ವಿಜಯಪುರ: ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಅರ್ಹ ರೈತರಿಗೆ ಗರಿಷ್ಠ ರೂ. ೨ಲಕ್ಷ ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರದ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಈವರೆಗೆ ಜಿಲ್ಲೆಯ ೨,೫೯,೦೬೩ ರೈತರ ಖಾತೆಗಳಿಗೆ ೩೬೦೧೦.೨೦ ಲಕ್ಷ ರೂ. ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾದ ಬಗ್ಗೆ ಪರಿಹಾರ ಜಾಲತಾಣವಾದ hಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/ seಡಿviಛಿe೯೨/ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲೆಯ ಒಟ್ಟು ೧೮,೭೨೭ ಫಲಾನುಭವಿ ರೈತರಿಗೆ ಪರಿಹಾರ ಧನವು ಜಮೆಯಾಗಿರುವುದಿಲ್ಲ. ಇಂತಹ ರೈತರಿಗೆ ತಿಳುವಳಿಕೆ ನೀಡಿ, ಅವಶ್ಯಕ ದಾಖಲೆಗಳನ್ನು ಪಡೆದು, ಪರಿಹಾರ ಧನ ಜಮೆ ಮಾಡಲು ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದ್ದು, ಆದಷ್ಟು ಬೇಗನೆ ಬಾಕಿ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ. ಬೆಳೆಹಾನಿ ಪರಿಹಾರ ಧನ ಜಮೆ ಕುರಿತು ಫಲಾನುಭವಿಗಳಿಗೆ ಮಾಹಿತಿ ಒದಗಿಸಲು ತಾಲೂಕಾವಾರು ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ.
ತಾಲೂಕಾವಾರು ವಿವರ : ಜಿಲ್ಲೆಯ ಆಲಮೇಲ ತಾಲೂಕಿನ ೧೯೨೯೫ ಫಲಾನುಭವಿಗಳ ಪೈಕಿ ೧೮,೧೮೬ ರೈತರ ಖಾತೆಗೆ ೩೫೪೫.೨೪ ಲಕ್ಷ ರೂ., ಬಬಲೇಶ್ವರ ತಾಲೂಕಿನ ೨೦೦೨೦ ಫಲಾನುಭವಿಗಳ ಪೈಕಿ ೧೯,೨೯೪ ರೈತರ ಖಾತೆಗೆ ೩೧೩೬.೦೨ ಲಕ್ಷ ರೂ. ಬಸವನಬಾಗೇವಾಡಿ ತಾಲೂಕಿನ ೨೭೧೭೪ ಫಲಾನುಭವಿಗಳ ಪೈಕಿ ೨೫೩೦೭ ರೈತರ ಖಾತೆಗೆ ೩೩೪೬.೮೪ಲಕ್ಷ ರೂ. ಬಿಜಾಪುರ ತಾಲೂಕಿನ ೧೮೯೧೨ ಫಲಾನುಭವಿಗಳ ಪೈಕಿ ೧೭೭೪೩ ರೈತರ ಖಾತೆಗೆ ೨೩೮೮.೪೯ ಲಕ್ಷ ರೂ. ಚಡಚಣ ತಾಲೂಕಿನ ೧೯೮೪೦ ಫಲಾನುಭವಿಗಳ ಪೈಕಿ ೧೮೪೦೯ ರೈತರ ಖಾತೆಗೆ ೨೪೯೭.೩ ಲಕ್ಷ ರೂ. ದೇವರಹಿಪ್ಪರಗಿ ತಾಲೂಕಿನ ೨೧೦೮೮ ಫಲಾನುಭವಿಗಳ ಪೈಕಿ ೧೯೪೫೨ ರೈತರ ಖಾತೆಗೆ ೨೨೯೫.೭೭ ಲಕ್ಷ ರೂ. ಇಂಡಿ ತಾಲೂಕಿನ ೪೫೫೪೨ ಫಲಾನುಭವಿಗಳ ಪೈಕಿ ೪೨೩೨೦ ರೈತರ ಖಾತೆಗೆ ೬೪೭೧.೯೭ ಲಕ್ಷ ರೂ. ಕೊಲ್ಹಾರ ತಾಲೂಕಿನ ೧೦೩೩೬ ಫಲಾನುಭವಿಗಳ ಪೈಕಿ ೯೭೮೩ ರೈತರ ಖಾತೆಗೆ ೧೯೧೯.೦೩ ಲಕ್ಷ ರೂ. ಮುದ್ದೇಬಿಹಾಳ ತಾಲೂಕಿನ ೨೧೮೬೦ ಫಲಾನುಭವಿಗಳ ಪೈಕಿ ೨೦೦೩೫ ರೈತರ ಖಾತೆಗೆ ೨೫೬೯.೧೭ ಲಕ್ಷ ರೂ. ನಿಡಗುಂದಿ ತಾಲೂಕಿನ ೭೭೮೫ ಫಲಾನುಭವಿಗಳ ಪೈಕಿ ೭೨೪೬ ರೈತರ ಖಾತೆಗೆ ೧೧೫೮.೮೩ಲಕ್ಷ ರೂ. ಸಿಂದಗಿ ತಾಲೂಕಿನ ೨೫೨೦೩ ಫಲಾನುಭವಿಗಳ ಪೈಕಿ ೨೩೩೨೪ ರೈತರ ಖಾತೆಗೆ ೩೩೮೭.೨೪ ಲಕ್ಷ ರೂ. ತಾಳಿಕೋಟೆ ತಾಲೂಕಿನ ೨೦೫೧೬ ಫಲಾನುಭವಿಗಳ ಪೈಕಿ ೧೯,೪೩೮ ರೈತರ ಖಾತೆಗೆ ೨೧೪೭.೩೪ ಲಕ್ಷ ರೂ. ತಿಕೋಟಾ ತಾಲೂಕಿನ ೧೦೧೪೯ ಫಲಾನುಭವಿಗಳ ಪೈಕಿ ೯೫೨೬ ರೈತರ ಖಾತೆಗೆ ೧೧೪೬.೯೬ ಲಕ್ಷ ರೂ. ಜಮೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಬೆಳೆ ಪರಿಹಾರ: ೨,೫೯,೦೬೩ ರೈತರ ಖಾತೆಗಳಿಗೆ ೩೬೦೧೦ ಲಕ್ಷರೂ. ಜಮೆ
Related Posts
Add A Comment

