ಚಡಚಣ: ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ಕೊಡಮಾಡುವ ಸಹೃದಯ ಕಾವ್ಯ ಪುರಸ್ಕಾರಕ್ಕೆ ಹಲಸಂಗಿಯ ಕವಿ ಸುಮಿತ್ ಮೇತ್ರಿ ಆಯ್ಕೆಯಾಗಿದ್ದಾರೆ.
2019ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ದತ್ತಿ, ಸಾಹಿತ್ಯ ಸಂಗಮ ಕೊಡಮಾಡುವ ಹರಿಹರ ಪ್ರಶಸ್ತಿ, ಸಾಹಿತ್ಯ ಚಿಗುರು, ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಎರಡು ಬಾರಿ ಸಮೀರವಾಡಿ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುಸ್ತಕ ಬಹುಮಾನ ಹಾಗೂ ಜನಮಿತ್ರ, ಜನಶಕ್ತಿ ಹೀಗೆ ಹಲವು ಕಾವ್ಯಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ಇವರ ಕವಿತೆಗಳು ಇಂಗ್ಲಿಷ್ ಒಳಗೊಂಡಂತೆ ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡಿವೆ. ಹೊಸ ಕನ್ನಡ ಕಾವ್ಯದ ಅತ್ಯಾಕರ್ಷಕ ಧ್ವನಿಗಳಲ್ಲಿ ಒಬ್ಬರಾಗಿ, ಧಗಧಗಿಸುವ ನಿಶ್ಯಬ್ದದೊಂದಿಗೆ ಆತ್ಮವಿಶ್ವಾಸ, ನಿರ್ಭೀತವಾಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಇರುವ ಇವರ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಈಗ ಇವರ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕವನ ಸಂಕಲನಕ್ಕೆ ಸಹೃದಯ ಕಾವ್ಯ ಪ್ರಶಸ್ತಿ ದೊರೆತಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

