Author: editor.udayarashmi@gmail.com

ಮುತ್ತಗಿ: ಮುಕ್ತ ಕ್ಷೇತ್ರ, ಅಶ್ವತ್ಥಾವಿರ್ಭಾವ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವವು ದಿನಾಂಕ ೯ ರಿಂದ ಅವ್ಯಾಹತವಾಗಿ ಯಶಸ್ವಿ ರೀತಿಯಲ್ಲಿ ಸಾಗುತ್ತಿದೆ ಎಂದು ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ತಿಳಿಸಿದ್ದಾರೆ.ಇಂದು ಚತುರ್ದಸಿಯ ದಿನವಾದ ಇಂದು ಶ್ರೀ ಲಕ್ಷ್ಮೀ ನರಸಿಂಹ ದೇವರ ಪೂಜಾಲಂಕಾರವನ್ನು ಪಂ. ನರಹರಿಆಚಾರ್ಯ ಜೋಶಿ ಅವರು ನೆರವೇರಿಸಿದ್ದರು.ಪ್ರತಿ ನಿತ್ಯ ಅಭಿಷೇಕ, ಪಾಠ-ಪ್ರವಚನ, ನೈವೆದ್ಯ, ಮಹಾಮಂಗಳಾರತಿ ಹಾಗೂ ಪ್ರತಿನಿತ್ಯ ಭಕ್ತಾದಿಗಳಿಂದ ಅನ್ನ ಸಂತರ್ಪಣೆ ನಡೆಯಲಿದೆ. ೯ರಂದು ವಿ.ಪಿ.ಕಟ್ಟಿ & ಆರ್.ಪಿ.ಕಟ್ಟಿ, ೧೦ ರಂದು ಪಿ.ಎನ್.ಕುಲಕರ್ಣಿ, ೧೧ ರಂದು ಮದ್ವೇಶ ಕುಲಕರ್ಣಿ, ವಿನೋದ ಕುಲಕರ್ಣಿ, ೧೨ ರಂದು ಬಿ.ಎಚ್. ಸಾವಳಗಿ ಮತ್ತು ಕುಲಕರ್ಣಿ ಬಂದುಗಳಿಂದ, ೧೩ ರಂದು ಡಿ.ಎಸ್.ದೇಶಪಾಂಡೆ ಸಹೋದರರಿಂದ, ೧೪ ಪಿ.ಜೆ.ದೇಶಪಾಂಡೆ ಹಾಗೂ ಎ.ಜೆ ದೇಶಪಾಂಡೆ, ೧೫ರಂದು ಆರ್.ಎಸ್ & ಕೆ.ಎಸ್ ಕುಲಕರ್ಣಿ, ಸಮೀರ ಚಿಕ್ಕೋಡಿ ಅವರಿಂದ, ೧೬ ರಂದು ಪಿ.ಎಚ್.ಢಾಣಕಶಿರೂರ, ಡಾ.ರಂಗನಾಥ ಹರಪನಳ್ಳಿ, ೧೭ ರಂದು ಆರ್.ಎ.ಚೌದರಿ, ೧೮ ರಂದು ಕಿರಣ ಚೌಧರಿ, ೧೯…

