Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಿಂದ ಉಚಿತ ಸಮಾಲೋಚನೆ, ಸ್ಕ್ಯಾನಿಂಗ್ ಮತ್ತು ಕೌನ್ಸೆಲಿಂಗ್ ಮೇ ೨೬ ಹಾಗೂ ೨೭ ರಂದು ಇಬ್ರಾಹಿಂಪೂರ ರೇಲ್ವೆ ಗೇಟ್ ಹತ್ತಿರದ ವೈಷ್ಣವಿ ಹೈಟ್ಸ್ದ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಲ್ಲಿ ಆಯೋಜಿಸಲಾಗಿದೆ ಎಂದು ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್ ಪ್ರಕಟಣೆಯಲ್ಲಿ ತಿಳಿಸಿದೆ.ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾದ ಮತ್ತೋಂದು ವಿಧದ ವೈದ್ಯಕೀಯ ಸ್ಥಿತಿಯಾಗಿದೆ. ನಮ್ಮ ಬಂಜೆತನ ತಜ್ಞರೊಂದಿಗೆ ಉಚಿತ ಸಮಾಲೋಚನೆ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದ ನುರಿತ ತಜ್ಞರ ಸಲಹೆ ಪಡೆಯಲು ಈ ಬೇಬಿ ಸೈನ್ಸ್ ಐವಿಎಫ್ ಕ್ಲೀನಿಕ್‌ದಿಂದ ಉಚಿತ ಸಮಾಲೋಚನೆ, ಸ್ಕಾö್ಯನಿಂಗ್ ಮತ್ತು ಕೌನ್ಸೆಲಿಂಗ್ ಏರ್ಪಡಿಸಲಾಗಿದೆ.ಡಾ. ಸಿ.ಎಸ್.ಮಂಜುನಾಥ್ ಹಾಗೂ ಡಾ. ಶಿವಕುಮಾರ ಪೂಜೇರಿ ಅವರು ಉಚಿತ ಸಮಾಲೋಚನೆ, ಸ್ಕ್ಯಾನಿಂಗ್ ಮತ್ತು ಕೌನ್ಸೆಲಿಂಗ್ ನಡೆಸಿಕೊಡಲಿದ್ದಾರೆ.ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ ಮತ್ತು ಎರಡನೇ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಐಯುಐ ಅಥವಾ ಐವಿಎಫ್ ವೈಪಲ್ಯತೆ ಹೊಂದಿದ್ದರೆ, ಪಿಸಿಓಎಸ್ ಸಮಸ್ಯೆ, ಫೆಲೊಷಿಯನ್ ನಾಳದಲ್ಲಿ ಅಡಚಣೆ ಸೇರಿದಂತೆ…
ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ನಾಲ್ಕನೇ ದಿನದ ಸತ್ಯಾಗ್ರಹದಲ್ಲಿ ಸಂಘಟನೆ ಹೋರಾಟಗಾರ ಬಸವರಾಜ ಕಾಂಬಳೆ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಮಂಜೂರಾದ ಸಮುದಾಯ ಭವನ ನಿರ್ಮಾಣ ಮಾಡದಂತೆ ಅಡ್ಡಿಪಡಿಸುವಂತಹ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ದುರಂತ. ಭವನಕ್ಕೆ ಅಡ್ಡಿಪಡಿಸಿ ಅಲ್ಲಿರುವ ಅಂಬೇಡ್ಕರ್ ಧ್ವಜವನ್ನು ತೆರವುಗೊಳಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅನ್ಯ ಕೋಮಿನ ಕೆಲವು ಜನ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಡಡಲು ಹುನ್ನಾರ ನಡೆಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತ ಈ ಘಟನೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದಕ್ಕೆ ಕಾರಣರದವರ ಮೇಲೆ ಕಾನೂನು ಕ್ರಮ ಕೈಗೊಂಡು ಭವನ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಅಗ್ರಹಿಸಿದರು.ಈ ಸಂದರ್ಭದಲ್ಲಿ…
