ಇಂಡಿ: ಭಾನುವಾರ ಸಾಯಂಕಾಲ ಸುಮಾರಿಗೆ ಸುರಿದ ಅಕಾಲಿಕ ಗಾಳಿ ಮಳೆಗೆ ತಾಲೂಕಿನ ಲಾಳಸಂಗಿ, ಖೇಡಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮದ ಸರ್ವೆ ನಂಬರ್ ೩೨೨ ರಲ್ಲಿ ಒಂದು ಎಕರೆ ನಿಂಬೆ ಹಾಗೂ ಒಂದುವರೆ ಎಕರೆ ಬಾಳೆ ಬೆಳೆ ಸೇರಿದಂತೆ ಮಾವಿನ ಮರಗಳು ನೆಲಕ್ಕುರುಳಿವೆ.
ಚನ್ನಗೊಂಡ ವಿಠೋಬಾ ಶಿರಶ್ಯಾಡ ಎಂಬ ರೈತನ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.
ಸಾಯಂಕಾಲ ಸುಮಾರಿಗೆ ಏಕಾಏಕಿ ಬಿರುಗಾಳಿ ಪ್ರಾರಂಭವಾಗಿದ್ದು, ಜಮೀನಿನಲ್ಲಿನ ನಿಂಬೆ ಹಾಗೂ ಬಾಳೆ ಗಿಡಗಳು ಬಿರುಗಾಳಿಗೆ ನೆಲಕ್ಕೆ ಉರುಳಿದ್ದು, ರೈತನ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತ ನಿಂಬೆ ಬೆಳೆಯನ್ನು ೧೫ ವರ್ಷಗಳ ಹಿಂದೆ ನಾಟಿ ಮಾಡಿದ್ದ ಎಂದು ತಿಳಿದುಬಂದಿದೆ. ಬಾಳೆ ಗಿಡಗಳು ಸಹ ಫಸಲಿಗೆ ಬರುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದ್ದು ರೈತ ಚಿಂತಾಕ್ರಾಂತನಾಗಿದ್ದಾನೆ.
ಸರಕಾರ ರೈತನ ಬಗ್ಗೆ ಕಾಳಜಿ ತೋರಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

