ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಾಲ್ಕನೇ ದಿನದ ಸತ್ಯಾಗ್ರಹದಲ್ಲಿ ಸಂಘಟನೆ ಹೋರಾಟಗಾರ ಬಸವರಾಜ ಕಾಂಬಳೆ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಮಂಜೂರಾದ ಸಮುದಾಯ ಭವನ ನಿರ್ಮಾಣ ಮಾಡದಂತೆ ಅಡ್ಡಿಪಡಿಸುವಂತಹ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ದುರಂತ. ಭವನಕ್ಕೆ ಅಡ್ಡಿಪಡಿಸಿ ಅಲ್ಲಿರುವ ಅಂಬೇಡ್ಕರ್ ಧ್ವಜವನ್ನು ತೆರವುಗೊಳಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅನ್ಯ ಕೋಮಿನ ಕೆಲವು ಜನ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಡಡಲು ಹುನ್ನಾರ ನಡೆಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತ ಈ ಘಟನೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಇದಕ್ಕೆ ಕಾರಣರದವರ ಮೇಲೆ ಕಾನೂನು ಕ್ರಮ ಕೈಗೊಂಡು ಭವನ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ ಕಾಖಂಡಕಿ ಕೀರ್ತಿ ಕಾಖಂಡಕಿ, ರಾಜು ಕಾಖಂಡಕಿ, ಶಿವಾನಂದ ಚಲವಾದಿ, ಪ್ರಕಾಶ ಚಲವಾದಿ, ರಾಮು ವಾಲಿಕಾರ ಮಲ್ಲಿಕಾರ್ಜುನ ಸಾವಳಗಿ, ಆಕಾಶ ಚಲವಾದಿ, ಶೇಖರ ಕೂಡಗಿ, ಮಂಜುನಾಥ ಕಾಖಂಡಕಿ, ಸಂಜು ಕಾಖಂಡಕಿ, ಸತೀಶ ಚಲವಾದಿ, ಚಿಕ್ಕಯ್ಯ ಚಲವಾದಿ, ಮಹೇಶ ಚಲವಾದಿ, ಉಮೇಶ ಚಲವಾದಿ, ಕುಮಾರ ಕಾಂಬಳೆ, ಮಧು ಕಾಖಂಡಕಿ, ಸವಿತಾ ಕಾಖಂಡಕಿ, ಸಂಗೀತಾ ಚಲವಾದಿ, ಗೀತಾ ಕೂಡಗಿ, ಲಲಿತಾ ವಾಲಿಕಾರ, ದುಂಡವ್ವ ಕಾಖಂಡಕಿ, ಮರಿಯಪ್ಪ ಖಜಾಪೂರ, ಚೇತನ ಜವಳಗಿ, ಸುನೀಲ ಕಾಖಂಡಕಿ, ಈಶ್ವರ ಕಾರಜೋಳ, ಭಾರತಿ ಕಾರಜೋಳ, ರಮಾ ಚಲವಾದಿ ಸತೀಶ ಕುಬಕಡ್ಡಿ, ಮಂಜುನಾಥ ಶಿವಶರಣ, ಉಮೇಶ ಕಾಂಬಳೆ, ರಾಕೇಶ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ, ರಾಜು ವಾಲಿಕಾರ, ರಾಮಣ್ಣ ಕಾಖಂಡಕಿ, ರಮೇಶ ಕಾಖಂಡಕಿ, ಉಮೇಶ ಚಲವಾದಿ, ಕೃಷ್ಣಾ ಚಲವಾದಿ, ವಿಠ್ಠಲ ವಾಲೀಕಾರ, ಸತೀಶ ಚಲವಾದಿ, ಪ್ರತಾಪ ಚಿಕ್ಕಲಕಿ, ಆಕಾಶ ಕಾಂಬಳೆ, ರೋಹಿತ ಮಲಕಣ್ಣವರ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

