ವಿಜಯಪುರ: ಜಿಲ್ಲಾಸ್ಪತ್ರೆಗೆ ಶನಿವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಮಾಹಿತಿ ಪಡೆದುಕೊಂಡರು.
ಒಪಿಡಿ, ಆಪರೇಶನ್ ಥೀಯೆಟರ್, ಚಿಕ್ಕಮಕ್ಕಳ ವಿಭಾಗ, ಮೆಡಿಸಿನ್ ವ್ಯವಸ್ಥೆ, ಸರ್ಜರಿ ವಿಭಾಗ, ಅರ್ಥೋಪೆಡಿಸ್, ಕಣ್ಣಿನ ವಿಭಾಗ, ಇಎನ್‌ಟಿ ವಿಭಾಗ, ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳ್ಳಿ ಅವರು, ಮಕ್ಕಳ ವಿಭಾಗ, ಹೆರಿಗೆ ವಿಭಾಗಗಳಲ್ಲಿ ಕಷ್ಟಕರವಾದ ಚಿಕಿತ್ಸೆಗಳನ್ನು ಮಾಡಿದ ಹಾಗೂ ಪರಿಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.
ಹೊಸದಾಗಿ ನಿರ್ಮಾಣವಾಗುತ್ತಿರುವ ೨೫೦ ಹಾಸಿಗೆಯುಳ್ಳ ಆಸ್ಪತ್ರೆಗೆ ಭೇಟಿ ನೀಡಿ ಆದಷ್ಟು ಬೇಗ ನಿರ್ಮಾಣಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಡಿಎನ್‌ಬಿಯ ತರಬೇತಿಯಲ್ಲಿ ೩೫ ಜನ ವಿದ್ಯಾರ್ಥಿಗಳಿದ್ದು, ಅವರಿಗೆ ಹಾಸ್ಟೇಲ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಹೋರರೋಗಿಗಳ ವಿಭಾಗದಲ್ಲಿ ಸರತಿ ಸಾಲನ್ನು ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಅಭಾ ಆ್ಯಪ್‌ಮೂಲಕ ನೋಂದಣಿ ಮಾಡುವ ಕಾರ್ಯವೈಖರಿಯನ್ನು ಪರೀಶೀಲಿಸಿ ಸ್ವತಹ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದರ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಜಿಲ್ಲಾಸ್ಪತ್ರೆಯಲ್ಲಿದೆ ಗಂಟೆಗೆ ೫೦೦ ರೊಟ್ಟಿ ಮಾಡುವ ಯಂತ್ರ :
ಜಿಲ್ಲಾಸ್ಪತ್ರೆಯಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಅಲ್ಲಿ ಅಡುಗೆ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಡಿ ಸಿ ಪಡೆದುಕೊಂಡರು. ಅಲ್ಲಿ ಹೊಸದಾಗಿ ರೊಟ್ಟಿ ಮಾಡುವ ಯಂತ್ರವನ್ನು ವಿಕ್ಷೀಸಿದರು. ಈ ಯಂತ್ರವು ಗಂಟೆಗೆ ೫೦೦ ರೊಟ್ಟಿಗಳನ್ನು ಮಾಡುತ್ತದೆ. ಈ ಯಂತ್ರವನ್ನು ಆಸ್ಪತ್ರೆಯ ವೈದ್ಯರು ಹಾಗೂ ಕೆಲವು ಎನ್‌ಜಿಒಗಳ ಸಹಕಾರದಲ್ಲಿ ಖರೀದಿ ಮಾಡಿದ್ದು, ಇದರಿಂದ ಆಸ್ಪತ್ರೆಗೆ ಧಾಖಲಾಗುವ ಒಳರೋಗಿಗಳ ಊಟೋಪಚಾರದ ವ್ಯವಸ್ಥೆಗಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳ್ಳಿ ವಿವರಿಸಿದರು.
ಈ ವೇಳೆ ಆಸ್ಪತ್ರೆಯ ವ್ಯದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

