ಸಿಂದಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ಕಾನೂನುಬಾಹಿರ ಚಟುವಟಿಕೆ ಕೆಲಸಗಳು ಜರುಗುತ್ತಿವೆ ಎಂದು ಜಹೀದಾ ಮುಸ್ತಾಕ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನನ್ನ ತಂದೆಯವರಾದ ದಿ.ಅಬ್ದುಲಗಪೂರ ನಬಿಲಾಲ ಮಸಳಿ ಎಂಬುವವರ ಹೆಸರಿನ ಆಸ್ತಿ ನಂ.೯೪೭/೭/ಕ/೧೭, ವಾರ್ಡ್ ೧೭ರಲ್ಲಿರುವ ಜಾಗೆಯನ್ನು ಪುರಸಭೆಯ ಕಾರ್ಯಾಲಯದ ರಿಜಿಸ್ಟ್ರ್‌ನಲ್ಲಿ ಶ್ರೀದೇವಿ ಯಲ್ಲಪ್ಪ ಭಂಡಾರಿ ಎನ್ನುವವರ ಹೆಸರಿಗೆ ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಿ ಉತಾರಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಅವರು ಆಸ್ತಿ ದಾಖಲೆಯೊಂದಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಗರದ ಡಾ.ಅಮೀತ ವಾರದ ಅವರಿಗೆ ಸಂಬಂಧಿಸಿದ ೧೯ ಪ್ಲಾಟ್‌ಗಳನ್ನು ಬೇರೆಯವರ ಹೆಸರಿಗೆ ಮಾಡಿರುವುದಿದೆ. ಇದೀಗ ೧೯ಪ್ಲಾಟ್‌ಗಳ ಕೇಸ್ ಕೋರ್ಟ್ನಲ್ಲಿರುವುದುನ್ನು ನೆನಪು ಮಾಡಿಕೊಡುವೆ ಎಂದಿದ್ದಾರೆ.
ಹಣದ ಆಸೆಗಾಗಿ ಸಿಂದಗಿ ಪುರಸಭೆಯ ಸಿಬ್ಬಂದಿಗಳು ಒಬ್ಬರ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಮಾಡುವುದು ಸಲಿಸಾಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಕಾನೂನುಬಾಹಿರ ಚಟಿವಟಿಕೆ ತೊಡಗಿಕೊಂಡ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳು ಕೂಡಲೇ ಅಮಾನತ್ತು ಮಾಡಬೇಕು. ತಪ್ಪತಸ್ಥ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
“ಈ ಪ್ರಕರಣವನ್ನು ಪರಿಶೀಲನೆ ಮಾಡಿ, ಯಾರು ತಪ್ಪು ಮಾಡಿದ್ದಾರೆ ಎಂದು ನೋಡಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ.”
– ಇಂಡಿ ಎಸಿ ಅಬೀದ್ ಗದ್ಯಾಳ
