ವಿಜಯಪುರ: ಕೆರೆಗೆ ನೀರು ತುಂಬುವ ಯೋಜನೆಯಡಿ ಜಂಬಗಿ, ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಪ್ರತಿವರ್ಷ ತುಂಬಬೇಕು ಮತ್ತು ಈ ಎಲ್ಲಾ ಕೆರೆಗಳನ್ನು ಇಲಾಖೆಯ ಸುಪರ್ದಿಗೆ ಪಡೆದು ಅಭಿವೃದ್ಧಿ ಪಡೆಸಿ, ನಷ್ಟಗೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಳೆದ ೭ ದಿನಗಳಿಂದ ಜಂಬಗಿ ಕೆರೆಯಲ್ಲಿ ಅನಿರ್ದಿಷ್ಟ ಹೋರಾಟ ಮಾಡುತ್ತಿರುವ ರೈತರೆಲ್ಲರು ಕೂಡಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ನೀರು ತುಂಬಿಸುವವರೆಗೂ ಹೋರಾಟ ಜಿಲ್ಲಾಧೀಕಾರಿಗಳ ಕಚೇರಿಯಲ್ಲಿಯೇ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸುಮಾರು ೩ ಘಂಟೆಗಳ ಕಾಲ ಜಿಲ್ಲಾಡಳಿತದ ವಿರುದ್ಧ ಘೋಷಣೆ ಹಾಕುತ್ತಾ ಕುಳಿತುಕೊಂಡರು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಜಂಬಗಿ ಕೆರೆಯೂ ಕೆರೆ ನೀರು ತುಂಬುವ ಯೋಜನೆಯಡಿ ಇದ್ದು, ಇಲ್ಲಿಯವರೆಗೂ ಒಮ್ಮೆಯೂ ತುಂಬಿಸಿರುವುದಿಲ್ಲ, ಹಾಗೆ ಉಳಿದಂತೆ ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಕೆರೆ ನೀರು ತುಂಬುವ ಯೋಜನೆಯಡಿ ಸೇರಿಸಬೇಕು, ಅವುಗಳನ್ನು ಪ್ರತಿವರ್ಷ ಬೇಸಿಗೆಯಲ್ಲಿ ನೀರು ತುಂಬಿಸಬೇಕು ಎಂದರು.
ಈ ವೇಳೆ ವಿಜಯಪುರ ತಾಲೂಕಾ ಆದ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡುತ್ತಾ, ಕೆರೆ ನೀರು ತುಂಬಿಸುವ ಯೋಜನೆಯಡಿ ಹರಿಸುತ್ತಿರುವ ಮಾರ್ಗದಲ್ಲಿ ಸಾಕಷ್ಟು ಪ್ರಭಾವಿ ಹಾಗೂ ರಾಜಕಾರಣಿಗಳ ಹೆಸರಿನಲ್ಲಿ ಕುತಂತ್ರದಿಂದ ಅಧಿಕಾರಿಗಳಿಗೆ ಹಣದ ಆಮಿಶ್ಯ ಒಡ್ಡಿ, ಹೆದರಿಸಿ ದೊಡ್ಡ ಪೈಪಗಳನ್ನು ಹಾಕಿಕೊಂಡು ನೀರು ಹರೆಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ, ಕೇಳಿದರೆ ಅಧಿಕಾರಿಗಳು ನಮ್ಮಲ್ಲಿ ಸಿಬ್ಬಂದಿ ಇಲ್ಲ, ರೈತರೇ ಬಂದು ಅವುಗಳನ್ನು ತೆಗೆಯಿರಿ ಎಂದು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳತ್ತಿದ್ದಾರೆ, ಆದ್ದರಿಂದ ಇಂತಹ ಅಧಿಕಾರಿಗಳಿಗೂ ಸೂಕ್ತ ಆದೇಶ ನೀಡಿ ಕೆರೆ ನೀರು ತುಂಬುವ ಯೋಜನೆಯನ್ನು ಯಶಸ್ವಿಯನ್ನಾಗಿ ಮಾಡಬೇಕು, ಇದರಿಂದ ಸಾಕಷ್ಟು ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ. ಎಂದರು.
