ಮುದ್ದೇಬಿಹಾಳ: ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾರದಾ ವಿದ್ಯಾ ಮಂದಿರದಲ್ಲಿ
ಮೇ೨೯ ರಂದು ಸಂಜೆ ೫ಗಂಟೆಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಕಾಮರಾಜ ಬಿರಾದಾರ ತಿಳಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರಾದ ದಿ.ಭೋಜರಾಜ ಬಿರಾದಾರ ಅವರ ಸ್ಮರಣಾರ್ಥ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಂಡವರಿಗೆ ಪುರಸ್ಕರಿಸಲಾಗುತ್ತಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಲಿದ್ದು, ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಮತ್ತು ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಭಾಜಪಾ ಮುಖಂಡ ಎಂ.ಎಸ್.ಪಾಟೀಲ, ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರಣ್ಣ ತಾರನಾಳ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಮದರಿ, ತಾ.ಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ ಆಗಮಿಸಲಿದ್ದಾರೆ.
ತಹಶೀಲ್ದಾರ ವಿನಯಾ ಹೂಗಾರ, ರೇಲ್ವೆ ಇಲಾಖೆಯ ಸುಹಾಸ ಚೌವ್ಹಾಣ, ಪಿಎಸ್‌ಐ ವಿಠ್ಠಲ ತಳವಾರ, ಇಂಜಿನೀಯರ ಸಂಜೀವ ಕುರಿ, ಬ್ಯಾಂಕ್ ಮ್ಯಾನೇಜರ ಚೇತನ ಕಲಹಾಳ, ಪೂಜಾ ಪತಂಗಿ, ಶಿವರಾಜ ಕಾರಕೂರ, ರಶ್ಮಿ ರಾಠೋಡ, ಅಕ್ಷತಾ ಲಮಾಣಿ, ಇನಾಯತ್ ವಾಲಿಕಾರ, ಹುಲಿಗೆಮ್ಮ ಬಾಚಿಹಾಳ, ಚಂದ್ರು ಸಜ್ಜನ, ವಿರೇಶ ವಡವಡಗಿ, ಹಬೀಬ ಬಾಗೇವಾಡಿ, ರಾಧಿಕಾ ನಾಯಕ, ಮಂಜುನಾಥ ನಾಯಕ, ವಿನುತಾ ಚಟ್ಟಿ, ವರ್ಷಾ ಚಟ್ಟಿ, ಸತೀಶ ನಾಯಕ, ಶ್ವೇತಾ ಕುರಿ, ಬಸವರಾಜ ಮಾಳಿ, ಚಂದ್ರು ಗುಬ್ಬಚ್ಚಿ, ಪವನ ಡೊಣೂರ, ಮಲ್ಲಿಕಾರ್ಜುನ ಹುಣಶ್ಯಾಳ, ಕಿರಣ ಇಂಡಿಮಠ, ಅಶೋಕ ರಾಠೋಡ, ಬಸವರಾಜ ಬ್ಯಾಕೋಡ, ಮಂಜುನಾಥ ಬಳವಾಟ, ಪವನ ಲಮಾಣಿ ಸೇರಿದಂತೆ ಮತ್ತೀತರರು ಪುರಸ್ಕೃತಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