Read More

ವಿಜಯಪುರ: ಕೆರೆಗೆ ನೀರು ತುಂಬುವ ಯೋಜನೆಯಡಿ ಜಂಬಗಿ, ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಪ್ರತಿವರ್ಷ ತುಂಬಬೇಕು ಮತ್ತು ಈ ಎಲ್ಲಾ ಕೆರೆಗಳನ್ನು ಇಲಾಖೆಯ ಸುಪರ್ದಿಗೆ ಪಡೆದು ಅಭಿವೃದ್ಧಿ ಪಡೆಸಿ, ನಷ್ಟಗೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಳೆದ ೭ ದಿನಗಳಿಂದ ಜಂಬಗಿ ಕೆರೆಯಲ್ಲಿ ಅನಿರ್ದಿಷ್ಟ ಹೋರಾಟ ಮಾಡುತ್ತಿರುವ ರೈತರೆಲ್ಲರು ಕೂಡಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ನೀರು ತುಂಬಿಸುವವರೆಗೂ ಹೋರಾಟ ಜಿಲ್ಲಾಧೀಕಾರಿಗಳ ಕಚೇರಿಯಲ್ಲಿಯೇ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸುಮಾರು ೩ ಘಂಟೆಗಳ ಕಾಲ ಜಿಲ್ಲಾಡಳಿತದ ವಿರುದ್ಧ ಘೋಷಣೆ ಹಾಕುತ್ತಾ ಕುಳಿತುಕೊಂಡರು.ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಜಂಬಗಿ ಕೆರೆಯೂ ಕೆರೆ ನೀರು ತುಂಬುವ ಯೋಜನೆಯಡಿ ಇದ್ದು, ಇಲ್ಲಿಯವರೆಗೂ ಒಮ್ಮೆಯೂ ತುಂಬಿಸಿರುವುದಿಲ್ಲ, ಹಾಗೆ ಉಳಿದಂತೆ ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಕೆರೆ ನೀರು ತುಂಬುವ ಯೋಜನೆಯಡಿ ಸೇರಿಸಬೇಕು, ಅವುಗಳನ್ನು ಪ್ರತಿವರ್ಷ ಬೇಸಿಗೆಯಲ್ಲಿ ನೀರು ತುಂಬಿಸಬೇಕು ಎಂದರು.ಈ ವೇಳೆ…

Read More

ಕಾಲೇಜುಗಳಲ್ಲಿ ರೋಸ್ಟರ ಪ್ರಕಾರ ಪ್ರವೇಶ ವಿವರಕ್ಕೆ ದವಿಪ ಆಗ್ರಹ ವಿಜಯಪುರ: ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರವೇಶ ಪ್ರಾಂರಭವಾಗಿದ್ದು, ಬಹುತೇಕ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆದ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರದರ್ಶನ ಮಾಡದೇ ಈಗಾಗಲೇ ಪ್ರವೇಶ ಮುಕ್ತಾಯವಾಗಿವೆ, ಸೀಟ್ ಭರ್ತಿಯಾಗಿವೆ ಎಂಬ ಸಿದ್ದ ಉತ್ತರವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸದೆ ಶಿಕ್ಷಣವನ್ನು ವ್ಯಾಪಾರೀಕರಣ ಮಡಿಕೊಂಡಂತೆ ವರ್ತಿಸುತ್ತಿದ್ದಾರೆ. ಇಲಾಖೆಯ ನಿಯಮಾನುಸಾರ ರೋಸ್ಟರ್ ಪಾಲಿಸದೆ. ನಿಯಮ ಮೀರಿ ಬೇಕಾಬಿಟ್ಟಿಯಾಗಿ ಡೊನೇಷನ್ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ…

Read More

ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಸಿಬ್ಬಂದಿಗಳಿಗೆ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಅವರ 40 ನೇ ಜನ್ಮ ದಿನದಂಗವಾಗಿ ಕರವೇ ಕಾರ್ಯಕರ್ತರು ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಮಡುಗೌಡ ಭಾವಿಕಟ್ಟಿ, ಬಾಲಚಂದ್ರ ಮಾಕೊಂಡ, ಬಸವರಾಜ ಹೂಗಾರ, ರವಿ ವಡ್ಡರ, ಪ್ರಕಾಶ ಡೋಣೂರ, ಹಣಮಂತ ಟಕ್ಕಳಕಿ, ಚಂದ್ರಶೇಖರ ಕುಂಬಾರ, ಅಶೋಕ ನಾಟೀಕಾರ, ಮುತ್ತಪ್ಪ ಬೇಲಿ, ಶಿವು ಬೇವಿನಗಿಡದ, ಸೋಮು ಶರಣದ ಇತರರು ಇದ್ದರು.

