ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕ ತರಬೇತಿ ಕೇಂದ್ರದಲ್ಲಿ ಮೇ.೨೫ ಬುದುವಾರದಂದು ತೊಯೇಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ. ಲಿ. ವತಿಯಿಂದ ಅಪ್ರೆಂಟಿಸ್ ಶಿಪ್ ತರಬೇತಿ ಹಮ್ಮಿಕೊಂಡಿದ್ದಾರೆ.
ತರಬೇತಿಯಲ್ಲಿ ಐಟಿಐ ಎಲೆಕ್ಟ್ರಿಷಿಯನ್, ಫಿಟರ್, ಟರ್ನರ್, ವೆಲ್ದರ್, ಎಂಎಂವ್ಹಿ, ಮೆಕ್ಯಾನಿಕ್ ಡಿಸೇಲ್, ಮತ್ತು ಟೂಲ್ ಡೈ, ಮೇಕಿಂಗ್ ವೃತ್ತಿ ಪಾಸಾದವರು ಹಾಗೂ ಸದ್ಯಕ್ಕೆ ತರಬೇತಿ ಪಡೆಯುತ್ತಿರುವ ಪುರುಷ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಸ್.ಎಸ್.ಎಲ್.ಸಿಯಲ್ಲಿ ಕನಿಷ್ಠ ಶೇ.೪೦ ಐ ಟಿಐ ನಲ್ಲಿ ಕನಿಷ್ಠ ಶೇ.೫೦ ಅಂಕಗಳೊಂದಿಗೆ ಪಾಸಾಗಿರುವ ೨೫ ವರ್ಷ ವಯೋಮಿತಿ ಒಳಗಿನ ಅಭ್ಯರ್ಥಿಗಳು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಅದಕ್ಕಾಗಿ ಆಸಕ್ತರು ತಮ್ಮ ಮೂಲ ದಾಖಲಾತಿ ಹಾಗೂ ಒಂದು ಸೆಟ್ ಝರಾಕ್ಷ ಪ್ರತಿ, ಆಧಾರ ಕಾರ್ಡ ಹಾಗೂ ಬಾವಚಿತ್ರದೊಂದಿಗೆ ತರಬೇತಿಯಲ್ಲಿ ಭಾಗವಹಿಸಬೇಕು. ಎಂದು ಪ್ರಾಚಾರ್ಯ ಎಂ.ಸಿ.ಸಿಂದಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಸ್.ಬಿ.ಮಗಿ, ೯೯೪೫೪೭೭೫೨೦, ಈರಯ್ಯ ಗಣಾಚಾರಿ ೯೮೮೦೨೫೧೦೮೩ ಅವರನ್ನು ಸಂಪರ್ಕಿಸಿಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
