ಚಡಚಣ: ಸಮೀಪದ ಭೀಮಾನದಿಯ ದಡದಲ್ಲಿರುವ ಹೊಳೆ ಉಮರಾಣಿಯ ಖಾಜಾ ಬಂದೇನವಾಜ ದೇವರ ಉರುಸು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯರು ಉರುಸಿನಲ್ಲಿ ಭಾಗಿಯಾಗಿ ತಮ್ಮ ತನುಮನಧನ ಅರ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು. ಸೂಫಿ ಸಂತ ಬಂದೇನವಾಜರು ಪವಾಡ ಪುರುಷರಾಗಿದ್ದರು. ಮಾನವಧರ್ಮ ಜಾಗೃತಿಗಾಗಿ ಊರೂರು ಸಂಚರಿಸುತ್ತಾ ಉಮರಾಣಿಯ ಹೊಳೆಯ ದಡದಲ್ಲಿ ವಿಶ್ರಾಂತಿ ಪಡೆದು ಅಲ್ಲಿಯ ಭಕ್ತರಿಗೆ ಕೆಲವೊಂದು ಪವಾಡ ಮಾಡಿ ತಮ್ಮ ಕುರುಹನ್ನು ಬಿಟ್ಟು ಹೋದರಂತೆ. ಅಂದಿನಿಂದ ಇಂದಿನ ವರೆಗೆ ಗ್ರಾಮಸ್ಥರು ಭಕ್ತಿಭಾವದಿಂದ ಅವರ ಉರುಸನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಇದು ಗ್ರಾಮಕ್ಕೆ ದೊಡ್ಡ ಜಾತ್ರೆಯಾಗಿದ್ದು, ಎಲ್ಲರೂ ಹಬ್ಬದಂತೆ ಆಚರಿಸುವರು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವರು. ಆಗಮಿಸಿದ ಭಕ್ತಾದಿಗಳಿಗೆ ಉರುಸು ಕಮೀಟಿ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಗುರುವಾರ ರಾತ್ರಿ ೮ ಗಂಟೆಗೆ ಸುಣ್ಣ ಲೇಪನ ಹಾಗೂ ವಿದ್ಯುತ್ ಅಲಂಕಾರ ಜರುಗಿತು. ಶುಕ್ರವಾರ ರಾತ್ರಿ ೮ ಗಂಟೆಗೆ ಗಂಧ ಲೇಪನ ಜರುಗಿತು.
ಶನಿವಾರ ಮುಂಜಾನೆ ೯ ಗಂಟೆಗೆ ಹೊಸ ಉಮರಾಣಿಯಲ್ಲಿ ಬಸವೇಶ್ವರ ಹರದೇಶಿ ಗೀಗೀ ಮೇಳ ಸಾ|| ಅಡ್ಯಾಳ, ತಾ|| ಅಥಣಿ. ಗಾಯಕರು ಪರಶುರಾಮ ಬಡಿಗೇರ ಸಂಗಡಿಗರು. ರೇಣುಕಾದೇವಿ ನಾಗೇಶಿ ಗೀಗೀ ಪದಗಳ ಮೇಳ ಸಾ|| ಬಾಳಿಗೇರಿ, ತಾ|| ಅಥಣಿ, ಗಾಯರು ಲಕ್ಷ್ಮೀದೇವಿ ಹಾಗೂ ಸಂಗಡಿಗರಿಂದ ಹರದೇಶಿ ನಾಗೇಶಿ ಗೀಗೀ ಪದಗಳು ಜರುಗಿದವು. ಅಂದು ಮಧ್ಯಾಹ್ನ ೪ ಗಂಟೆಗೆ ಭಕ್ತರಿಂದ ಕಾಯಿ ಕರ್ಪೂರ ನೈವೇದ್ಯ ಕಾರ್ಯಕ್ರಮ ಜರುಗಿತು. .ರಾತ್ರಿ ೯ ಗಂಟೆಗೆ ಹೊಸ ಉಮರಾಣಿಯ ಗರ್ಭಗುಡಿಯಿಂದ ದರ್ಗಾದವರೆಗೆ ವಾದ್ಯಗಳೊಂದಿಗೆ ಮದ್ದು ಸುಡುವುದರೊಂದಿಗೆ ಗಲೀಪ ಮೆರವಣಿಗೆ ಜರುಗಿತು. ರಾತ್ರಿ ೧೦ ಗಂಟೆಗೆ ವೀರೇಶ್ವರ ನಾಟ್ಯ ಸಂಘ ನಾಲವತವಾಡ ಇವರಿಂದ ಹೊಸ ಉಮರಾಣಿಯಲ್ಲಿ ‘ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ಸುಂದರ ಸಾಮಾಜಿಕ ನಾಟಕವು ಜರುಗಿತು.
ರವಿವಾರ ಮುಂಜಾನೆ ೮ ಗಂಟೆಯಿAದ ಮಧ್ಯಾಹ್ನ ೪ ಗಂಟೆಯವರೆಗೆ ಗೀಗೀ ಪದಗಳು ಜರುಗಿದವು. ರಾತ್ರಿ ೮ ಗಂಟೆಗೆ ಗಲೀಫವು ಮೂಲಸ್ಥಾನಕ್ಕೆ ಬಂದು ಕೂಡುವದು. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಬಂದೇ ನವಾಜ ದೇವರ ದರ್ಶನ ಪಡೆದು ಪುನೀತರಾದರು.
Subscribe to Updates
Get the latest creative news from FooBar about art, design and business.
Related Posts
Add A Comment