ರೇವತಗಾಂವದಲ್ಲಿ ಕುಂಭ-ಕಳಶಗಳೊಂದಿಗೆ ಕಾಶಿ ಜಗದ್ಗುರುಗಳ ಸಾರೋಟ ಉತ್ಸವ ಚಡಚಣ: ಮಾನಸಿಕ ನೆಮ್ಮದಿಯನ್ನು ನೀಡುವುದಕ್ಕಾಗಿಯೇ ಜಗತ್ತಿನಲ್ಲಿ ಧರ್ಮಗಳ ಆವಿಷ್ಕಾರವಾಗಿದೆ. ಆದರೆ ಧರ್ಮದ ಹೆಸರಿನಿಂದಲೇ ಜನಮನದ ಶಾಂತಿಯನ್ನು ಕದಡುವ ವ್ಯರ್ಥ ಪ್ರಯತ್ನಕ್ಕೆ ಯಾರೂ ಮುಂದಾಗಬಾರದು. ನೈತಿಕ ನೆಲೆ, ಸಾಂಸ್ಕೃತಿಕ ಭಾವನೆ, ಸಾಹಿತ್ಯಿಕ ಚಿಂತನೆ ಹಾಗೂ ಅಧ್ಯಾತ್ಮಿಕ ಸ್ಪರ್ಶದಿಂದ ಬದುಕಿಗೆ ನಿರಂತರ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.ರೇವತಗಾಂವ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು. ಭಕ್ತಿ, ಭಾವದಿಂದ ಜಂಗಮರನ್ನು ಆರಾಧಿಸುವ ಮೂಲಕ ದೇವರ ಸ್ವರೂಪವನ್ನು ಕಾಣಬಹುದಾಗಿದೆ. ಪರಸ್ಪರ ವಿಶ್ವಾಸ ಇಲ್ಲದೆ ಮನುಷ್ಯ ಬದುಕು ಸಾಗಿಸಲು ಸಾಧ್ಯವಿಲ್ಲ. ಭೌತಿಕ ಬದುಕು ಸುಗಮವಾಗಿ ಸಾಗಲು ಮನುಷ್ಯ ಪರಸ್ಪರ ವಿಶ್ವಾಸ ಹೊಂದಬೇಕು. ಯಾವ ವ್ಯಕ್ತಿ ಸಮಾಜದ ಹಿತವನ್ನು ಬಯಸುತ್ತಾನೋ, ಅಂತಹ ವ್ಯಕ್ತಿ ಬದುಕು ಎಂದಿಗೂ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.ಕೃಷಿಕರಿಗೆ ಕಿವಿಮಾತು: ರೈತನು ದೇಶದ ಬೆನ್ನೆಲುಬು. ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುವಂತಹ ಪದ್ಧತಿಯನ್ನು ರೈತರು ತೋರೆಯಬೇಕು.…
ವಿಜಯಪುರ: ರಾಜ್ಯದಲ್ಲಿ ಜೂನ್ 17ರಂದು ನಿವೃತ್ತಿ ಹೊಂದಲಿರುವ 11 ಒಐಆ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಭರ್ತಿ ಮಾಡುತ್ತಿರುವ ಖಾಲಿ ಇರುವ ಸ್ಥಾನಕ್ಕೆ ನಾಡ ಕಂಡ ಅಪ್ರತಿಮ ನಾಯಕ ಶೋಷಿತರ ದಮನಿತರ ದಲಿತರ ಗಟ್ಟಿ- ಧ್ವನಿ ಎಚ್ ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಮಾದಿಗರ ಸಂಘ ಆಗ್ರಹಿಸಿತು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್ ಹಾಗೂ ಮುಖಂಡರು ಮಾತನಾಡಿ, ಎಚ್ ಆಂಜನೇಯ ಸರ್ವಜನಾಂಗದ ನಾಯಕರು, ತಮ್ಮ ತಮ್ಮಅಧಿಕಾರಾವಧಿಯಲ್ಲಿ, ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ಧನ, ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ, ಅಭಿವೃದ್ಧಿ ನಿಗಮಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಧೀಮಂತ ನಾಯಕರಾದ…
ಸಿಂದಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ಕಾನೂನುಬಾಹಿರ ಚಟುವಟಿಕೆ ಕೆಲಸಗಳು ಜರುಗುತ್ತಿವೆ ಎಂದು ಜಹೀದಾ ಮುಸ್ತಾಕ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.ನನ್ನ ತಂದೆಯವರಾದ ದಿ.ಅಬ್ದುಲಗಪೂರ ನಬಿಲಾಲ ಮಸಳಿ ಎಂಬುವವರ ಹೆಸರಿನ ಆಸ್ತಿ ನಂ.೯೪೭/೭/ಕ/೧೭, ವಾರ್ಡ್ ೧೭ರಲ್ಲಿರುವ ಜಾಗೆಯನ್ನು ಪುರಸಭೆಯ ಕಾರ್ಯಾಲಯದ ರಿಜಿಸ್ಟ್ರ್‌ನಲ್ಲಿ ಶ್ರೀದೇವಿ ಯಲ್ಲಪ್ಪ ಭಂಡಾರಿ ಎನ್ನುವವರ ಹೆಸರಿಗೆ ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಿ ಉತಾರಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಅವರು ಆಸ್ತಿ ದಾಖಲೆಯೊಂದಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಗರದ ಡಾ.ಅಮೀತ ವಾರದ ಅವರಿಗೆ ಸಂಬಂಧಿಸಿದ ೧೯ ಪ್ಲಾಟ್‌ಗಳನ್ನು ಬೇರೆಯವರ ಹೆಸರಿಗೆ ಮಾಡಿರುವುದಿದೆ. ಇದೀಗ ೧೯ಪ್ಲಾಟ್‌ಗಳ ಕೇಸ್ ಕೋರ್ಟ್ನಲ್ಲಿರುವುದುನ್ನು ನೆನಪು ಮಾಡಿಕೊಡುವೆ ಎಂದಿದ್ದಾರೆ.ಹಣದ ಆಸೆಗಾಗಿ ಸಿಂದಗಿ ಪುರಸಭೆಯ ಸಿಬ್ಬಂದಿಗಳು ಒಬ್ಬರ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಮಾಡುವುದು ಸಲಿಸಾಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂತಹ ಕಾನೂನುಬಾಹಿರ ಚಟಿವಟಿಕೆ ತೊಡಗಿಕೊಂಡ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳು ಕೂಡಲೇ ಅಮಾನತ್ತು ಮಾಡಬೇಕು. ತಪ್ಪತಸ್ಥ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಾನೂನು…
ಚರಂಡಿಯ ನಾಲೆಯಲ್ಲಿ ಬಿದ್ದು ಪ್ರಾಣಾಪಾಯದಿಂದ ಪಾರಾದ 6 ವರ್ಷದ ಬಾಲಕ! ಇಂಡಿ: ಚರಂಡಿ ನಾಲೆಯಲ್ಲಿ 6 ವರ್ಷದ ಮಗು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.ಪಟ್ಟಣದ 16 ಮತ್ತು 17 ನೇ ನಂಬರ ವಾರ್ಡಲ್ಲಿ ಚರಂಡಿಯ ನಾಲೆಗಳು ಮೃತ್ಯುಕೂಪವಾಗಿ ನಿಂತಿವೆ. ವಾರ್ಡಿನ ಪ್ರಮುಖ ರಸ್ತೆಯ ಭಾಗವಾನ ಗಲ್ಲಿಯಲ್ಲಿರುವ ರಸ್ತೆಯ ಮದ್ಯದಲ್ಲಿ ಮೃತ್ಯುಕೂಪವಾಗಿವೆ. ಗುರುವಾರ ಸಾಯಂಕಾಲ ಸುಮಾರು ೬ ವರ್ಷದ ಬಾಲಕ ಬಿಲಾಲ ಡಾಂಗೆ ಎಂಬ ಮುಗ್ಧ ಮಗು ಆಳವಾದ ತೆರೆದ ಚರಂಡಿಯಲ್ಲಿ ಬಿದ್ದು ಮಗು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ದಾರಿ ಹೋಗುವ ವ್ಯಕ್ತಿ ಮಗುವನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದು, ಆ ಮಗು ಈಗ ಸದ್ಯ ಸುರಕ್ಷಿತವಾಗಿದೆ.ಈ ಸಂದರ್ಭದಲ್ಲಿ ಆ ಮಗುವಿನ ತಂದೆ ಇಸ್ಮಾಯಿಲ್ ಡಾಂಗೆ ಮಾತನಾಡಿದ್ದು, “ಸುಮಾರು ದಿನಗಳ ಹಿಂದೆ ಕಾಮಗಾರಿ ಮಾಡಿದ್ದು, ಅದು ವೈಜ್ಞಾನಿಕ ರೂಪದಲ್ಲಿ ನಡೆದಿಲ್ಲ. ಅದರಲ್ಲಿ ಚರಂಡಿಯ ನಾಲೆಗಳು ಸುಮಾರು 6 ರಿಂದ 8 ಅಡಿ ಆಳವಿದ್ದು ಅವುಗಳ ಬಗ್ಗೆ ಪರ್ಯಾಯ ಮಾರ್ಗ…
