ಸಿಂದಗಿ: ಬದುಕಿನಲ್ಲಿ ಕಣ್ಣು ಅತ್ಯಮೂಲ್ಯ. ಕಾಲ ಕಾಲಕ್ಕೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದರೆ ಕಾಳಜಿ ಬಹಳ ಮುಖ್ಯ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾರಂಗಮಠದಲ್ಲಿ ಲಿಂ.ಶ್ರೀ ಚನ್ನವೀರ ಸ್ವಾಮೀಜಿಗಳ ೩೩ನೆಯ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಸಿಂದಗಿ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ, ವಿಜಯಪುರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿ.ಪಿ.ಪೋರವಾಲ್ ಪದವಿ ಮಹಾವಿದ್ಯಾಲಯ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತನ್ನು ನೋಡಿ ಸಂತೋಷ ಪಡಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಸೇವೆ ಅನನ್ಯವಾದದ್ದು. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದ ಬದಲಾವಣೆಗೆ ಈ ಸಂಸ್ಥೆಯು ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜನೆ ಮಾಡಿಲಿ ಎಂದು ಶುಭ ಹಾರೈಸಿದರು.
ಈ ವೇಳೆ ತಾಲೂಕಿನ ೩೦೦ಕ್ಕೂ ಅಧಿಕ ಜನರು ನೇತ್ರ ತಪಾಸಣೆಯನ್ನು ಮಾಡಿಕೊಂಡರು. ಮತ್ತು ೧೨೦ಕ್ಕೂ ಹೆಚ್ಚು ಜನರಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೊಗಲಾಯಿತು.
ಇದೇ ಸಂದರ್ಭದಲ್ಲಿ ನೇತ್ರಾಧಿಕಾರಿ ದತ್ತಾತ್ರೇಯ ಹೊಸಮಠ, ಸಂಗಮೇಶ ಪಾಟೀಲ, ಡಾ.ಕಾರ್ತಿಕಚಂದ್ರ, ಶ್ರೀಮಠದ ಚನ್ನಬಸವ ಕತ್ತಿ, ಶಿವಕುಮಾರ ಜೋಗುರ, ಭೀಮಾಶಂಕರ ಪಾಸೋಡಿ, ರವಿ ಗೋಲಾ, ವಿರೇಶ ಸ್ಥಾವರಮಠ ಸೇರಿದಂತೆ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

