ವಿಜಯಪುರ: ರಾಜ್ಯದಲ್ಲಿ ಜೂನ್ 17ರಂದು ನಿವೃತ್ತಿ ಹೊಂದಲಿರುವ 11 ಒಐಆ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಭರ್ತಿ ಮಾಡುತ್ತಿರುವ ಖಾಲಿ ಇರುವ ಸ್ಥಾನಕ್ಕೆ ನಾಡ ಕಂಡ ಅಪ್ರತಿಮ ನಾಯಕ ಶೋಷಿತರ ದಮನಿತರ ದಲಿತರ ಗಟ್ಟಿ- ಧ್ವನಿ ಎಚ್ ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಮಾದಿಗರ ಸಂಘ ಆಗ್ರಹಿಸಿತು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್ ಹಾಗೂ ಮುಖಂಡರು ಮಾತನಾಡಿ, ಎಚ್ ಆಂಜನೇಯ ಸರ್ವಜನಾಂಗದ ನಾಯಕರು, ತಮ್ಮ ತಮ್ಮಅಧಿಕಾರಾವಧಿಯಲ್ಲಿ, ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ಧನ, ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ, ಅಭಿವೃದ್ಧಿ ನಿಗಮಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಧೀಮಂತ ನಾಯಕರಾದ ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ಮಹಾಂತೇಶ್ ಕಾಖಂಡಕಿ, ಮಲ್ಲು ಶೇಷಗೀರ್, ಧರ್ಮಣ್ಣ ಮಾದರ, ಸುನೀಲ ಸಂದ್ರಿಮನಿ(ಬಬಲೇಶ್ವರ),
ಸಿದ್ದು ಮಾದರ, ಸಿದ್ದು ಶೇಗುಣಸಿ,
ಸೋಮನಾಥ್ ದೊಡ್ಡಮನಿ, ವಿಜಯ್ ಮಾದರ, ಪ್ರಕಾಶ್ ದೊಡ್ಡಮನಿ (ಹು ಹಿಪ್ಪರಗಿ), ಪರಶುರಾಮ ದೋಡ್ಡಮನಿ, ಹಂಚಿನಾಳ ಪಿ ಎಚ್,
ರಘು ಬಲ್ಯಾಳ, ಕೊಲ್ಹಾರ ಯು ಕೆ ಪಿ, ಪರಶುರಾಮ ಕಟ್ಟಮನಿ, ಕೃಷ್ಣ ಕೆಂಗಲಗುತ್ತಿ, ದಸರಥ ಒಜ್ರಮಟ್ಟಿ, ರಾಣೇಶ ವಾಲಿಕಾರ(ಹಂಚಿನಾಳ)
ಮತ್ತು ದಲಿತ ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

