Author: editor.udayarashmi@gmail.com

ಬೆಂಗಳೂರು: ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುವಂತೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್‌, ಸ್ವಚ್ಚತಾ ಸಿಬ್ಬಂದಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.ಡಿಸೆಂಬರ್ 21, 2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸುವ ನೀತಿಯನ್ನು ಜಾರಿಗೊಳಿಸಲು ನಿರ್ಣಯಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲಾ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.ಮೀಸಲಾತಿ ನಿಯಮಗಳು ಹೀಗಿವೆ..ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.ಪ್ರತಿವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಕೆಟಿಪಿಪಿ ಅಧಿನಿಯಮ 1999ರಂತೆ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿ ಸಿಬ್ಬಂದಿಯನ್ನು ಪಡೆಯಲು ಷರತ್ತುಗಳನ್ನು ನಮೂದಿಸಬೇಕು.ಹೊರಗುತ್ತಿಗೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿದ ಮೀಸಲಾತಿ ಪ್ರಮಾಣದಲ್ಲಿ ಕನಿಷ್ಠ ಶೇ.33ರಷ್ಟು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಬೇಕು.ಟೆಂಡರ್ ಅಂಗೀಕರಿಸುವ ಪ್ರಾಧಿಕಾರ ಕಡ್ಡಾಯವಾಗಿ…

Read More

11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ | ನಾಮಪತ್ರ ಸಲ್ಲಿಸಲು ಜೂ.3 ಕೊನೆಯ ದಿನ | ಜೂ.13ರಂದು ಸಂಜೆ 5ಕ್ಕೆ ಮತ ಎಣಿಕೆ ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಜೂನ್‌ 13ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ.3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಲ್ಲದೆ, ಮತದಾನದ ದಿನವಾದ ಜೂನ್‌ 13ರಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚು.ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾಯಿತರಾಗಿರುವ 11 ಸದಸ್ಯರ ಅವಧಿ ಜೂನ್‌ 17ಕ್ಕೆ ಕೊನೆಗೊಳ್ಳಲಿದೆ. ಅರವಿಂದ ಕುಮಾರ್ ಅರಳಿ, ಎನ್.ಎಸ್.ಬೋಸರಾಜ್, ಕೆ.ಗೋವಿಂದರಾಜ್, ಡಾ.ತೇಜಶ್ವಿನಿ ಗೌಡ, ಮುನಿರಾಜುಗೌಡ, ಕೆ.ಪಿ.ನಂಜುಂಡಿ, ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿ ಕುಮಾರ್, ಎಸ್.ರುದ್ರೇಗೌಡ, ಎಚ್.ಹರೀಶ್ ಕುಮಾರ್, ಬಿ.ಎಂ.ಫಾರೂಕ್ ಅವರ ಅವಧಿ ಕೊನೆಗೊಳ್ಳಲಿದೆ. ಈ ಹಿನ್ನೆಲೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.-ಮೇ 27ರಂದು ಚುನಾವಣಾ ಅಧಿಸೂಚನೆ-ಜೂ.…

Read More

೫ ನೇ ದಿನಕ್ಕೆ ಕಾಲಿಟ್ಟ ಜಂಬಗಿ(ಆ), ಹುಣಶ್ಯಾಳ(ಮಾದಾಳ) ಕೆರೆ ನೀರು ತುಂಬಿಸುವ ಸತ್ಯಾಗ್ರಹ ವಿಜಯಪುರ : ಜಂಬಗಿ (ಆ), ಮಾದಾಳ, ಹುಣಶ್ಯಾಳ ಕೆರೆಗೆ ನೀರು ಹರಿಸಬೇಕೆಂದು ಕಳೆದ ೪ ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವು ಸೋಮವಾರ ೫ನೇ ದಿನಕ್ಕೆ ಕಾಲಿಡಲಾಗಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಕೆರೆ ನೀರು ತುಂಬದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರೊಂದಿಗೆ ಹೋರಾಟ ನಡೆಸುತ್ತಿದ್ದು, ಕೂಡಲೇ ನೀರು ಹರಿಸಬೇಕು ಇಲ್ಲ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ರೈತ ಸಂಘದ ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ ಅವರು ಮಾತನಾಡುತ್ತಾ ಜಂಬಗಿ ಕೆರೆಗೆ ನೀರು ತುಂಬಿಸಬೇಕು, ಇಲ್ಲವಾದಲ್ಲಿ ಬುಧವಾರದಂದು ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಹಾಕಿ ಜಂಬಗಿ ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸುತ್ತೇವೆ. ನೀರು ಹರಿಸುವವರೆಗೂ ಅಲ್ಲಿಯೇ ಕುಳಿತು ಮಕ್ಕಳು, ಮಹಿಳೆಯರು ಹಾಗೂ ಧನಕರುಗಳೊಂದಿಗೆ ಧರಣಿ…

