ಚಡಚಣ: ಇದೇ ೨೨ರಿಂದ ಮೇ ೨೪ ರ ಶುಕ್ರವಾರದವರೆಗೆ ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರಾ, ಮಹಾದ್ವಾರ ಕಳಸಾರೋಹಣ ಹಾಗೂ ಸುಮಂಗಲೆಯರ ಕುಂಭ ಮೇಳದೊಂದಿಗೆ ಕಾಶೀ ಜಗದ್ಗುರುಗಳ ಸಾರೋಟ ಉತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬುಧವಾರ ಬೆಳಗ್ಗೆ ೧೦ ಗಂಟೆಗೆ ಟ್ರ್ಯಾಕ್ಟರ್ ಟ್ರೇಲರ್ ಎಳೆಯುವ ಸ್ಪರ್ಧೆ ನಡೆಯಲಿದೆ. ಸಾಯಂಕಾಲ ೦೬ ಗಂಟೆಗೆ ನಂದಿಧ್ವಜ ಮೆರವಣಿಗೆಯು ಕೃಷ್ಣಪ್ಪ ಹೂಗಾರರವರ ಮನೆಯಿಂದ ವಿವಿಧ ವಾದ್ಯವೈಭವಗಳೊಂದಿಗೆ ಹೋರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ತಲುಪುವುದು. ನಂತರ ರಾತ್ರಿ ೦೯ ಗಂಟೆಗೆ ಚಿತ್ರ ವಿಚಿತ್ರವಾದ ಮದ್ದು ಸುಡುವುದು. ರಾತ್ರಿ ೧೦ ಗಂಟೆಗೆ ಪ್ರಸಾದ ಕಡಾಯಿಗೆ ನೀರು ಹಾಕುವ ಕಾರ್ಯಕ್ರಮ ಜರುಗುವುದು.
ಗುರುವಾರ ನಸುಕಿನ ಜಾವ ೦೫ ಗಂಟೆಗೆ ಶ್ರೀ ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಭಕ್ತರಿಂದ ದೀರ್ಘದಂಡ ನಮಸ್ಕಾರವು ನಡೆಯಲಿದೆ. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆ. ಮುಂಜಾನೆ ೧೦:೩೦ ಕಾಶೀ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರ ಸುಮಂಗಲೆಯರ ಕುಂಭ ಮೇಳದೊಂದಿಗೆ ಸಾರೋಟ ಉತ್ಸವದೊಂದಿಗೆ ಪುರ ಪ್ರವೇಶ. ನಂತರ ಜಗದ್ಗುರುಗಳ ಅಮೃತ ಹಸ್ತದಿಂದ ಮಹಾದ್ವಾರ ಕಳಸಾರೋಹಣ ಕಾರ್ಯಕ್ರಮ ಜರುಗುವುದು. ರಾತ್ರಿ ೦೯ ಗಂಟೆಗೆ ಜೈ ಹನುಮಾನ ಹರದೇಶಿ ಗೀಗೀ ಮದಗಳ ಕಲಾಮೇಳ ಕೆಂಭಾವಿ ಸುರೇಶ ಹಂಗರಗಿ ಹಾಗೂ ಸಂಗಡಿಗರು ಮತ್ತು ಶ್ರೀ ಗೌರಿಶಂಕರ ಗೀಗೀ ಕಲಾಮೇಳ ಮಸಬಿನಾಳದ ವಿದ್ಯಾಶ್ರೀ ಮಸಬಿನಾಳ ಇವರುಗಳ ನೇತೃತ್ವದಲ್ಲಿ ಸುಪ್ರಸಿದ್ಧ ಗೀಗೀ ಪದಗಳು ಜರುಗುವವು.
ಶುಕ್ರವಾರದಂದು ಬೆಳಗ್ಗೆ ೬ ಗಂಟೆಗೆ ಭಕ್ತರಿಂದ ಸಕ್ಕರೆ – ಬೆಲ್ಲ ಹಂಚುವ ಕಾರ್ಯಕ್ರಮ ಮತ್ತು ಮುಂಜಾನೆ ೦೭ ಗಂಟೆಗೆ ವಿವಿಧ ವಾದ್ಯವೈಭವಗಳೊಂದಿಗೆ ಶ್ರೀ ರೇವಣಸಿದ್ದೇಶ್ವರರ ಪಲ್ಲಕ್ಕಿ ಸಬೀನ ತಿರುಗುವುದು. ಸಾಯಂಕಾಲ ೦೪ ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ಜರುಗುವುದು. ರಾತ್ರಿ ೯ ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘ ರೆಬಿನಾಳದ ಶ್ರೀಶೈಲ ಅಂಗಡಿಯವರ ನಿರ್ದೇಶನದಲ್ಲಿ ‘ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ಎಂಬ ಭಕ್ತಿಮಯ ಸುಂದರ ನಾಟಕ ಜರುಗುವುದು.
Subscribe to Updates
Get the latest creative news from FooBar about art, design and business.
Related Posts
Add A Comment