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಚಭಾಷಾ ಪಂಡಿತರಾಗಿದ್ದ ಲಿಂ.೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೧ ನೇ ಜಾತ್ರಾಮಹೋತ್ಸವದಂಗವಾಗಿ ಮೇ. ೨೩ ರಿಂದ ರೋಣ ತಾಲೂಕಿನ ಹೊನ್ನಿಗನೂರಿನ ವಿರುಪಾಕ್ಷ ಶಾಸ್ತ್ರೀ ಅವರಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣವನ್ನು ಪ್ರತಿನಿತ್ಯ ಸಂಜೆ ೭ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮೇ. ೨೩ ರಂದು ಸಂಜೆ ೭ ಗಂಟೆಗೆ ಪುರಾಣ ಪ್ರಾರಂಭೋತ್ಸವದ ಸಾನಿಧ್ಯವನ್ನು ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ವಹಿಸುವರು. ಮನಗೂಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಪುರಾಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Read More

ಇಂಡಿ : ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ನಲ್ಲಿ ಕೆಲವೇ ಸೀಟುಗಳು ಲಭ್ಯವಿವೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. 2024 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು,ಡಿಪ್ಲೋಮಾ ಇನ್ ಹೆಲ್ಲ ಇನ್ಸಪೆಕ್ಟರ ಕೋರ್ಸ್ ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ (DMLT- Diploma in Lab Technician Course) ಪ್ರವೇಶಗಳಿವೆ. ಅಲ್ಲದೇ, SSLC Pass /PUC Fail ಆಧವರಿಗೆ 3 ವರ್ಷ ಈ ಕೋರ್ಸ್ ಗಳು ಕಲಿಯಬೇಕು. ತದನಂತರ 100 ಕ್ಕೆ 100 ರಷ್ಟು ಸರಕಾರಿ/ಅರೆ ಸರಕಾರಿ ಉದ್ಯೋಗ ಖಚಿತವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ಕೆಂಬೋಗಿ ತಿಳಿಸಿದ್ದಾರೆ. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997,9449213039 ಸಂಪರ್ಕಿಸಬಹುದು ಎಂದರು.

Read More

ಸಿಂದಗಿ: ಬದುಕಿನಲ್ಲಿ ಕಣ್ಣು ಅತ್ಯಮೂಲ್ಯ. ಕಾಲ ಕಾಲಕ್ಕೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದರೆ ಕಾಳಜಿ ಬಹಳ ಮುಖ್ಯ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಲಿಂ.ಶ್ರೀ ಚನ್ನವೀರ ಸ್ವಾಮೀಜಿಗಳ ೩೩ನೆಯ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಸಿಂದಗಿ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ, ವಿಜಯಪುರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿ.ಪಿ.ಪೋರವಾಲ್ ಪದವಿ ಮಹಾವಿದ್ಯಾಲಯ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತನ್ನು ನೋಡಿ ಸಂತೋಷ ಪಡಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಸೇವೆ ಅನನ್ಯವಾದದ್ದು. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದ ಬದಲಾವಣೆಗೆ ಈ ಸಂಸ್ಥೆಯು ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜನೆ ಮಾಡಿಲಿ ಎಂದು ಶುಭ ಹಾರೈಸಿದರು.ಈ ವೇಳೆ ತಾಲೂಕಿನ ೩೦೦ಕ್ಕೂ ಅಧಿಕ ಜನರು ನೇತ್ರ ತಪಾಸಣೆಯನ್ನು ಮಾಡಿಕೊಂಡರು. ಮತ್ತು ೧೨೦ಕ್ಕೂ ಹೆಚ್ಚು ಜನರಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆಗೆ…