Read More

ಚಡಚಣ: ಇದೇ ೨೨ರಿಂದ ಮೇ ೨೪ ರ ಶುಕ್ರವಾರದವರೆಗೆ ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರಾ, ಮಹಾದ್ವಾರ ಕಳಸಾರೋಹಣ ಹಾಗೂ ಸುಮಂಗಲೆಯರ ಕುಂಭ ಮೇಳದೊಂದಿಗೆ ಕಾಶೀ ಜಗದ್ಗುರುಗಳ ಸಾರೋಟ ಉತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬುಧವಾರ ಬೆಳಗ್ಗೆ ೧೦ ಗಂಟೆಗೆ ಟ್ರ್ಯಾಕ್ಟರ್ ಟ್ರೇಲರ್ ಎಳೆಯುವ ಸ್ಪರ್ಧೆ ನಡೆಯಲಿದೆ. ಸಾಯಂಕಾಲ ೦೬ ಗಂಟೆಗೆ ನಂದಿಧ್ವಜ ಮೆರವಣಿಗೆಯು ಕೃಷ್ಣಪ್ಪ ಹೂಗಾರರವರ ಮನೆಯಿಂದ ವಿವಿಧ ವಾದ್ಯವೈಭವಗಳೊಂದಿಗೆ ಹೋರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ತಲುಪುವುದು. ನಂತರ ರಾತ್ರಿ ೦೯ ಗಂಟೆಗೆ ಚಿತ್ರ ವಿಚಿತ್ರವಾದ ಮದ್ದು ಸುಡುವುದು. ರಾತ್ರಿ ೧೦ ಗಂಟೆಗೆ ಪ್ರಸಾದ ಕಡಾಯಿಗೆ ನೀರು ಹಾಕುವ ಕಾರ್ಯಕ್ರಮ ಜರುಗುವುದು.ಗುರುವಾರ ನಸುಕಿನ ಜಾವ ೦೫ ಗಂಟೆಗೆ ಶ್ರೀ ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಭಕ್ತರಿಂದ ದೀರ್ಘದಂಡ ನಮಸ್ಕಾರವು ನಡೆಯಲಿದೆ. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆ. ಮುಂಜಾನೆ ೧೦:೩೦ ಕಾಶೀ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರ ಸುಮಂಗಲೆಯರ ಕುಂಭ…

