ಮುದ್ದೇಬಿಹಾಳ: ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ೩೯೦೦ ಹಾಗೂ ರಾಜ್ಯ ಯೋಜನೆಯ ಅಡಿಯಲ್ಲಿ ೪೨೦೦ ಗಿಡಗಳನ್ನು ನೆಡಲಾಗುತ್ತದೆ ಎಂದು ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಹೇಳಿದರು.
ಶುಕ್ರವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್‌ಎಂಎಸ್‌ಎ ಶಾಲೆ ಬಳಿ ಗುಡಿಹಾಳ ಗ್ರಾಮಕ್ಕೆ ಕೂಡುವ ರಸ್ತೆಯಲ್ಲಿ ೯೪೫ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಶ್ರೀಗಂಧ, ರಕ್ತ ಚಂದನ, ಸಾಗವಾನಿ, ಮಹಾಗಣಿ, ಹೆಬ್ಬೇವು, ಸೀತಾಫಲ, ಕರಿಬೇವು, ಲಿಂಬೆ, ಪೇರಲ ಸೇರಿದಂತೆ ೩೨ ವಿಧದ ಗಿಡಗಳನ್ನು ಮಾರಲಾಗುತ್ತಿದೆ. ರೈತರು ತಮ್ಮ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಹೊಲದ ಉತಾರೆಯ ಜರಾಕ್ಸ ಪ್ರತಿಗಳನ್ನು ನೀಡಿ ಗಿಡಗಳನ್ನು ಕೇಸಾಪೂರ ಸಮೀಪದ ಸಸ್ಯ ಪಾಲನಾಲಯದಲ್ಲಿ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾರಾರ, ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಸಂಚಾಲಕ ಮಹಾಬಲೇಶ್ವರ ಗಡೇದ, ವಿ.ಎಸ್.ಪಾಟೀಲ, ಸುರೇಶ ಕಲಾಲ, ಸಂಜೀವ ಕಡೂರ, ಆದೇಶ ಕೋಳೂರ, ಅರಣ್ಯ ಇಲಾಖೆಯ ಅನಿಲ ರಾಠೋಡ, ಅನಿಲ ಚವ್ಹಾಣ, ಪರಮಾನಂದ ಪಾಟೀಲ, ಬಸವರಾಜ ಬ್ಯಾಕೋಡ, ನಿರ್ಮಲಾ ಸಿದ್ನಾಳ, ಶ್ರೀನಿಧಿ ಬಿರಾದಾರ ಇದ್ದರು. ಕೋಳೂರ ಗ್ರಾಮದ ಸಂತೋಷ ಹಿರೇಮಠ ಗಿಡಗಳನ್ನು ನೆಡುವಿಕೆಯ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

