Author: editor.udayarashmi@gmail.com

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ವಿಜಯಪುರ ನಗರ ವ್ಯಾಪ್ತಿಯ ಭೂತನಾಳ ಗ್ರಾಮದ ಹತ್ತಿರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ನಿರ್ಮಾಣವಾಗುರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಡಿ ನಿರ್ಮಾಣದ ಡಾರ್ಮಿಟರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ಕೊನೆಯ ಹಂತದಲ್ಲಿರುವ ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿಯನ್ನು ಸಂಪೂರ್ಣ ಪರಿಶೀಲನೆ ನಡೆಸಿ, ಈ ಕಾಮಗಾರಿ ಈಗಾಗಲೇ ವಿಳಂಬವಾಗಿದ್ದು, ಬೇಗ ಪೂರ್ಣಗೊಳಿಸಿ , ಅಗಸ್ಟ್ ೧೫ ಸ್ವತಂತ್ರ ದಿನಾಚರಣೆ ಒಳಗಾಗಿ ಉದ್ಘಾಟನೆ ಮಾಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಾಂತ್ರಿಕ ಅಧಿಕಾರಿಗಳಿಗೆ ಹಾಗೂ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ. ಲೋಣಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಮಲಜಿ, ಸೈಕ್ಲಿಂಗ್ ಆಸೋಸಿಯೇಶನ್ ಅಧ್ಯಕ್ಷರಾದ ರಾಜು ಬಿರಾದಾರ್, ಕಾರ್ಯದರ್ಶಿ ಸಂಜೀವ ಫಡತರೆ, ತರಬೇತುದಾರರದ ಅಲಕಾ ಫಡತರೆ, ಅನಂತ ದೇಸಾಯಿ, ಎಸ್.ಬಿ ಕಡಕಲ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ವಿಜಯಪುರ: ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.ಒಪಿಡಿ, ಆಪರೇಶನ್ ಥೀಯೆಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಸ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ, ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳ್ಳಿ ಅವರು, ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆಗಳನ್ನು ಮಾಡಿದ ಹಾಗೂ ಪರಿಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.ಹೊಸದಾಗಿ ನಿರ್ಮಾಣವಾಗುತ್ತಿರುವ ೨೫೦ ಹಾಸಿಗೆಯುಳ್ಳ ಆಸ್ಪತ್ರೆಗೆ ಭೇಟಿ ನೀಡಿ ಆದಷ್ಟು ಬೇಗ ನಿರ್ಮಾಣಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿಯ ತರಬೇತಿಯಲ್ಲಿ ೩೫ ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೇಲ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಹೋರರೋಗಿಗಳ ವಿಭಾಗದಲ್ಲಿ ಸರತಿ ಸಾಲನ್ನು ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಅಭಾ ಆ್ಯಪ್‌ಮೂಲಕ ನೋಂದಣಿ ಮಾಡುವ ಕಾರ್ಯವೈಖರಿಯನ್ನು ಪರೀಶೀಲಿಸಿ ಸ್ವತಹ…

Read More

ಚಡಚಣ: ಸಮೀಪದ ಭೀಮಾನದಿಯ ದಡದಲ್ಲಿರುವ ಹೊಳೆ ಉಮರಾಣಿಯ ಖಾಜಾ ಬಂದೇನವಾಜ ದೇವರ ಉರುಸು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯರು ಉರುಸಿನಲ್ಲಿ ಭಾಗಿಯಾಗಿ ತಮ್ಮ ತನುಮನಧನ ಅರ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು. ಸೂಫಿ ಸಂತ ಬಂದೇನವಾಜರು ಪವಾಡ ಪುರುಷರಾಗಿದ್ದರು. ಮಾನವಧರ್ಮ ಜಾಗೃತಿಗಾಗಿ ಊರೂರು ಸಂಚರಿಸುತ್ತಾ ಉಮರಾಣಿಯ ಹೊಳೆಯ ದಡದಲ್ಲಿ ವಿಶ್ರಾಂತಿ ಪಡೆದು ಅಲ್ಲಿಯ ಭಕ್ತರಿಗೆ ಕೆಲವೊಂದು ಪವಾಡ ಮಾಡಿ ತಮ್ಮ ಕುರುಹನ್ನು ಬಿಟ್ಟು ಹೋದರಂತೆ. ಅಂದಿನಿಂದ ಇಂದಿನ ವರೆಗೆ ಗ್ರಾಮಸ್ಥರು ಭಕ್ತಿಭಾವದಿಂದ ಅವರ ಉರುಸನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಇದು ಗ್ರಾಮಕ್ಕೆ ದೊಡ್ಡ ಜಾತ್ರೆಯಾಗಿದ್ದು, ಎಲ್ಲರೂ ಹಬ್ಬದಂತೆ ಆಚರಿಸುವರು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು. ಆಗಮಿಸಿದ ಭಕ್ತಾದಿಗಳಿಗೆ ಉರುಸು ಕಮೀಟಿ ಪ್ರಸಾದ ವ್ಯವಸ್ಥೆ ಮಾಡಿದ್ದರು.ಗುರುವಾರ ರಾತ್ರಿ ೮ ಗಂಟೆಗೆ ಸುಣ್ಣ ಲೇಪನ ಹಾಗೂ ವಿದ್ಯುತ್ ಅಲಂಕಾರ ಜರುಗಿತು. ಶುಕ್ರವಾರ ರಾತ್ರಿ ೮ ಗಂಟೆಗೆ ಗಂಧ ಲೇಪನ ಜರುಗಿತು.ಶನಿವಾರ ಮುಂಜಾನೆ ೯ ಗಂಟೆಗೆ ಹೊಸ ಉಮರಾಣಿಯಲ್ಲಿ ಬಸವೇಶ್ವರ ಹರದೇಶಿ ಗೀಗೀ ಮೇಳ ಸಾ||…

