ಶಾಲೆಗೆ ತ್ರತೀಯ ಹಾಗೂ ಕುಮಾರಿ ಉಷಾ ಪುಂಡಲಿಕ ಬಳಗಾರ ೫೮೧ (೯೨.೮೦) ಕುಮಾರಿ ಸ್ಪೂರ್ತಿ ರಾಮಪ್ಪಾ ಬಳಗಾರ ೫೭೮ (೯೨.೪೮) ಕುಮಾರಿ ಸೌಮ್ಯ ಚನನಪ್ಪಾ ಗೋಕಾವಿ ೫೭೭ ( ೯೨.೩೨) ಕುಮಾರಿ ಆಶಿಷಾ ಸೈಪನಸಾಬ ಜಮಖಂಡಿ ೫೭೬ (೯೨.೧೬) ಕುಮಾರಿ ನಿರ್ಮಲಾ ಹೊನ್ನಪ್ಪ ಉರಭಿನವರ ೫೭೨ (೯೧.೫೨) ಕುಮಾರಿ ಅನಿತಾ ದುಂಡಪ್ಪ ಕವಟಕೊಪ್ಪ ೫೬೯ (೯೧.೦೪) ಕುಮಾರಿ ಸ್ನೇಹಾ ಶ್ರೀಶೈಲ ಬುರಡಿ ೫೫೮ (೮೯.೨೮) ಕುಮಾರಿ ಗುರುದೇವಿ ನಂದೆಪ್ಪ ಮಾಡಲಗಿ ೫೪೯ (೮೭.೮೪) ಕುಮಾರಿ ಪೂಜಾ ಮಹಾದೇವ ಬೆಳಗಲಿ ೫೪೨ (೮೬.೭೨) ಕುಮಾರಿ ನಂದಾ ಬಸಪ್ಪಾ ಹುಕ್ಕೇರಿ ೫೪೦ (೮೬.೪೦) ಕುಮಾರಿ ಪರೀತಿ ಬಸಪ್ಪಾ ಹತ್ತರಕಿ ೫೩೮ (೮೬.೦೮) ಕುಮಾರಿ ಕುಸುಮಾ ಸಂಗಪ್ಪಾ ದೊಡಮನಿ ೫೩೬ (೮೫.೭೬) ಅಂಕಗಳನ್ನು ಪಡೆದುಕೊಂಡು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ. ಗ್ರಾಮಕ್ಕೆ ಕೀರ್ತಿ ತಂದಿರುವ ಈ ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ಸದಸ್ಯರು ಶಾಲಾ ಶಿಕ್ಷಕರು, ಸ್ಥಳಿಯ ಗ್ರಾಮ ಪಂಚಾಯತಿ ಹಾಗೂ ಅರುಣೋದಯ ಗ್ರಾಮೀಣಾಭಿವೃದ್ದಿ ಸಂಘ, ಬಸವೇಶ್ವರ ಯುವಕ ಸಂಘದ ಪಧಾದಿಕಾರಿಗಳು ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
