ಸಿಂದಗಿ: ಎಲ್ಲ ಧರ್ಮಿಯರು ಸೇರಿಕೊಂಡು ಆಚರಣೆ ಮಾಡುವುದೇ ಬಸವ ಜಯಂತಿ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಬಸವಣ್ಣನವರ ೮೯೧ನೆಯ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧಾರವಾಡದ ಮೃತ್ಯುಂಜಯ ಮಹಾಸ್ವಾಮಿಗಳು ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಣೆಯನ್ನು ದಾವಣಗೇರಿಯಲ್ಲಿ ಪ್ರಾರಂಭ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ನಿರ್ವಿಘ್ನವಾಗಿ ಅತ್ಯಂತ ವಿಜೃಂಭಣೆಯಿಂದ ಮಾಡಿಕೊಳ್ಳುತ್ತಾ ಬರುತ್ತಿದೆ. ಶರಣರು ನಡೆದು ಬಂದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಅವರ ತತ್ವಾದರ್ಶ ಸಿದ್ಧಾಂತಗಳನ್ನು ಈಗಿನ ಯುವಕರು ಮೈಗೂಡಿಸಿಕೊಳ್ಳಬೇಕು. ಶರಣರ ಜೀವನವನ್ನು ಮುಂದುವರೆಸಿಕೊಂಡ ಹೋಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು ಎಂದು ಆಶೀರ್ವದಿಸಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಗುರು ತಾರಾಪೂರ, ಶ್ರೀಶೈಲ ಯಳಮೇಲಿ, ಸಿದ್ದಬಸವ ಕುಂಬಾರ, ಅಶೋಕ ಅಲ್ಲಾಪೂರ, ಆನಂದ ಶಾಬಾದಿ, ವಿಶ್ವನಾಥ ಕುರಡೆ, ಶಾಂತೂ ರಾಣಾಗೋಳ, ಶಿವಾನಂದ ಕಲಬುರ್ಗಿ, ಆರ್.ಆರ್.ಪಾಟೀಲ, ವಾಯ್.ಸಿ. ಮಯೂರ, ಜಗದೀಶ ಪಟ್ಟಣಶೆಟ್ಟಿ (ಶುಂಠಿ) ಸೇರಿದಂತೆ ಬಸವಣ್ಣನವರ ಅನುಯಾಯಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