ಬಸವನಬಾಗೇವಾಡಿ: ಪಟ್ಟಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ದೇವಾಲಯ ಆಂಗ್ಲ ಮಾಧ್ಯಮ ಶಾಲೆಗೆ ಅಗತ್ಯವಿರುವ ಎರಡು ಬಸ್ಗಳನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ನೀಡಿದೆ. ಈ ಶಾಲೆಗೆ ಸುತ್ತಮುತ್ತಲಿಂದ ಬರುವ ವಿದ್ಯಾರ್ಥಿಗಳಿಗೆ ಈ ಬಸ್ಗಳು ನೆರವಾಗುತ್ತವೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ, ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಗೆ ನೂತನವಾಗಿ ಬಂದಿರುವ ಎರಡು ಬಸ್ಗಳ ಪೂಜೆ ನೆರವೇರಿದ ನಂತರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಮಕ್ಕಳಿಗೆ ಉತ್ತಮ ಆಂಗ್ಲ ಮಾಧ್ಯಮ ಶಾಲೆ ಇರದೇ ಇರುವದನ್ನು ಗಮನಿಸಿದ ಆಗಿನ ಮಂಡಳಿ ವಿಶೇಷಾಽಕಾರಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ ಅವರು ಈ ಶಾಲೆಯನ್ನು ಆರಂಭಿಸುವ ಮೂಲಕ ಈ ಭಾಗದ ಮಕ್ಕಳಿಗೆ ಉತ್ತಮ ಆಂಗ್ಲ ಮಾಧ್ಯಮ ಶಾಲೆ ನೀಡಿದ್ದಾರೆ. ಈ ಶಾಲೆಯು ಪ್ರಗತಿಯತ್ತ ನಡೆಯುತ್ತಿದೆ. ಇದೀಗ ಮಂಡಳಿಯು ಈ ಶಾಲೆಗೆ ಬರುವ ಸುತ್ತಮುತ್ತಲಿನ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಎರಡು…
ಬಸವನಬಾಗೇವಾಡಿ: ಜಾತ್ರಾಮಹೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳುವ ನಾಟಕ ಪ್ರದರ್ಶನಗಳಿಂದ ಸಮಾಜ ಪರಿವರ್ತನೆಯಾಗಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.ಪಟ್ಟಣದ ಬಸವನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ರಾಯಭಾಗ ತಾಲೂಕಿನ ಅಲಖನೂರಿನ ಮಲ್ಲಿಕಾರ್ಜುನ ನಾಟ್ಯ ಸಂಘದ ಮಗ ಹೋದರು ಮಾಂಗಲ್ಯ ಬೇಕು ಎಂಬ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿದ್ದವು. ಈಚೆಗೆ ಜಾತ್ರಾಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದ ಅವರು, ಬಸವನಗರದ ಎಲ್ಲ ಹಿರಿಯರು-ಕಿರಿಯರು ಸೇರಿಕೊಂಡು ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಬಸವನಗರದ ಎಲ್ಲ ಸಮಾಜ ಬಾಂಧವರು ಕೂಡಿಕೊಂಡು ಉತ್ತಮ ಜಾತ್ರಾಮಹೋತ್ಸವ ಮಾಡುತ್ತಿರುವುದು…