Read More

ವಿಜಯಪುರ : ಹೊರದೇಶದ ಕಾಬೂಲ್ನಲ್ಲಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ, ಇಷ್ಟು ಹಣ ಹಾಕಿದರೆ ನೀವು ಸೇಫ್, ನಿಮ್ಮ ದಾಖಲಾತಿಗಳನ್ನು ಕೂಡಲೇ ಸಲ್ಲಿಸಿ, ನಿಮ್ಮ ವಿದ್ಯಾರ್ಹತೆ ಅನುಗುಣವಾಗಿ ನಿಮಗೆ ನೌಕರಿ ಬಂದಿದೆ, ಕೂಡಲೇ ಡಿಫಾಸಿಟ್ ಅಮೌಂಟ್ ಹಣ ಹಾಕಿ ಎಂದು ದೇಶದಾದ್ಯಂತ ಆನಲೈನ್ ವಂಚನೆ ಜಾಲ ದೇಶದಾದ್ಯಂತ ನಿದ್ದೆಗೆಡಿಸಿದೆ.ವಿಜಯಪುರದ ಖ್ಯಾತ ವೈದ್ಯರೊಬ್ಬರನ್ನು ವಂಚಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಜಿಲ್ಲೆಯ ಪೊಲೀಸರು ಈ ಪ್ರಕರಣ ಬೇಧಿಸುವಲ್ಲಿ ಮಾಡಿದ ತನಿಖೆ ಪರಿಣಾಮವಾಗಿ ದೇಶದಲ್ಲಿ ನಡೆದ ಹಲವಾರು ಪ್ರಕರಣಗಳು ಬೇಧಿತವಾಗಿವೆ.ವಿಜಯಪುರ ಪೊಲೀಸರು ಬಂಧಿಸಿರುವ ಆರೋಪಿಗಳೇ ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿದ ಬಗ್ಗೆ ತಿಳಿದು ಬಂದಿದದ್ದು, ಈ ಆರೋಪಿಗಳು ಅನಾಮಧೆಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ಳಲ್ಲಿ ಸುಮಾರು 170 ಖಾತೆಗಳನ್ನು ತೆರೆದೆ ಜನರಿಗೆ ವಂಚನೆ ಮಾಡಿರುವ ಪ್ರಸಂಗ ಸಹ ಬೆಳಕಿಗೆ ಬಂದಿದೆ, ಆರೋಪಿತರು ಅನಾಮಧೆಯರ ಹೆಸರಿನಲ್ಲಿ ವಿವಿಧ ಕಂಪನಿಯ 120 ಸಿಮ್ ಗಳನ್ನು ಉಪಯೋಗ ಮಾಡಿದ ದೊಡ್ಡ ಜಾಲವೂ ಸಹ ತನಿಖೆ ವೇಳೆ ತಿಳಿದು…

Read More

ಆಲಮಟ್ಟಿ: ಇಲ್ಲಿಯ ಪುರವರ ಹಿರೇಮಠದಶ್ರೀ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರೆ ಮೇ.23 ಗುರುವಾರ ಜರುಗಲಿದೆ.ಜಾತ್ರೆಯ ಅಂಗವಾಗಿ ಬೆಳಿಗ್ಗೆಅನ್ನದಾನೇಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಜರುಗಲಿದೆ.ಬೆಳಿಗ್ಗೆ 8.30 ಕ್ಕೆಷಟ್ಟಸ್ಥಲ ಧ್ವಜಾರೋಹಣವನ್ನು ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಹಾಗೂ ರಾಷ್ಟ್ರ ಧ್ವಜಾರೋಹಣವನ್ನು ಭರತರಾಜ ಅ. ದೇಶಮುಖ ನೆರವೇರಿಸುವರು.ಮಧ್ಯಾಹ್ನ 3.30 ಕ್ಕೆ ಪಲ್ಲಕ್ಕಿ ಉತ್ಸವವು ಆಲಮಟ್ಟಿ ಆರ್.ಎಸ್. ಬಸವಣ್ಣ ದೇವಸ್ಥಾನದಿಂದ ಸಕಲ ವಾದ್ಯ ವೈಭವ ಹಾಗೂ ಬಿರುದಾವಳಿಗಳೊಂದಿಗೆ ಹೊರಟು ಈಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಬಿ.ಎ. ದೇಶಮುಖ (ಗಣಿ) ಅವರ ವಾಡೆಯಲ್ಲಿ ಪೂಜೆಯೊಂದಿಗೆ ಶ್ರೀ ಹನುಮಾನ ಮಂದಿರದಲ್ಲಿ ಪೂಜೆ ನೆರವೇರಿಸಿ, ಆಲಮಟ್ಟಿ ಸರ್ಕಲ್ ಮಾರ್ಗವಾಗಿ ಶ್ರೀಮಠಕ್ಕೆ ಬಂದು ತಲುಪಲಿದೆ.ಧರ್ಮ ಸಭೆ; ಸಂಜೆ 5 ಕ್ಕೆ ನಡೆಯುವ ಧರ್ಮಸಭೆಯಲ್ಲಿ ನಿಡಗುಂದಿಯ ಶ್ರೀ ರುದ್ರಮುನಿ ಸ್ವಾಮೀಜಿ,ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ದಲಿಂಗ ಸ್ವಾಮೀಜಿ, ಕೊಣ್ಣೂರಿನ ವಿಶ್ವಪ್ರಭುದೇವ ಸ್ಚಾಮೀಜಿ, ಬೀಳಗಿಯ ಗುರುಪಾದ ಸ್ಚಾಮೀಜಿಚಿಮ್ಮಲಗಿಯ ಸಿದ್ಧರೇಣುಕ ಸ್ಚಾಮೀಜಿ, ನಂದವಾಡಗಿಯಅಭಿನವ ಚನ್ನಬಸವ ಸ್ಚಾಮೀಜಿ,ಇಟಗಿಯ ಗುರು…

