Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಗಾಯನ ಕ್ಷೇತ್ರದಲ್ಲಿ ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಸಲುವಾಗಿ ಪ್ರಪ್ರಥಮಬಾರಿಗೆ ಕೊಲ್ಹಾರ ಪಟ್ಟಣದಲ್ಲಿ ವಿಜಯಪೂರ ಜಿಲ್ಲೆಯ ಗಾಯನ ಪ್ರತಿಭೆಗಳನ್ನು ಹೊರಹಾಕುವ ಪ್ರತಿಭಾನ್ವೇಷನೆಯ ಕಾರ್ಯಕ್ರಮವನ್ನು ಮೇ.೨೯ ಬುಧವಾರ ಮತ್ತು ೩೦ ಗುರುವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಕೆ.ಶರಣಬಸವ, ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದ್ದಾರೆ.ವಿಜಯ ವ್ಹಾಯ್ಸ್ ಆಪ್ ಕರ್ನಾಟಕ ಹಾಗೂ ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮೀತಿ, ಸಹಯೋಗದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಹಾಡುವ ಸ್ಪರ್ದೆಗಳು ಪಟ್ಟಣದ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆಮರೆಯ ಕಾಯಿಯಂತೆ ಇರುವ ಗಾಯಕರಿಗೆ ಅವಕಾಶ ಕಲ್ಪಿಸಲಾಗಿದೆ ಆದ್ದರಿಂದ ಜಿಲ್ಲೆಯ ಗಾಯಕರು ವಿಧ್ಯಾರ್ಥಿಗಳು ಮಹಿಳೆಯರು, ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕೆಂದು ವಿನಂತಿಸಿದರು.ಈ ಸಿಂಗಿಂಗ್ ಕಾಂಪಿಟೇಶನ್ ಮೆಗಾ ಆಡಿಶನ್‌ನಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ದಾವಣಗೆರೆಯಲ್ಲಿ ನಡೆಯುವ ಅಚಿತಿಮ ಹಂತದ ಸ್ಪರ್ದೆಯಲ್ಲಿ ಅವಕಾಶ ಕೊಡಲಾಗುವದು. ಆಸಕ್ತ ಗಾಯಕರು ತಮ್ಮ ಹೆಸರನ್ನು ಪರಶುರಾಮ ಬಸಲಿಂಗಪ್ಪ ಗಣಿ ಸಂಚಾರಿ ದೂರವಾಣಿ ಸಂಖ್ಯೆ: ೯೮೪೪೨೦೭೨೧೦ ಸಂಪರ್ಕಿಸಬಹುದು ಎಂದು ಆಯೋಜಕರು ಪತ್ರಿಕಾ ಪ್ರಕಟಣೆ…
ಚಡಚಣ: ಪ್ರತಿ ವರ್ಷದಂತೆ ಈ ವರ್ಷವು ಹಾಲಳ್ಳಿ ಗ್ರಾಮದ ಖಾಜಾ ಬಂದೇನವಾಜ ಉರುಸು ಅತಿ ವೈಭವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ಖಾಜಾ ಬಂದೇನವಾಜ ಮುಸ್ಲಿಂ ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ. ಹಾಲಳ್ಳಿ ಗ್ರಾಮದ ಖಾಜಾ ಬಂದೇನವಾಜ ದೇವರ ಉರುಸು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯರು ಉರುಸಿನಲ್ಲಿ ಭಾಗಿಯಾಗಿ ತಮ್ಮ ತನುಮನ ಧನ ಅರ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು. ಸೂಫಿ ಸಂತ ಬಂದೇನವಾಜರು ಪವಾಡ ಪುರುಷರಾಗಿದ್ದರು. ಮಾನವಧರ್ಮ ಜಾಗೃತಿಗಾಗಿ ಊರೂರು ಸಂಚರಿಸುತ್ತಾ ಹಾಲಳ್ಳಿ ಗ್ರಾಮದಲ್ಲಿ ಬಂದು ವಿಶ್ರಾಂತಿ ಪಡೆದು ಅಲ್ಲಿಯ ಭಕ್ತರಿಗೆ ಕೆಲವೊಂದು ಪವಾಡ ಮಾಡಿ ತಮ್ಮ ಕುರುಹನ್ನು ಬಿಟ್ಟು ಹೋದರಂತೆ. ಅಂದಿನಿಂದ ಇಂದಿನ ವರೆಗೆ ಗ್ರಾಮಸ್ಥರು ಭಕ್ತಿಭಾವದಿಂದ ಅವರ ಉರುಸನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಇದು ಗ್ರಾಮಕ್ಕೆ ದೊಡ್ಡ ಜಾತ್ರೆಯಾಗಿದ್ದು, ಎಲ್ಲರೂ ಹಬ್ಬದಂತೆ ಆಚರಿಸುವರು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದರು.ಶುಕ್ರವಾರ ಸಂಜೆ ೦೮ ರಿಂದ ೧೦ ಗಂಟೆಯವರೆಗೆ ‘ಗಂಧ ಲೇಪನ’ ಕಾರ್ಯಕ್ರಮ ನಡೆಯಿತು. ಶನಿವಾರ ಮುಂಜಾನೆ ೦೬ ರಿಂದ ರಾತ್ರಿ ೧೦ ಗಂಟೆಯವರೆಗೆ…
ವಿಜಯಪುರ: ಬೇಸಿಗೆ ರಜೆ ಮುಗಿಸಿಕೊಂಡು 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಆಗಮಿಸುವ ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಎಲ್ಲ ಮುಖ್ಯಗುರುಗಳಿಗೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ಮೂಲಕ ತಿಳಿಸಿದ ಅವರು ಮೇ 29 ಹಾಗೂ 30 ರಂದು ಪ್ರಾರಂಭೋತ್ಸವದ ಪೂರ್ವ ತಯಾರಿ ಶಾಲಾ ಸ್ವಚ್ಚತೆ, ಮೈದಾನ ಸ್ವಚ್ಚತೆ ಮಾಡಿಕೊಳ್ಳಬೇಕು. ಶಿಥಿಲಾವ್ಯಸ್ಥೆಯ ಕಟ್ಟಡ, ಮಳೆಯಿಂದ ಸೋರುವ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳನ್ನು ಬಳಕೆ ಮಾಡದೇ ಆ ಮಾಹಿತಿಯನ್ನು ಗ್ರಾಮ ಪಂಚಾಯತಿ ಹಾಗೂ ಬಿಇಓ ಕಛೇರಿಗೆ ಮಾಹಿತಿ ನೀಡುವದು.ಎಸ್ಡಿಎಂಸಿ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವ ಕುರಿತು ಚರ್ಚಿಸಿ ವಿವಿಧ ಸುರಕ್ಷಾ ಕ್ರಮ ಕೈಗೊಳ್ಳುವದು. ಶಾಲಾ ವೇಳಾಪಟ್ಟಿ, ವಾರ್ಷಿಕ ಕ್ರೀಯಾಯೋಜನೆ ಸೇರಿದಂತೆ ಇತರೆ ದಾಖಲೆ ಸಿದ್ದಪಡಿಸಿಕೊಳ್ಳುವದು. ಮೇ 31ರಂದು ಉತ್ಸಾಹದಿಂದ ಮುಖ್ಯಗುರುಗಳು, ಶಿಕ್ಷಕರು, ಎಸ್ಡಿಎಂಸಿ ಹಾಗೂ ಪೋಷಕರು ಸೇರಿ ಕಲಿಕಾ ಸಾಧಕರಂತೆ ಮಕ್ಕಳನ್ನು ಸ್ವಾಗತಿಸಿಕೊಳ್ಳುವದು. ಈ ದಿನದಂದು ಶಾಲೆಯನ್ನು ತಳಿರು ರೋರಣಗಳಿಂದ ಸಿಂಗರಿಸಿ ಮಕ್ಕಳಿಗೆ…