ಈ ವೇಳೆ ಸಂಗಮೆಶ ಗುದಳೆ ಮಾತನಾಡುತ್ತಾ, ಈ ವರ್ಷ ಸಾಕಷ್ಟು ಬಿಸಿಲಿನ ತಾಪಮಾನದಿಂದಾಗಿ ನಾವೆಲ್ಲರೂ ಸಾಕಷ್ಟು ಹೈರಾಣಾಗಿದ್ದೇವೆ, ಜಾನುವಾರುಗಳಿಗೂ ಕೂಡಿಯಲು ನೀರಿನ ಜಲಮೂಲಗಳೆಲ್ಲವೂ ಬತ್ತಿ ಹೋಗಿದ್ದಾವೆ, ಆದ್ದರಿಂದ ಜಿಲ್ಲಾಡಳಿತ ಕೂಡಲೇ ನೀರು ಹರೆಸಿ ಕೆರೆ ತುಂಬಿಸಬೇಕು, ಇಲ್ಲವಾದಲ್ಲಿ ಎಲ್ಲಾ ಮಹಿಳೆಯರು ಹಾಗೂ ಮಕ್ಕಲೊಂದಿಗೆ ಸೇರಿಕೊಂಡು ಆಮರಣ ಉಪವಾಸ ಸತ್ಯಾಗ್ರಹ ಮಾಡಬೇಕಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಾತನಾಡುತ್ತಾ ಜಿಲ್ಲೆಯಲ್ಲಿ ೩೦೦ ಕೆರೆಗಳು ಇವೆ ಎಲ್ಲವನ್ನು ತುಂಬಿಸಲು ಸಾಧ್ಯವಿಲ್ಲ, ಅದು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ, ಸಧ್ಯ ನಿಮ್ಮ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆಗಳಿದ್ದರೆ ಟ್ಯಾಂಕರಿನ ವ್ಯವಸ್ಥೆ ಮಾಡುತ್ತೇವೆ, ಎಂದರು, ಇದಕ್ಕೆ ವಿರೋದ್ದ ವ್ಯಕ್ತ ಪಡಿಸಿದ ರೈತರಿಗೆ ಒಂದಿಷ್ಟು ಸಮಯ ತೆಗೆದುಕೊಂಡು ನಂತರ ಹೆಚ್ಚುವರಿ ಇನ್ನು ೭ ದಿನಗಳವರೆಗೆ ನೀರು ಬಿಡಲಾಗುವುದು ಹಾಗೂ ನೀರನ್ನು ಮಾರ್ಗಮಧ್ಯದಲ್ಲಿ ಅಕ್ರಮವಾಗಿ ತೆಗೆದುಕೊಳ್ಳವುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ನಂತರ, ಅಧಿಕೃತ ಬರವಣಿಗೆಯಲ್ಲಿ ನೀಡಿದ ನಂತರ ಹೋರಾಟವನ್ನು ಹಿಂಪಡೆಯಲಾಯಿತು.
ಈ ವೇಳೆ ರೈತ ಸಂಘದ ತಾ.ಉಪಾಧ್ಯಕ್ಷ ಪ್ರಕಾಶ ತೇಲಿ, ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಗೋಡೆಕರ, ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ಕಲ್ಲಪ್ಪ ಪಾರಶೆಟ್ಟಿ, ಜಂಬಗಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಶೈಲ ಮಸೂತಿ, ಗುರಪ್ಪ ಸೋಂಪುರ, ಚಂದ್ರಶೇಖರ ಕೋಣಸಿರಸಗಿ, ಸಂತೋಷ ಮುಡಗಿ, ಪ್ರಭು ಕಾರಜೋಳ, ಸಂಗಪ್ಪ ಕೋಣಸಿರಸಗಿ, ಶ್ರೀಶೈಲ ಸಾಲಿ, ಮಲ್ಲಿಕಾರ್ಜುನ ಕೋಣಸಿರಸಗಿ, ರಾಮಸಿಂಗ ರಜಪೂತ, ಹಣಮಂತ ವಾಲಿಕಾರ, ಚನ್ನಪ್ಪ ವಾಡೇದ, ಚನ್ನಪ್ಪ ತೇಲಿ, ಹಣಮಂತ ರಜಪೂತ, ಬಸವಂತ ತೇಲಿ, ಪ್ರಕಾಶ ತಳವಾರ, ಜಯಸಿಂಗ ರಜಪೂತ, ಸಾಯಬಣ್ಣ ಸಮಗೊಂಡ , ಬಸವರಾಜ ಮಸಳಿ ಸೇರಿದಂತೆ ಅನೇಕ ರೈತರು ಇದ್ದರು.
Subscribe to Updates
Get the latest creative news from FooBar about art, design and business.
ಜಂಬಗಿ, ಆಹೇರಿ, ಹುಣಶ್ಯಾಳ ಕೆರೆಗಳಿಗೆ ನೀರು ತುಂಬಿಸಲು ಆಗ್ರಹ
Related Posts
Add A Comment