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ಜೀವನವೆನ್ನುವುದು ಏರಿಳಿತಗಳಿಂದ ಕೂಡಿದೆ. ಅದು ಹೀಗೆ ಇರುತ್ತದೆ ಹೀಗೇ ಸಾಗುತ್ತದೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹೀಗಿದ್ದಾಗ್ಯೂ ಕೆಲವರು ಮಾತ್ರ ಏರಿಳಿತಗಳನ್ನು ಲೆಕ್ಕಿಸದೇ ತಾವು ಅಂದುಕೊಂಡಂತೆ ಗೆಲುವನ್ನು ದಾಖಲಿಸಿಯೇ ಬಿಡುತ್ತಾರೆ. ಒಮ್ಮೆಲೇ ಭರ‍್ರನೇ ಬೀಸುವ ಬಿರುಗಾಳಿಯಾಗಲಿ, ಮನಸ್ಸಿಗೆ ಮುದನೀಡುವ ತಂಗಾಳಿಯಾಗಲಿ ಅವರಿಗೆ ಯಾವುದೇ ವ್ಯತ್ಯಾಸ ತರುವುದಿಲ್ಲ. ಅದಕ್ಕೆ ಅವರು ಮೂಗಿನ ಮೇಲೆ ಬೆರಳಿಡುವ, ಅಚ್ಚರಿಯನ್ನು ಮೂಡಿಸುವ ಯಶಸ್ಸಿನ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಸೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವುಗಳಿಂದ ಪಾಠ ಕಲಿಯುತ್ತ ಗೆಲುವಿನ ಮಾರ್ಗದಲ್ಲಿ ನಡೆಯುತ್ತಾರೆ. ಹಾಗಾದರೆ ಗೆಲುವಿನ ಸರದಾರರಿಗೂ ಸೋತು ಸುಣ್ಣವಾಗುವ ವ್ಯಕ್ತಿಗಳಿಗೂ ಇರುವ ವ್ಯತ್ಯಾಸವಾದರೂ ಏನು? ಎನ್ನುವ ಪ್ರಶ್ನೆ ತಲೆಯಲ್ಲಿ ಸುಳಿಯುತ್ತದೆ. ಯಶಸ್ವಿ ವ್ಯಕ್ತಿಗಳು ಮತ್ತು ವಿಫಲ ವ್ಯಕ್ತಿಗಳನ್ನು ಪ್ರತ್ಯೇಕಿಸುವ ಅತ್ಯಂತ ಸ್ಪಷ್ಟವಾದ ಅಂಶಗಳು ಬಹಳಷ್ಟು ಇವೆ. ಅದರಲ್ಲಿ ಸ್ಥಿರತೆಯ ಶಕ್ತಿ ಪ್ರಮುಖವಾದುದು. ಯಶಸ್ವಿ ವ್ಯಕ್ತಿಗಳು ಅಸಾಧಾರಣ ಫಲಿತಾಂಶಗಳನ್ನು ಉಂಟು ಮಾಡಬಲ್ಲರು. ಏಕೆಂದರೆ ಅವರು ತಮ್ಮ…

Read More