ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ರೈತರಿಗೆ ಬೆಳೆ ವಿಮೆ, ತೊಗರಿ ನೆಟೆ ರೋಗ, ಬರಗಾಲ ಪರಿಹಾರ ನೀಡುವುದು, ಜಮೀನುಗಳಿಗೆ ಸುಗಮ ದಾರಿ, ವೃದ್ಧರ ಪಿಂಚಣಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ಬಾರದೆ ಹಾನಿಗೊಳಗಾದ ರೈತರಿಗೆ ರಾಜ್ಯ ಹಾಗೂ ಕೇಂದ್ರದಿಂದ ಪ್ರತಿ ಹೆಕ್ಟರಿಗೆ ೮೫೦೦ ರೂ. ಹಾಗೂ ೮೫೦೦ ರೂ. ರಂತೆ ಒಟ್ಟು ೧೭೦೦೦ ರೂ. ಪರಿಹಾರ ನೀಡಬೇಕಾಗಿತ್ತು. ಆದರೆ ರಾಜ್ಯಸರ್ಕಾರ ಮಾತ್ರ ಕೇಂದ್ರದ ಹಣದಲ್ಲಿ ೨೦೦೦ ರೂ. ಮುರಿದು ಹೆಕ್ಟರ್‌ಗೆ ೬೫೦೦ ರೂ. ನೀಡುತ್ತಿದೆ. ತೊಗರಿ ನೆಟೆರೋಗದ ಪರಿಹಾರ ಕೇವಲ ೪೨೦೦ ರೂ.ನೀಡಿದ್ದು ಉಳಿದ ಬಾಕಿ ಹಣ ನೀಡಬೇಕಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, ಫಸಲು ಭೀಮಾಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ತಾಲ್ಲೂಕು ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಸಿ.ಎಸ್.ಪ್ಯಾಟಿ, ಅಪ್ಪಾಸಾಹೇಬ ಹರವಾಳ (ಮಣೂರ), ಚನ್ನಪ್ಪ ಕಾರಜೋಳ(ನಿವಾಳಖೇಡ), ಸುನಂದಾ ಸೊನ್ನಳ್ಳಿ ಮಾತನಾಡಿ, ರೈತರ ಜಮೀನುಗಳ ರಸ್ತೆಯಲ್ಲಿ ಕಂಟಿ ಕಡೆಸಿ ಸುಗಮಗೊಳಿಸುವುದು, ವೃದ್ಧರ ಪಿಂಚಣಿ ಸರಿಯಾಗಿ ಬರಲು ಕ್ರಮವಹಿಸುವುದು, ನಿಂಬೆಗೆ ಬೆಂಬಲ ಬೆಲೆ ದೊರಕಿಸುವುದು ಹಾಗೂ ಹಳ್ಳಗಳಿಗೆ ನೀರು ಹರಿಸಲು ಕ್ರಮವಹಿಸುವ ಕುರಿತು ಆಗ್ರಹಿಸಿ ನಂತರ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಈರಪ್ಪ ಕುಳೇಕುಮಟಗಿ, ಮಲ್ಲನಗೌಡ ಬಿರಾದಾರ, ರುದ್ರಯ್ಯ ಹಿರೇಮಠ, ಬಾಬು ಬಾಗವಾನ, ಶಂಕರಗೌಡ ಹೊಸಗೌಡರ, ಶಕೀರಾ ಹೆಬ್ಬಾಳ, ಸಾಯಬ್ಬಿ ತಾಂಬೋಳಿ, ಜಾಯಿದಾ ಕೋರಬು, ವಿಠ್ಠಲ ಮರಾಠೆ, ಅಶೋಕ ನಾಯ್ಕೋಡಿ, ನೀಲು ಚವ್ಹಾಣ, ಸುಭಾಸ ಸಜ್ಜನ, ರಾಮು ಮೆಟಗಾರ, ಬಶೀರ್‌ಅಹ್ಮದ್ ಯಲಗಾರ, ರೂಪಸಿಂಗ್ ರಾಠೋಡ, ಮಾಳಪ್ಪ ಮೆಟಗಾರ, ಭೀಮರಾಯ ಕಲಕೇರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

