ಕಲಕೇರಿ: ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ೪೦ ವರ್ಷಗಳಿಂದ ತಮ್ಮ ಅನರ್ಘ್ಯ ಸೇವೆ ಸಲ್ಲಿಸಿದ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿ ಹಂತ ಹಂತವಾಗಿ ಬೆಳೆದು ೧೫ ವರ್ಷಗಳ ಕಾಲ ಸಿಂದಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿರುವ ಮತ್ತು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾಗಿ ರೈತಮುಖಿ ಕೆಲಸಗಳನ್ನು ಮಾಡಿ ರೈತರ ಮನ ಗೆದ್ದು ರೈತನಾಯಕರಾಗಿ ಹೊರಹಮ್ಮಿರುವ ಮತ್ತು ೧೯೯೯ ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಪ್ರಥಮ ಭಾರಿಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಸಿಂದಗಿ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ೫ ವರ್ಷ ಜನಪರ ಕೆಲಸಗಳನ್ನು ಮಾಡಿರುವ ಜನಾನುರಾಗಿಗಳಾದ ಶರಣಪ್ಪ ತಿಪ್ಪಣ್ಣ ಸುಣಗಾರ ಮಾಜಿ ಶಾಸಕರು, ಸಿಂದಗಿ ಇವರನ್ನು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಕಲಕೇರಿ ಆದರ್ಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಕಾಂಗ್ರೆಸ್ ಮುಖಂಡರು ಆದ ಜಹಾಂಗೀರಬಾಶಾ ಸಿರಸಗಿ ಅವರು ಪಕ್ಷದ ವರಿಷ್ಟರಿಗೆ ಆಗ್ರಹಪಡಿಸಿದ್ದಾರೆ.
೨೦೦೮ ರಲ್ಲಿ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ೧೨ ವರ್ಷ ಸೇವೆ ಸಲ್ಲಿಸಿದ, ೨೦೧೩ ರಲ್ಲಿ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ೮ ಕ್ಷೇತ್ರಗಳಲ್ಲಿ ೭ ಸ್ಥಾನ ಕಾಂಗ್ರೆಸ್ ಪಕ್ಷ ಗೆಲ್ಲಲು ಬಹುಮುಖ್ಯ ಪಾತ್ರವಹಿಸಿರುವ ಮತ್ತು ಕರ್ನಾಟಕ ರಾಜ್ಯದಲ್ಲಿಯೇ ಏಕೈಕ ಸ್ವಂತ ಕಟ್ಟಡವಿರುವ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಛೇರಿ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಅಲ್ಲದೇ ಪಕ್ಷದ ಮೇಲಿರುವ ಇವರ ಪ್ರೀತಿ ಅಭಿಮಾನ ಎಂತಹದು ಎಂದು ತಿಳಿಯುತ್ತದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಭಲ ಮುಖಂಡರಾಗಿರುವ ಇವರು ಅಲ್ಪಸಂಖ್ಯಾತರು ಸೇರಿಂದರೆ ಎಲ್ಲ ಸಮುದಾಯದವರನ್ನು ಪ್ರೀತಿ ವಿಶ್ವಾಸದಿಂದ ಕಾಣುವಂತಹ ಮತ್ತು ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜನನಾಯಕರಾಗಿದ್ದು, ಈ ಬಾರಿ ನಡೆಯುವ ವಿಧಾನ ಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿದರೆ ದೀನ ದಲಿತರು, ಅಲ್ಪಸಂಖ್ಯಾತರು, ಬಡವರು, ಹಿಂದುಳಿದ ಎಲ್ಲ ಸಮುದಾಯದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕರು ಲಭಿಸಿದಂತಾಗುತ್ತದೆ. ಹಾಗಾಗಿ ಶರಣಪ್ಪ ತಿ.ಸುಣಗಾರ ಇವರನ್ನು ಈ ಬಾರಿ ನಡೆಯುವ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಚುನಾವಣೆಯ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಕಲಕೇರಿ ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಮುಖಂಡರು ಮತ್ತು ಕಾರ್ಯಕರ್ತರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಈ ವೇಳೆ ದವಲಸಾಬ ನಾಯ್ಕೋಡಿ, ನಬಿಲಾಲ ನಾಯ್ಕೋಡಿ, ಮಹಿಬೂಬ ನಾಯ್ಕೋಡಿ, ಚಾಂದಪಾಶಾ ಹವಾಲ್ದಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