Read More

ವಿಜಯಪುರ: ಜಿಲ್ಲೆಯ ಕಿಸಾನ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷರಾದ ಚನಬಸಯ್ಯ ಹಿರೇಮಠ ಅವರನ್ನು ಗಣೇಶ ನಗರದ ಅವರ ಅಭಿಮಾನಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನಮಲ್ಲಗೌಡ ಸಾರವಾಡ ಅವರು ಮಾತನಾಡುತ್ತಾ, ಚನಬಸಯ್ಯ ಅವರು ಬಹಳ ಒಳ್ಳೆಯ ಮೃದು ಸ್ವಾಭಾವದ ಎಲ್ಲರೊಂದಿಗೆ ಸರಳವಾಗಿ ಬೆರೆಯುವ ವ್ಯಕ್ತಿತ್ವ ಉಳ್ಳವರು, ಅವರಿಗೆ ಈ ನೂತನ ಹುದ್ದೆ ಕೊಟ್ಟಿರುವುದು ಸ್ವಾಗತಾರ್.ಹ ನಿಮ್ಮಿಂದ ಜಿಲ್ಲೆಯ ರೈತರ ಕಷ್ಟ ಬಗೆಹರೆಸುವಂತಹ ಶಕ್ತಿ ಬಂದು ಒಳ್ಳೆಯ ಸಂಘಟನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಲೀಮ್ ಕಲಾದಗಿ ಅಶೋಕ ಬಾಗೇವಾಡಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಚನ್ನು ಕಟ್ಟಿಮನಿ,ಮುತ್ತುಗೌಡ ಪಾಟೀಲ ಗ್ರಾಪಂ ಸದಸ್ಯರು ಸೋಲವಾಡಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಾಸೀಮ್ ಇನಾಮ್ದಾರ, ರಾಮನಗೌಡ ಪಾಟೀಲ ಬ್ಯಾಲಾಳ, ಲಕ್ಷ್ಮೀ ನಗರದ ಅಭಿವೃದ್ಧಿ ಸಂಘ ಅಧ್ಯಕ್ಷರಾದ ಪ್ರವೀಣ ಕಿಚಡಿ, ಪ್ರದೀಪ್ ಮಿಸ್ಕೀನ್ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಲ್ಲಪ್ಪ ಪಾರಶೆಟ್ಟಿ, ಈಶ್ವರ ಹೂಗಾರ, ಶಂಕರ್ ಬಜಂತ್ರಿ, ಸಾಧಿಕ್ ಹೋನ್ನುಟಗಿ, ಶಿವು…

Read More

ಮುದ್ದೇಬಿಹಾಳ: ಪಟ್ಟಣದ ಅರ್ಜುನ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೫೯೯(ಶೇ.೯೬%) ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತಿಯ ಸ್ಥಾನ ಗಿಟ್ಟಿಸಿಕೊಂಡ ರಾಮು ವಡ್ಡರ ಗೆ ಚೈತ್ರಾ ಆರೋಗ್ಯ, ಶಿಕ್ಷಣ ಸೇವಾ ಟ್ರಸ್ಟ್ ಮತ್ತು ದಿ.ನಾಗಮ್ಮ ಭೀಮಪ್ಪ ಬೆಳಗಲ್ಲ ಪೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಚಿಕ್ಕಮಕ್ಕಳ ತಜ್ಞ ವೈದ್ಯ ಡಾ.ಪರಶುರಾಮ ವಡ್ಡರ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಅಷ್ಟೇ ಮಹತ್ವದ ಪಾತ್ರ ಪಾಲಕರದ್ದೂ ಇರುತ್ತದೆ. ಶಾಲೆಯಿಂದ ಮನೆಗೆ ಬರುವ ಮಗುವಿಗೆ ಮನೆಯಲ್ಲಿ ಅಂದಿನ ಶಾಲಾ ಪಾಠದ ಕುರಿತು ಮನನ ಮಾಡಿಸಿದಲ್ಲಿ ಮಗುವಿನ ಬೌದ್ಧಿಕ ಬೆಳವಣಿಗೆಯಾಗುತ್ತದೆ ಎಂದರು.ಈ ವೇಳೆ ಟ್ರಸ್ ಅಧ್ಯಕ್ಷ ಯಮನಪ್ಪ ವಡ್ಡರ, ಸದಸ್ಯರಾದ ಕುಮಾರ ವಡ್ಡರ, ಹಾಗೂ ಪೌಂಡೇನ್ ಅಧ್ಯಕ್ಷ ಹಣಮಂತ ಬೆಳಗಲ್ಲ, ಉಪಾಧ್ಯಕ್ಷ ಹಣಮಂತ ಭೈರವಾಡಗಿ, ಸದಸ್ಯರುಗಳಾದ ಮಲ್ಲಣ್ಣ ಚೌಧರಿ, ಬುಡ್ಡಾ ನಿಡಗುಂದಿ, ಯಲ್ಲಪ್ಪ ವಡ್ಡರ ಸೇರಿದಂತೆ ಮತ್ತೀತರರು ಇದ್ದರು.

