ಮುತ್ತಗಿ: ಮುಕ್ತ ಕ್ಷೇತ್ರ, ಅಶ್ವತ್ಥಾವಿರ್ಭಾವ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವವು ದಿನಾಂಕ ೯ ರಿಂದ ಅವ್ಯಾಹತವಾಗಿ ಯಶಸ್ವಿ ರೀತಿಯಲ್ಲಿ ಸಾಗುತ್ತಿದೆ ಎಂದು ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ತಿಳಿಸಿದ್ದಾರೆ.
ಇಂದು ಚತುರ್ದಸಿಯ ದಿನವಾದ ಇಂದು ಶ್ರೀ ಲಕ್ಷ್ಮೀ ನರಸಿಂಹ ದೇವರ ಪೂಜಾಲಂಕಾರವನ್ನು ಪಂ. ನರಹರಿಆಚಾರ್ಯ ಜೋಶಿ ಅವರು ನೆರವೇರಿಸಿದ್ದರು.
ಪ್ರತಿ ನಿತ್ಯ ಅಭಿಷೇಕ, ಪಾಠ-ಪ್ರವಚನ, ನೈವೆದ್ಯ, ಮಹಾಮಂಗಳಾರತಿ ಹಾಗೂ ಪ್ರತಿನಿತ್ಯ ಭಕ್ತಾದಿಗಳಿಂದ ಅನ್ನ ಸಂತರ್ಪಣೆ ನಡೆಯಲಿದೆ. ೯ರಂದು ವಿ.ಪಿ.ಕಟ್ಟಿ & ಆರ್.ಪಿ.ಕಟ್ಟಿ, ೧೦ ರಂದು ಪಿ.ಎನ್.ಕುಲಕರ್ಣಿ, ೧೧ ರಂದು ಮದ್ವೇಶ ಕುಲಕರ್ಣಿ, ವಿನೋದ ಕುಲಕರ್ಣಿ, ೧೨ ರಂದು ಬಿ.ಎಚ್. ಸಾವಳಗಿ ಮತ್ತು ಕುಲಕರ್ಣಿ ಬಂದುಗಳಿಂದ, ೧೩ ರಂದು ಡಿ.ಎಸ್.ದೇಶಪಾಂಡೆ ಸಹೋದರರಿಂದ, ೧೪ ಪಿ.ಜೆ.ದೇಶಪಾಂಡೆ ಹಾಗೂ ಎ.ಜೆ ದೇಶಪಾಂಡೆ, ೧೫ರಂದು ಆರ್.ಎಸ್ & ಕೆ.ಎಸ್ ಕುಲಕರ್ಣಿ, ಸಮೀರ ಚಿಕ್ಕೋಡಿ ಅವರಿಂದ, ೧೬ ರಂದು ಪಿ.ಎಚ್.ಢಾಣಕಶಿರೂರ, ಡಾ.ರಂಗನಾಥ ಹರಪನಳ್ಳಿ, ೧೭ ರಂದು ಆರ್.ಎ.ಚೌದರಿ, ೧೮ ರಂದು ಕಿರಣ ಚೌಧರಿ, ೧೯ ರಂದು ಏಕಾದಶಿ ಜಾಗರಣೆ ೨೦ರಂದು ಪೂಜ್ಯ ಅರ್ಚಕ ಸಹೋದರರಿಂದ, ೨೧ರಂದು ನರಗುಂದ ಸಹೋದರರು, ೨೨ ರಂದು ಸಚಿಜೀವ ಕುಲಕರ್ಣಿ ಹಾಗೂ ರಾಘವೇಂದ್ರ ಕುಲಕರ್ಣಿ ಅನ್ನ ಸಂತರ್ಪಣೆ ನಡೆಯುತ್ತಿದೆ. ೨೩ ರಂದು ರಥೋತ್ಸವ ಗುರುರಾಜ ಕುಲಕರ್ಣಿ ಹಾಗೂ ಎ.ಆರ್. ಗಂಡಮಾಲಿ ಅವರಿಂದ ಮತ್ತು ೨೪ ರಂದು ಎ.ಎಸ್. ಗುಡಿ ಮತ್ತು ಸಾರ್ವಜನಿಕ ವಂತಿಕೆಯಲ್ಲಿ ಕಮಿಟಿಯಿಂದ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವವು ನಡೆಯುತ್ತ ಬರುತ್ತಿದೆ.
ಈ ೧೫ ದಿನಗಳ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಲು ಜನಸಾಗರವೇ ಹರಿದುಬರುತ್ತಿದೆ ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
