ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮೇ.೨೧ ರಂದು ಬೆಳಿಗ್ಗೆ ೧೧ ಗಂಟೆಯಿಂದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ವಿನಾ ಕಾರಣ ವಿಳಂಬ, ಲಂಚಕ್ಕೆ ಬೇಡಿಕೆ, ಕಳಪೆ ಕಾಮಗಾರಿ, ಸರ್ಕಾರಿ ಹಣದ ದುರುಪಯೋಗ, ಅಕ್ರಮ ಆಸ್ತಿ ಸಂಪಾದನೆ, ಸೇರಿದಂತೆ ಇತರ ದೂರುಗಳನ್ನು ಸೂಕ್ತ ಸಾಕ್ಷಾಧಾರಗಳ ಸಮೇತ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು.
ನಿಮ್ಮ ದೂರು ಲೋಕಾಯುಕ್ತ ಅಧಿನಿಯಮದ ದೂರು ಅರ್ಜಿ ನಮೂನೆ-೧ ಮತ್ತು ೨ ರಲ್ಲಿ ಭರ್ತಿ ಮಾಡಿ ನೋಟರಿಯವರಿಂದ ಅಫಿಡವಿಟ್ ಮಾಡಿಸಿ ಜೊತೆಗೆ ದೂರಿನ ಕುರಿತು ಸಾರಾಂಶವುಳ್ಳ ಪ್ರತಿಯನ್ನು ಟೈಪ್ ಮಾಡಿಸಿ ಇಲ್ಲವೇ ಕೈಬರಹದಲ್ಲಿಯೂ ಕೊಡಬಹುದು.
Subscribe to Updates
Get the latest creative news from FooBar about art, design and business.
Related Posts
Add A Comment