ಮುದ್ದೇಬಿಹಾಳ: ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡಿರುವ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮಿ ನಿಂಗಪ್ಪ ಗರಗ ಅವರನ್ನ ನ್ಯಾಯವಾದಿಗಳ ಸಂಘದ ವತಿಯಿಂದ ದಂಪತಿಗಳ ಸಮೇತ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಗರಗ ಅವರು, ಇಲ್ಲಿನ ನ್ಯಾಯವಾದಿಗಳ ಸಂಘ ತುಂಬ ಒಳ್ಳೆಯದು. ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸಾಕಷ್ಟು ಸಹಕಾರ ನೀಡುತ್ತಾರೆ. ಅಲ್ಲದೇ ಲೋಕ್ ಅದಾಲತ್‌ನಲ್ಲಿ ಇಲ್ಲಿನ ನ್ಯಾಯಾಲಯ ಮೂರನೇ ಸ್ಥಾನದಲ್ಲಿದೆ ಎಂದರೆ ಎಲ್ಲ ನ್ಯಾಯವಾದಿಗಳ ಸಹಕಾರ ಕಾರಣವಾಗಿದೆ. ಇಲ್ಲಿನ ನ್ಯಾಯಾಲಯದ ಸಿಬ್ಬಂದಿ ಕೂಡ ಅಷ್ಟೇ ಹೃದಯವಂತರು. ಇಲ್ಲಿ ಸೇವೆಯಲ್ಲಿರುವಾಗ ನನಗೆ ಯಾವತ್ತೂ ಮನಸ್ಸಿಗೆ ನೋವು ತಂದ ಘಟನೆಗಳಿಲ್ಲ. ಎಲ್ಲರ ಸಹಕಾರವನ್ನು ನಾನು ಸ್ಮರಿಸುವೆ ಎಂದರು.ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌಡರ, ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಎಲ್.ಎಸ್.ಮೇಟಿ, ಎಂ.ಬಿ.ಬಿರಾದಾರ, ಬಸಣ್ಣ ಮುಂದಿನಮನಿ, ಸಂತೋಷ ನಾಯಕ, ಮಾಂತಗೌಡ ಪಾಟೀಲ, ಹಸೀನಾ ಅನಂತಪೂರ, ರಶ್ಮಿ ಕುಲಕರ್ಣಿ, ಜಯಾ ಸಾಲಿಮಠ, ಶ್ರೀದೇವಿ ರಾಜೂರ ಸೇರಿದಂತೆ…
ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ.ತಾಲೂಕಿನ ತಡವಲಗಾ ಗ್ರಾಮದ ಜೋಡುಗುಡಿ ಹತ್ತೀರ ರಾಷ್ಟ್ರೀಯ ಹೆದ್ದಾರಿ ತಡೆದು ಶುಕ್ರವಾರ ಪ್ರತಿಭಟನೆ ಮಾಡಲಾಗಿತ್ತು. ಜನ- ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲ. ಈ ಭಾಗದಲ್ಲಿ ಕುಡಿಯುವ ನೀರಿನ ದೊಡ್ಡ ಪ್ರಮಾಣದ ಹಾಹಾಕಾರವಿದ್ದು, ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನೆ ಮಾಡಲಾಗಿತ್ತು.ತಡವಲಗಾ, ಅರ್ಥಗಾ, ಕೊಟ್ನಾಳ, ನಿಂಬಾಳ, ಸೇರಿದಂತೆ ಇನ್ನಿತರ ಕೆರೆಗಳಿಗೆ ಹಾಗೂ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ ರೂಗಿ, ಹಂಜಗಿ, ಚಿಕ್ಕಬೇವನೂರ, ಬೋಳೆಗಾಂವ, ಗಣವಲಗಾ, ತೆನ್ನೆಳ್ಳ್ಳಿಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆನೀರಿಲ್ಲದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಈಗಕೆರೆಗಳನ್ನು ತುಂಬಿದರೆ ಆಯಾ ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ತಿಳಿಸಿದರು.ಈ ಸಂದರ್ಭದಲ್ಲಿ ಧರಣಿ ನಿರತ ಸ್ಥಳಕ್ಕೆ ಕೆಬಿಜೆಎನ್‍ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಕಂದಾಯ ಉಪವಿಭಾಗಾಧಿಕಾರಿ ಅಬೀದ್…
