ಆಲಮಟ್ಟಿ: ಇಲ್ಲಿಯ ಪುರವರ ಹಿರೇಮಠದ
ಶ್ರೀ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರೆ ಮೇ.23 ಗುರುವಾರ ಜರುಗಲಿದೆ.
ಜಾತ್ರೆಯ ಅಂಗವಾಗಿ ಬೆಳಿಗ್ಗೆ
ಅನ್ನದಾನೇಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಜರುಗಲಿದೆ.
ಬೆಳಿಗ್ಗೆ 8.30 ಕ್ಕೆ
ಷಟ್ಟಸ್ಥಲ ಧ್ವಜಾರೋಹಣವನ್ನು ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಹಾಗೂ ರಾಷ್ಟ್ರ ಧ್ವಜಾರೋಹಣವನ್ನು ಭರತರಾಜ ಅ. ದೇಶಮುಖ ನೆರವೇರಿಸುವರು.
ಮಧ್ಯಾಹ್ನ 3.30 ಕ್ಕೆ ಪಲ್ಲಕ್ಕಿ ಉತ್ಸವವು ಆಲಮಟ್ಟಿ ಆರ್.ಎಸ್. ಬಸವಣ್ಣ ದೇವಸ್ಥಾನದಿಂದ ಸಕಲ ವಾದ್ಯ ವೈಭವ ಹಾಗೂ ಬಿರುದಾವಳಿಗಳೊಂದಿಗೆ ಹೊರಟು ಈಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಬಿ.ಎ. ದೇಶಮುಖ (ಗಣಿ) ಅವರ ವಾಡೆಯಲ್ಲಿ ಪೂಜೆಯೊಂದಿಗೆ ಶ್ರೀ ಹನುಮಾನ ಮಂದಿರದಲ್ಲಿ ಪೂಜೆ ನೆರವೇರಿಸಿ, ಆಲಮಟ್ಟಿ ಸರ್ಕಲ್ ಮಾರ್ಗವಾಗಿ ಶ್ರೀಮಠಕ್ಕೆ ಬಂದು ತಲುಪಲಿದೆ.
ಧರ್ಮ ಸಭೆ; ಸಂಜೆ 5 ಕ್ಕೆ ನಡೆಯುವ ಧರ್ಮಸಭೆಯಲ್ಲಿ ನಿಡಗುಂದಿಯ ಶ್ರೀ ರುದ್ರಮುನಿ ಸ್ವಾಮೀಜಿ,
ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ದಲಿಂಗ ಸ್ವಾಮೀಜಿ, ಕೊಣ್ಣೂರಿನ ವಿಶ್ವಪ್ರಭುದೇವ ಸ್ಚಾಮೀಜಿ, ಬೀಳಗಿಯ ಗುರುಪಾದ ಸ್ಚಾಮೀಜಿ
ಚಿಮ್ಮಲಗಿಯ ಸಿದ್ಧರೇಣುಕ ಸ್ಚಾಮೀಜಿ, ನಂದವಾಡಗಿಯ
ಅಭಿನವ ಚನ್ನಬಸವ ಸ್ಚಾಮೀಜಿ,
ಇಟಗಿಯ ಗುರು ಶಾಂತವೀರ ಶಿವಾಚಾರ್ಯ ಸ್ಚಾಮೀಜಿ, ಕುಂದರಗಿಯ ವೀರಸಂಗಮೇಶ್ವರ ಸ್ವಾಮೀಜಿ, ಹುನಗುಂದದ
ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಲಿದ್ದಾರೆ.
ಶ್ರೀಮಠದ ಪೀಠಾಧಿಪತಿ ಡಾ ರುದ್ರಮುನಿ ಸ್ಚಾಮೀಜಿ ಜಾತ್ರೆಯ ನೇತೃತ್ವ ವಹಿಸಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