Read More

ಕಲಕೇರಿ: ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ೪೦ ವರ್ಷಗಳಿಂದ ತಮ್ಮ ಅನರ್ಘ್ಯ ಸೇವೆ ಸಲ್ಲಿಸಿದ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಹಂತ ಹಂತವಾಗಿ ಬೆಳೆದು ೧೫ ವರ್ಷಗಳ ಕಾಲ ಸಿಂದಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿರುವ ಮತ್ತು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾಗಿ ರೈತಮುಖಿ ಕೆಲಸಗಳನ್ನು ಮಾಡಿ ರೈತರ ಮನ ಗೆದ್ದು ರೈತನಾಯಕರಾಗಿ ಹೊರಹಮ್ಮಿರುವ ಮತ್ತು ೧೯೯೯ ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಥಮ ಭಾರಿಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಿಂದಗಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ೫ ವರ್ಷ ಜನಪರ ಕೆಲಸಗಳನ್ನು ಮಾಡಿರುವ ಜನಾನುರಾಗಿಗಳಾದ ಶರಣಪ್ಪ ತಿಪ್ಪಣ್ಣ ಸುಣಗಾರ ಮಾಜಿ ಶಾಸಕರು, ಸಿಂದಗಿ ಇವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಕಲಕೇರಿ ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಕಾಂಗ್ರೆಸ್ ಮುಖಂಡರು ಆದ ಜಹಾಂಗೀರಬಾಶಾ ಸಿರಸಗಿ ಅವರು ಪಕ್ಷದ ವರಿಷ್ಟರಿಗೆ ಆಗ್ರಹಪಡಿಸಿದ್ದಾರೆ.೨೦೦೮ ರಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ೧೨ ವರ್ಷ ಸೇವೆ ಸಲ್ಲಿಸಿದ,…

Read More

ಇಂಡಿ ಪಟ್ಟಣದ ಹಂಜಗಿ ರಸ್ತೆಯಲ್ಲಿರುವಚಂದ್ರಶೇಖರ್ ಸಾಲೋಟಗಿ ಎಂಬುವವರಿಗೆ ಸೇರಿದ ಜಮೀನಿನಲ್ಲಿರೋ 300 ಲಿಂಬೆ ಗಿಡಗಳು ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಈ ಲಿಂಬೆ ನಾಡಿನ ಪ್ರದೇಶ ಮೊದಲೇ ಬರಗಾಲದಿಂದ ತತ್ತರಿಸಿದೆ. ಹಾಗೂ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರವಿದೆ. ಇಂತಹ ಸಂದರ್ಭದಲ್ಲಿ ಲಿಂಬೆ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಬೆಳೆಸಿದ್ದ ಲಿಂಬೆ ಗಿಡಗಳು ಸುಟ್ಟು ಕರಕಲಾಗಿವೆ. ಅದಲ್ಲದೇಜೀವನಕ್ಕೆ ಆಧಾರವಾಗಿದ್ದ ಲಿಂಬೆ ಗಿಡಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದು, ಈ ಸದ್ಯ ರೈತ ಗುರುಶಾಂತ ಚಂದ್ರಶೇಖರ್ ಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ರಾಜಕೀಯ ಮುಖಂಡ ಕಾಸುಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಸೋಮು ನಿಂಬರಗಿಮಠ, ಬಾಪುಗೌಡ ಬಿರಾದಾರ, ತಿಪ್ಪಣ್ಣ ಉಟಗಿ, ಸೇರಿದಂತೆ ಹಲವರು ಭೇಟಿ ನೀಡಿ ರೈತನಿಗೆ ಸ್ವಾಂತನ ಹೇಳಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾರದಾ ವಿದ್ಯಾ ಮಂದಿರದಲ್ಲಿಮೇ೨೯ ರಂದು ಸಂಜೆ ೫ಗಂಟೆಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಕಾಮರಾಜ ಬಿರಾದಾರ ತಿಳಿಸಿದರು.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರಾದ ದಿ.ಭೋಜರಾಜ ಬಿರಾದಾರ ಅವರ ಸ್ಮರಣಾರ್ಥ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಂಡವರಿಗೆ ಪುರಸ್ಕರಿಸಲಾಗುತ್ತಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಲಿದ್ದು, ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಮತ್ತು ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಭಾಜಪಾ ಮುಖಂಡ ಎಂ.ಎಸ್.ಪಾಟೀಲ, ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರಣ್ಣ…