Read More

ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮೇ.೨೧ ರಂದು ಬೆಳಿಗ್ಗೆ ೧೧ ಗಂಟೆಯಿಂದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ವಿನಾ ಕಾರಣ ವಿಳಂಬ, ಲಂಚಕ್ಕೆ ಬೇಡಿಕೆ, ಕಳಪೆ ಕಾಮಗಾರಿ, ಸರ್ಕಾರಿ ಹಣದ ದುರುಪಯೋಗ, ಅಕ್ರಮ ಆಸ್ತಿ ಸಂಪಾದನೆ, ಸೇರಿದಂತೆ ಇತರ ದೂರುಗಳನ್ನು ಸೂಕ್ತ ಸಾಕ್ಷಾಧಾರಗಳ ಸಮೇತ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು.ನಿಮ್ಮ ದೂರು ಲೋಕಾಯುಕ್ತ ಅಧಿನಿಯಮದ ದೂರು ಅರ್ಜಿ ನಮೂನೆ-೧ ಮತ್ತು ೨ ರಲ್ಲಿ ಭರ್ತಿ ಮಾಡಿ ನೋಟರಿಯವರಿಂದ ಅಫಿಡವಿಟ್ ಮಾಡಿಸಿ ಜೊತೆಗೆ ದೂರಿನ ಕುರಿತು ಸಾರಾಂಶವುಳ್ಳ ಪ್ರತಿಯನ್ನು ಟೈಪ್ ಮಾಡಿಸಿ ಇಲ್ಲವೇ ಕೈಬರಹದಲ್ಲಿಯೂ ಕೊಡಬಹುದು.

Read More

“ದಿನಕ್ಕೊಂದು ಕಥೆ” ಕೃಪೆ: ಜಯಶ್ರೀ ಅಬ್ಬಿಗೇರಿಸಂಗ್ರಹ :ವೀರೇಶ್ ಅರಸಿಕೆರೆ ಅಣ್ಣ-ತಂಗಿ ನಡುವಿನ ಜಗಳ ತಾರಕಕ್ಕೇರಿ, ತಂಗಿಯ ಗೊಂಬೆಯನ್ನು ಅಣ್ಣ ಒಡೆದುಹಾಕಿದ. ಅದಕ್ಕೆ ತಾಯಿ ಗದರಿದಳು. ತಂಗಿಯೆದುರು ಅವಮಾನವಾಯಿತೆಂದು ಭಾವಿಸಿದ ಮಗ ತಾಯಿಗೇ ಎದುರುತ್ತರ ನೀಡಿದ, ಬಿರುನುಡಿಗಳನ್ನಾಡಿದ. ಆವೇಶದಲ್ಲಿ ಮನೆಬಿಟ್ಟು ಊರಾಚೆಯ ಬೆಟ್ಟದ ಬಳಿ ಬಂದ. ಅಮ್ಮನ ಗದರಿಕೆಯನ್ನು ಮನದಲ್ಲಿಟ್ಟುಕೊಂಡು ‘ನಾನು ನಿನ್ನನ್ನು ದ್ವೇಷಿಸುತ್ತೇನೆ’ ಎಂದು ಜೋರಾಗಿ ಕಿರುಚಿದ. ಕ್ಷಣಾರ್ಧದಲ್ಲೇ ‘ನಾನು ನಿನ್ನನ್ನು ದ್ವೇಷಿಸುತ್ತೇನೆ’ ಎಂಬ ಮಾರ್ನಡಿ ಅವನ ಕಿವಿಗಪ್ಪಳಿಸಿತು. ಬಾಲಕನಿಗೆ ಭಯವಾಗಿ ಮನೆಗೆ ಓಡಿಬಂದು ಅಮ್ಮನ ಮಡಿಲಗೂಡಲ್ಲಿ ಗುಬ್ಬಚ್ಚಿಯಾದ, ಬಿಕ್ಕಳಿಸಿ ಅಳಲು ಪ್ರಾರಂಭಿಸಿದ. ಅಮ್ಮ ಮಗನ ತಲೆ ನೇವರಿಸುತ್ತ ಕಾರಣ ಕೇಳಲಾಗಿ, ‘ಬೆಟ್ಟದ ಬಳಿ ಯಾರೋ ಕೆಟ್ಟ ಬಾಲಕ ನನ್ನನ್ನು ದ್ವೇಷಿಸುವುದಾಗಿ ಗರ್ಜಿಸಿದ’ ಎಂದು ಹೇಳಿದ. ಅನುಭವಿ ಅಮ್ಮನಿಗೆ ಎಲ್ಲ ಅರ್ಥವಾಗಿ, ‘ಮಗೂ, ಬೆಟ್ಟದ ಬಳಿ ಇನ್ನೊಮ್ಮೆ ಹೋಗಿ ‘ನಾನು ನಿನ್ನನ್ನು ಪ್ರೀತಿಸುವೆ’ ಎಂದು ಜೋರಾಗಿ ಕೂಗು’ ಎಂದು ಸಮಾಧಾನ ಮಾಡಿ ಕಳಿಸಿದಳು. ಬಾಲಕ ಹಾಗೇ ಮಾಡಿದಾಗ, ‘ನಾನು ನಿನ್ನನ್ನು ಪ್ರೀತಿಸುವೆ’…

