ಯಡ್ರಾಮಿ: ಬಸವಣ್ಣನವರು ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿಯೂ ತಮ್ಮನ್ನ ತೊಡಗಿಸಿಕೊಂಡು ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಎಂದು ಭಾವಿಸಿ ಸರ್ವ ಸಮಾನತೆ ತರಲು ಹೋರಾಡಿದ ಶ್ರೇಷ್ಟ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.
ಯಡ್ರಾಮಿ ಪಟ್ಟಣದಲ್ಲಿ ಶುಕ್ರವಾರ ವಿಶ್ವಗುರು ಬಸವಣ್ಣ ಜಯಂತಿ ಪ್ರಯುಕ್ತ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ದ್ವಜಾರೋಹಣ ನಡೆಸಿ ಮಾತನಾಡಿದ ಅವರು, ವಿಶ್ವ ಜಾಗತಿಕ ಇತಿಹಾಸದಲ್ಲಿ ಧರ್ಮ, ಸಮಾಜ ಮತ್ತು ಸಾಹಿತ್ಯ ಸಂವರ್ಧನೆಗಾಗಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವನು ವಿಶ್ವಗುರು ಬಸವಣ್ಣ. ಬಸವಣ್ಣವರು ಜನರಾಡುವ ಭಾಷೆಯಲ್ಲಿ ವಚನ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿತರಾಗಿದ್ದರು. ಇಂದಿಗೂ ಸಹ ಅವರು ರಚಿಸಿದ ವಚನಗಳು ಮನುಷ್ಯ ಜೀವನದ ಒಂದು ಅಂಗವಾಗಿದೆ ಎಂದು ತಿಳಿಸಿದರು.
ನಂತರ ಪಟ್ಟಣದ ಹಳೆ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ದೇವಸ್ಥಾನ ಮಾರ್ಗವಾಗಿ ವಿರಕ್ತ ಮಠದವರೆಗೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಈ ವೇಳೆ ಮಹಾನಿಂಗಪ್ಪಗೌಡ ಬಂಡೆಪ್ಪಗೋಳ, ಬಸಲಿಂಗಪ್ಪ ಸಾಹು ಅಂಕಲಕೋಟಿ, ಶಾಂತಗೌಡ ಜವಳಗಿ, ಸಿದ್ರಾಮಪ್ಪಗೌಡ ಮಾಲಿಪಾಟೀಲ, ಚಂದ್ರಶೇಖರ ಪುರಾಣಿಕ, ಪ್ರಕಾಶ ಬೆಲ್ಲದ, ಆನಂದ ಯತ್ನಾಳ, ವಿಜಯಕುಮಾರ ಗುಂದಗಿ, ರಾಘವೇಂದ್ರ ಕುಲಕರ್ಣಿ, ರೇವಣಸಿದ್ದಪ್ಪ ಅಂಕಲಕೋಟಿ, ಬಸವರಾಜ ದೊಡ್ಡಳ್ಳಿ, ಪ್ರಭುದೇವ ಜವಳಗಿ, ಲಿಂಗರಾಜ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹೂಗಾರ, ಶರಣು ಸೋಮಪ್ಪಗೋಳ, ಕಾಶಿನಾಥ ಪಾಟೀಲ, ನಾಗಣ್ಣ ಬಿರಾದಾರ, ಅರುಣ ಹೆಬ್ಬಾಳ, ಶಿವು ತಾಳಿಕೋಟಿ, ಶ್ರೀಶೈಲ ಸಜ್ಜನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