ಬಸವನಬಾಗೇವಾಡಿ: ಜೀವನದಲ್ಲಿ ಪುರಾಣ-ಪ್ರವಚನ ಕೇಳುವದರಿಂದ ಮನಸ್ಸು ಹಸನಾಗುತ್ತದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ೨೦೦೮ ಜಗದ್ಗುರು ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ಜಾತ್ರಾಮಹೋತ್ಸವದಂಗವಾಗಿ ೧೧ ದಿನಗಳ ಕಾಲ ಹಮ್ಮಿಕೊಂಡಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಪುರಾಣ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ-ಪ್ರವಚನ ಕೇಳುವದರಿಂದ ಮನುಷ್ಯನಿಗೆ ಸಂಸ್ಕಾರ ತಿಳಿಯುತ್ತದೆ. ಸಂಸಾರದ ಜಂಜಾಟದಲ್ಲಿ ಪ್ರತಿನಿತ್ಯ ಚಿಂತೆ ಮಾಡುವದನ್ನು ಬಿಟ್ಟು ಪುರಾಣ-ಪ್ರವಚನಗಳು ನಡೆಯುವ ಸ್ಥಳಕ್ಕೆ ಹೋಗಿ ಅಲ್ಲಿನ ನಾಲ್ಕು ಹಿತ-ನುಡಿಗಳನ್ನು ಆಲಿಸುವದರಿಂದ ಜೀವನ ಹಸನಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿಯ ಸಂಸ್ಥಾನ ಹಿರೇಮಠವು ಜಿಲ್ಲೆಯಲ್ಲಿಯೇ ಅದರದೇ ಆದ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದೆ. ಶ್ರೀಮಠದ ಲಿಂಗೈಕ್ಯ ಪೂಜ್ಯರ ಸಂಕಲ್ಪಗಳನ್ನು ಪ್ರಸ್ತುತ ಶ್ರೀಗಳು ಈಡೇರಿಸುತ್ತಿದ್ದಾರೆ. ಈ ಮೂಲಕ ಶ್ರೀಮಠದ…
ಮುದ್ದೇಬಿಹಾಳ: ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ೩೯೦೦ ಹಾಗೂ ರಾಜ್ಯ ಯೋಜನೆಯ ಅಡಿಯಲ್ಲಿ ೪೨೦೦ ಗಿಡಗಳನ್ನು ನೆಡಲಾಗುತ್ತದೆ ಎಂದು ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಹೇಳಿದರು.ಶುಕ್ರವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್‌ಎಂಎಸ್‌ಎ ಶಾಲೆ ಬಳಿ ಗುಡಿಹಾಳ ಗ್ರಾಮಕ್ಕೆ ಕೂಡುವ ರಸ್ತೆಯಲ್ಲಿ ೯೪೫ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಶ್ರೀಗಂಧ, ರಕ್ತ ಚಂದನ, ಸಾಗವಾನಿ, ಮಹಾಗಣಿ, ಹೆಬ್ಬೇವು, ಸೀತಾಫಲ, ಕರಿಬೇವು, ಲಿಂಬೆ, ಪೇರಲ ಸೇರಿದಂತೆ ೩೨ ವಿಧದ ಗಿಡಗಳನ್ನು ಮಾರಲಾಗುತ್ತಿದೆ. ರೈತರು ತಮ್ಮ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಹೊಲದ ಉತಾರೆಯ ಜರಾಕ್ಸ ಪ್ರತಿಗಳನ್ನು ನೀಡಿ ಗಿಡಗಳನ್ನು ಕೇಸಾಪೂರ ಸಮೀಪದ ಸಸ್ಯ ಪಾಲನಾಲಯದಲ್ಲಿ ಪಡೆದುಕೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾರಾರ, ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ,…