Read More

ವಿಜಯಪುರ: ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಅರ್ಹ ರೈತರಿಗೆ ಗರಿಷ್ಠ ರೂ. ೨ಲಕ್ಷ ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರದ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಈವರೆಗೆ ಜಿಲ್ಲೆಯ ೨,೫೯,೦೬೩ ರೈತರ ಖಾತೆಗಳಿಗೆ ೩೬೦೧೦.೨೦ ಲಕ್ಷ ರೂ. ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾದ ಬಗ್ಗೆ ಪರಿಹಾರ ಜಾಲತಾಣವಾದ hಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/ seಡಿviಛಿe೯೨/ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲೆಯ ಒಟ್ಟು ೧೮,೭೨೭ ಫಲಾನುಭವಿ ರೈತರಿಗೆ ಪರಿಹಾರ ಧನವು ಜಮೆಯಾಗಿರುವುದಿಲ್ಲ. ಇಂತಹ ರೈತರಿಗೆ ತಿಳುವಳಿಕೆ ನೀಡಿ, ಅವಶ್ಯಕ ದಾಖಲೆಗಳನ್ನು ಪಡೆದು, ಪರಿಹಾರ ಧನ ಜಮೆ ಮಾಡಲು ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದ್ದು, ಆದಷ್ಟು ಬೇಗನೆ ಬಾಕಿ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ. ಬೆಳೆಹಾನಿ ಪರಿಹಾರ ಧನ ಜಮೆ…

Read More

ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ರೈತರಿಗೆ ಬೆಳೆ ವಿಮೆ, ತೊಗರಿ ನೆಟೆ ರೋಗ, ಬರಗಾಲ ಪರಿಹಾರ ನೀಡುವುದು, ಜಮೀನುಗಳಿಗೆ ಸುಗಮ ದಾರಿ, ವೃದ್ಧರ ಪಿಂಚಣಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಬಾರದೆ ಹಾನಿಗೊಳಗಾದ ರೈತರಿಗೆ ರಾಜ್ಯ ಹಾಗೂ ಕೇಂದ್ರದಿಂದ ಪ್ರತಿ ಹೆಕ್ಟರಿಗೆ ೮೫೦೦ ರೂ. ಹಾಗೂ ೮೫೦೦ ರೂ. ರಂತೆ ಒಟ್ಟು ೧೭೦೦೦ ರೂ. ಪರಿಹಾರ ನೀಡಬೇಕಾಗಿತ್ತು. ಆದರೆ ರಾಜ್ಯಸರ್ಕಾರ ಮಾತ್ರ ಕೇಂದ್ರದ ಹಣದಲ್ಲಿ ೨೦೦೦ ರೂ. ಮುರಿದು ಹೆಕ್ಟರ್‌ಗೆ ೬೫೦೦ ರೂ. ನೀಡುತ್ತಿದೆ. ತೊಗರಿ ನೆಟೆರೋಗದ ಪರಿಹಾರ ಕೇವಲ ೪೨೦೦ ರೂ.ನೀಡಿದ್ದು ಉಳಿದ ಬಾಕಿ ಹಣ ನೀಡಬೇಕಾಗಿದೆ…

Read More