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಕೆರೆಗೆ, ಕೆರೆ ತುಂಬುವ ಯೋಜನೆಯಡಿ ನೀರು ಹರಿಸಿ ಭರ್ತಿ ಮಾಡುವುದರ ಮೂಲಕ ಜನತೆಯ ಬಹುದಿನದ ಬೇಡಿಕೆ ಈಡೇರಿಸುವಂತೆ ರೈತರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಕೆರೆಗೆ ನೀರು ಹರಿಸುವ ಮೂಲಕ ಈ ಭಾಗದ ಜನ, ಜಾನುವಾರುಗಳ ನೀರಿನ ತಾಪತ್ರಯಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಕುರಿತು ಗ್ರಾಮದ ಮೈನುದ್ದೀನ ಬಾಗವಾನ ಮಾತನಾಡಿ, ನಮ್ಮ ಗ್ರಾಮದ ಕೆರೆ ತುಂಬುವ ಯೋಜನೆ ಜಾರಿಗಾಗಿ ಕಲಕೇರಿಯಲ್ಲಿ ೩೧ ದಿನ ಧರಣಿ ಸತ್ಯಾಗ್ರಹ ಹಾಗೂ ಹೋರಾಟ ಮಾಡಲಾಗಿತ್ತು. ಸತ್ಯಾಗ್ರಹ ಹಾಗೂ ಹೋರಾಟದ ಫಲವಾಗಿ ಅಂದಿನ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸ್ಥಳಕ್ಕೆ ಭೇಟಿ ನೀಡಿ, ಕೆರೆ ತುಂಬುವ ಯೋಜನೆಯಡಿ ಕಾರ್ಯಕ್ಕೆ ಮಂಜೂರಾತಿ ದೊರಕಿಸಿ, ಅದ್ದೂರಿಯಾಗಿ ಪೂಜೆ ಕೈಗೊಳ್ಳುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಕಾಮಗಾರಿ ಪ್ರಾರಂಭವಾಗಿತ್ತು. ಆದರೆ ಏಕಾಏಕಿ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕೆರೆಯಲ್ಲಿ ನೀರು ಬರಲಿಲ್ಲ.ನಂತರ ಶಾಸಕ ರಾಜುಗೌಡ ಪಾಟೀಲರು ಡಿಸೆಂಬರ್ ಅಂತ್ಯದಲ್ಲಿ ಕೆರೆಗೆ ನೀರು…
ಬಸವನಬಾಗೇವಾಡಿ: ಚುಟುಕು ಸಾಹಿತ್ಯ ಪ್ರಕಾರಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಚುಟುಕು ಸಾಹಿತ್ಯ ಕೇಂದ್ರ ಸಮಿತಿ ಹುಬ್ಬಳ್ಳಿ ಸ್ಥಳೀಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಖೇಡದ ಅವರಿಗೆ ಚುಟುಕು ದಾಸೋಹಿ ಪ್ರಶಸ್ತಿಯನ್ನು ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 12ನೆಯ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಗವಿಮಠ ಬಸವಕಲ್ಯಾಣ, ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಮನೋಹರ ಮೇಲ್ಮನೆ, ಶಿರಸಿ ಜಿಲ್ಲಾ ಸಾಹಿತ್ಯ ಸಂಚಲನಾಧ್ಯಕ್ಷ ಕೃಷ್ಣ ದತ್ತಾತ್ರೇಯ ಪದಕಿ, ಜಿಲ್ಲಾಧ್ಯಕ್ಷ ಜಿ. ಯು. ನಾಯ್ಕ, ಹುಬ್ಬಳ್ಳಿಯ ಕಚುಸಾಪ ಪ್ರಸಾರಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು,ತಾಲೂಕು ಅಧ್ಯಕ್ಷ ಮಂಜುನಾಥ್ ಹೆಗಡೆ ಮತ್ತು ಗಣ್ಯಮಾನ್ಯರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ತಾಲೂಕಿನ ದೇಗಿನಾಳ ಗ್ರಾಮದ ಅಂಬಿಗರ ಚೌಡಯ್ಯ ದೇವಸ್ಥಾನ ಹತ್ತಿರವಿರುವ ಶುದ್ಧ ನೀರಿನ ಘಟಕ ಭಾನುವಾರ ಸಂಜೆ ಅಬ್ಬರದ ಗಾಳಿ-ಮಳೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ೨೦೧೯-೨೦ ರಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕವು ಅಬ್ಬರದ ಗಾಳಿ-ಮಳೆಗೆ ಸಂಪೂರ್ಣ ಕಿತ್ತುಹೋಗಿದೆ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ವ್ಹಿ.ಬಿ.ಗೊಂಗಡಿ, ಮಸಬಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ತಳವಾರ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಗ್ರಾಮದಲ್ಲಿ ಮೂರು ವಿದ್ಯುತ್ ಕಂಬಗಳು, ದೊಡ್ಡ ಮರಗಳು ಬಿದ್ದಿವೆ. ಗ್ರಾಮದ ಕೆಲ ಕುಟುಂಬದವರು ಹಾಕಿಕೊಂಡು ವಾಸವಾಗಿದ್ದ ಪತ್ರಾಸ್ ಶೆಡ್ ಅಬ್ಬರದ ಗಾಳಿಗೆ ಹಾರಿ ಹೋಗಿವೆ. ಇದರಿಂದಾಗಿ ಈ ಕುಟುಂಬದವರು ಬೀದಿ ಪಾಲಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ದ್ಯಾವನಗೌಡ ಪಾಟೀಲ ಹೇಳಿದರು.ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆಃ ಪಟ್ಟಣ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿವೆ. ಎಷ್ಟು ಕಂಬಗಳು ಎಂಬ ಮಾಹಿತಿ ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ. ಮಾಹಿತಿ…
ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಭಾನುವಾರ ಸಂಜೆ ೬.೫೦ ಗಂಟೆಗೆ ಅಬ್ಬರದ ಗಾಳಿ, ಮಿಂಚು-ಸಿಡಿಲಿನೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆ ಕಾಲಕ್ಕಿಂತಲೂ ಜೋರಾಗಿ ನಂತರ ಜಿಟಿ ಜಿಟಿ ಮಳೆ ರಾತ್ರಿ ೯ ಗಂಟೆಗೆಯವರೆಗೂ ಮಳೆ ಸುರಿಯಿತು.