Read More

ಸಿಂದಗಿ: ಜಿಲ್ಲೆಯಲ್ಲಿ ಅಹಿಂದ ಮತಗಳನ್ನೂ ಒಟ್ಟುಗೂಡಿಸಿ ಅಹಿಂದ ಸಂಘಟನೆಯನ್ನು ತಳಮಟ್ಟದಿಂದ ಸಂಘಟಿಸಿ ಅಹಿಂದ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಕೆಪಿಸಿಸಿ ವಕ್ತಾರ ಎಸ್.ಎಮ್.ಪಾಟೀಲ್ ಗಣಿಹಾರ ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಿ ಅವರ ಪಕ್ಷ ನಿಷ್ಠೆ ಹಾಗೂ ಅವರು ಪಕ್ಷಕ್ಕಾಗಿ ಶ್ರಮಿಸಿದ್ದನ್ನು ಗಮನಿಸಿ ಅವರಿಗೆ ಸ್ಥಾನ ಕೋಡಬೇಕು. ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರ ಗೆಲುವಿನಲ್ಲಿ ಇವರ ಪಾತ್ರ ಮುಖ್ಯವಾಗಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿಯೂ ಸಹ ಬಾಗಲಕೋಟೆ ಹಾಗೂ ವಿಜಯಪುರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ನಿಷ್ಠಾವಂತರಾಗಿ ಕಾರ್ಯ ಮಾಡಿರುತ್ತಾರೆ. ಅನೇಕ ಬಾರಿ ಪಕ್ಷದಿಂದ ಅಧಿಕಾರ ವಂಚಿತರಾದ ಮೇಲು ಪಕ್ಷದ ಮೇಲಿನ ನಿಷ್ಠೆ ಕಡಿಮೆ ಮಾಡದೇ ಪಕ್ಷದ ಪರ ದುಡಿದಿರುವ ಯಾರಾದರೂ ವ್ಯಕ್ತಿ ಇದ್ದರೇ ಅದು ಎಸ್.ಎಮ್.ಪಾಟೀಲ್ ಗಣಿಹಾರ ಅವರು ಹಾಗಾಗಿ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡಬೇಕು ಎಂದು ಸಿಎಂ, ಡಿಸಿಎಂ, ಜಿಲ್ಲೆಯ ಸಚಿವರು, ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಸಿಂದಗಿ ನ್ಯಾಯಬೆಲೆ ಅಂಗಡಿಕಾರರ ತಾಲೂಕಾಧ್ಯಕ್ಷ ಅಸ್ಲಾಂ ಗೋಟ್ಯಾಳ ಹೆಸರು…

Read More

ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕ ತರಬೇತಿ ಕೇಂದ್ರದಲ್ಲಿ ಮೇ.೨೫ ಬುದುವಾರದಂದು ತೊಯೇಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ. ಲಿ. ವತಿಯಿಂದ ಅಪ್ರೆಂಟಿಸ್ ಶಿಪ್ ತರಬೇತಿ ಹಮ್ಮಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಸ್.ಬಿ.ಮಗಿ, ೯೯೪೫೪೭೭೫೨೦, ಈರಯ್ಯ ಗಣಾಚಾರಿ ೯೮೮೦೨೫೧೦೮೩ ಅವರನ್ನು ಸಂಪರ್ಕಿಸಿಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.