ಪಟ್ಟಣದ ನಂದಿ ಬಡಾವಣೆ ರಸ್ತೆಯಲ್ಲಿರುವ ಮರ ಸೇರಿದಂತೆ ಪಟ್ಟಣ ಸೇರಿದಂತೆ ವಿವಿದೆಢೆ ವಿವಿಧ ಮರಗಳು, ಟೆಂಗಿನ ಮರಗಳು ಅಬ್ಬರದ ಗಾಳಿಗೆ ಧರೆಗುಳಿದಿವೆ. ಅಬ್ಬರದ ಗಾಳಿಗೆ ಕೆಲವೆಡೆ ಶೆಡ್ ಮೇಲಿನ ಪತ್ರಾಸ್ ಗಳು ಹಾರಿ ಹೋದ ವರದಿಯಾಗಿವೆ.ತಾಲೂಕಿನ ಜಾಲಿಹಾಳ ತಾಂಡಾದ ಕಿಸಾನ ಲಿಂಬು ನಾಯಕ ಅವರ ಆಕಳು ಸಿಡಿಲು ಬಡಿದು ಮೃತ ಪಟ್ಟಿದೆ. ಬಸವನಬಾಗೇವಾಡಿಯ ಶಂಕರ ಸಾಬು ಲಮಾಣಿ ಅವರ ದ್ರಾಕ್ಷಿ, ಉಕ್ಕಲಿಯ ಭೀಮಾಬಾಯಿ ಶಂಕರ ರಾಠೋಡ ಅವರ ಲಿಂಬೆ ಬೆಳೆ, ಜಾಲಿಹಾಳ ತಾಂಡಾದ ಪ್ರಕಾಶ ಬೆಣ್ಣೂರ ಅವರ ಟೆಂಗಿನ ಮರಗಳು, ಮನಗೂಳಿಯ ಮಾರುತಿ ದ್ಯಾಮಣ್ಣ ಕಾರಜೋಳ ಅವರ ಪಪ್ಪಾಯ ಗಿಡಗಳು ಗಾಳಿ-ಮಳೆಗೆ ಹಾನಿಯಾಗಿವೆ.ಬಸವನಬಾಗೇವಾಡಿಯ ಪರಸಪ್ಪ ಮುತ್ತಪ್ಪ ಒಡೆಯರ ,ಹುಣಶ್ಯಾಳ ಪಿಬಿಯ ರಾಜಮಾ ರಾಜೇಸಾಬ ಚಪ್ಪರಬಂದ, ಉಕ್ಕಲಿಯ…
ವಿಜಯಪುರ: ಭಾರತದ ಪ್ರಥಮ ಮಾಜಿ ಪ್ರಧಾನಿ ದಿ. ಶ್ರೀ ಪಂಡಿತ ಜವಾಹರಲಾಲ ನೆಹರುಜಿಯವರ 60ನೇ ಪುಣ್ಯತಿಥಿಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ಪಂಡಿತ ಜವಾಹರಲಾಲ ನೆಹರುಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಜವಾಹರಲಾಲ ನೆಹರುಜಿಯವರು ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು.ಜವಾಹರಲಾಲ ನೆಹರುಜಿಯವರು ಮಕ್ಕಳ ಚಾಚಾ ನೆಹರು ಆಗಿದ್ದರು. ಭಾರತದ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಭಾರತದ “ನವಭಾರತ ಶಿಲ್ಪಿ” ಎಂದು ಕರೆಯಲ್ಪಟ್ಟರು. ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು. ಜವಾಹರಲಾಲ ನೆಹರುರವರು ದೇಶವನ್ನು ಮುನ್ನಡೆಸಿದ ನೆಹರುರವರ ಸ್ಮರಣೆಗಿಂತ ಭವ್ಯ ಭಾರತದ ಕನಸನ್ನು ನನಸು ಮಾಡುವುದೇ ನಿಜವಾಗಿಯೂ ನಾವೆಲ್ಲರು ಅವರಿಗೆ ತೋರುವ ಕೃತಜ್ಞತೆ. ಮಕ್ಕಳನ್ನು ತುಂಬಾ ಹೃದಯದಿಂದ ಪ್ರೀತಿಸುತ್ತಿದ್ದ ನೆಹರು ಅವರು ತಮ್ಮ ಹುಟ್ಟು ಹಬ್ಬ ನವೆಂಬರ್ ೧೪ ತಾರೀಖನ್ನು ಅವರ ಹೆಸರಿನಲ್ಲಿ ಆಚರಿಸದೇ ಮಕ್ಕಳ ದಿನಾಚರಣೆ ಎಂದು ಆಚರಿಸಲು ಕೋರಿದವರು. ಜವಾಹರಲಾಲ ನೆಹರು ಅವರು ೧೯೨೯ ರಲ್ಲಿ ಮೊದಲ ಬಾರಿಗೆ ಐ.ಎನ್.ಸಿ. ಅಧ್ಯಕ್ಷರಾಗಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ…