Read More

ಇಂಡಿ: ಭಾನುವಾರ ಸಾಯಂಕಾಲ ಸುಮಾರಿಗೆ ಸುರಿದ ಅಕಾಲಿಕ ಗಾಳಿ ಮಳೆಗೆ ತಾಲೂಕಿನ ಲಾಳಸಂಗಿ, ಖೇಡಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮದ ಸರ್ವೆ ನಂಬರ್ ೩೨೨ ರಲ್ಲಿ ಒಂದು ಎಕರೆ ನಿಂಬೆ ಹಾಗೂ ಒಂದುವರೆ ಎಕರೆ ಬಾಳೆ ಬೆಳೆ ಸೇರಿದಂತೆ ಮಾವಿನ ಮರಗಳು ನೆಲಕ್ಕುರುಳಿವೆ.ಚನ್ನಗೊಂಡ ವಿಠೋಬಾ ಶಿರಶ್ಯಾಡ ಎಂಬ ರೈತನ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.ಸಾಯಂಕಾಲ ಸುಮಾರಿಗೆ ಏಕಾಏಕಿ ಬಿರುಗಾಳಿ ಪ್ರಾರಂಭವಾಗಿದ್ದು, ಜಮೀನಿನಲ್ಲಿನ ನಿಂಬೆ ಹಾಗೂ ಬಾಳೆ ಗಿಡಗಳು ಬಿರುಗಾಳಿಗೆ ನೆಲಕ್ಕೆ ಉರುಳಿದ್ದು, ರೈತನ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತ ನಿಂಬೆ ಬೆಳೆಯನ್ನು ೧೫ ವರ್ಷಗಳ ಹಿಂದೆ ನಾಟಿ ಮಾಡಿದ್ದ ಎಂದು ತಿಳಿದುಬಂದಿದೆ. ಬಾಳೆ ಗಿಡಗಳು ಸಹ ಫಸಲಿಗೆ ಬರುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದ್ದು ರೈತ ಚಿಂತಾಕ್ರಾಂತನಾಗಿದ್ದಾನೆ.ಸರಕಾರ ರೈತನ ಬಗ್ಗೆ ಕಾಳಜಿ ತೋರಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.

Read More

ವಿಜಯಪುರ: ಬದಾಮಿ ರೈಲು ನಿಲ್ದಾಣದ ವೇದಿಕೆ ನಂ ೦೨ ರ ರೈಲು ಹಳಿಯಲ್ಲಿ ಕಿ ಮೀ ನಂ ೬೬/೮೦೦-೯೦೦ ರಲ್ಲಿ ಒಬ್ಬ ಅಪರಿಚಿತ ಗಂಡಸು ವಯ ಸುಮಾರು ೬೫ ವರ್ಷದವನ ಅಪರಿಚಿತ ಶವ ರೈಲ್ವೇ ಪೊಲೀಸ್ ಇಲಾಖೆಯವರಿಗೆ ಪತ್ತೆಯಾಗಿದೆ.೦೫ ಅಡಿ ೦೭ ಇಂಚು ಎತ್ತರ, ಸಾಧಗಪ್ಪು ಮೈಬಣ್ಣ. ತೆಳ್ಳನೆಯ ಮೈಕಟ್ಟು, ಕೊಲು ಮುಖ. ನೇರವಾದ ಮೂಗು, ತಲೆಯಲ್ಲಿ ಚಿಕ್ಕ ಚಿಕ್ಕ ಬಿಳಿ ಕೂದಲು, ಬಿಳಿ ಬಣ್ಣದ ಶೇವ್ ಮಾಡಿದ ದಾಡಿ, ಮೀಸೆ, ವುಳ್ಳವನಾಗಿರುತ್ತಾನೆ. ಕಿವಿಯ ಆಲೆಗಳು ತೂತು ಇರುತ್ತವೆ. ಒಂದು ಬಿಳಿ ಬಣ್ಣದ ತುಂಬು ತೊಳಿನ ಅಂಗಿ, ಒಂದು ಬಿಳಿ ಬಣ್ಣದ ಬನಿಯನ್, ಒಂದು ಬಿಳಿ ಬಣ್ಣದ ದೊತರ, ಒಂದು ಕೇಸರಿ ದಾರದ ಉಡದಾರ, ಒಂದು ಜೋತೆ ಕೇಂಪು ಬಣ್ಣದ ಹವಾಯಿ ಚಪ್ಪಲಿಗಳು ಇದ್ದು. ಇವುಗಳ ಹೋರತಾಗಿ ಮೃತನ ಮೈಮೇಲೆ ಯಾವುದೇ ಬೆಲೆ ಬಾಳುವ ವಸ್ತುಗಳು, ನಗ ನಾಣ್ಯ ಹಾಗೂ ಗುರುತಿನ ಚೀಟಿ ಪತ್ತೆಯಾಗಿರುವುದಿಲ್ಲ.ಈ ಮೇಲೆ ನಮೂದ ಮಾಡಿದ ಅಪರಿಚಿತ ಗಂಡಸಿ…

Read More