ವಿಜಯಪುರ: ಭಾರತದ ಪ್ರಥಮ ಮಾಜಿ ಪ್ರಧಾನಿ ದಿ. ಶ್ರೀ ಪಂಡಿತ ಜವಾಹರಲಾಲ ನೆಹರುಜಿಯವರ 60ನೇ ಪುಣ್ಯತಿಥಿಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಪಂಡಿತ ಜವಾಹರಲಾಲ ನೆಹರುಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಜವಾಹರಲಾಲ ನೆಹರುಜಿಯವರು ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು.
ಜವಾಹರಲಾಲ ನೆಹರುಜಿಯವರು ಮಕ್ಕಳ ಚಾಚಾ ನೆಹರು ಆಗಿದ್ದರು. ಭಾರತದ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಭಾರತದ “ನವಭಾರತ ಶಿಲ್ಪಿ” ಎಂದು ಕರೆಯಲ್ಪಟ್ಟರು. ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು. ಜವಾಹರಲಾಲ ನೆಹರುರವರು ದೇಶವನ್ನು ಮುನ್ನಡೆಸಿದ ನೆಹರುರವರ ಸ್ಮರಣೆಗಿಂತ ಭವ್ಯ ಭಾರತದ ಕನಸನ್ನು ನನಸು ಮಾಡುವುದೇ ನಿಜವಾಗಿಯೂ ನಾವೆಲ್ಲರು ಅವರಿಗೆ ತೋರುವ ಕೃತಜ್ಞತೆ. ಮಕ್ಕಳನ್ನು ತುಂಬಾ ಹೃದಯದಿಂದ ಪ್ರೀತಿಸುತ್ತಿದ್ದ ನೆಹರು ಅವರು ತಮ್ಮ ಹುಟ್ಟು ಹಬ್ಬ ನವೆಂಬರ್ ೧೪ ತಾರೀಖನ್ನು ಅವರ ಹೆಸರಿನಲ್ಲಿ ಆಚರಿಸದೇ ಮಕ್ಕಳ ದಿನಾಚರಣೆ ಎಂದು ಆಚರಿಸಲು ಕೋರಿದವರು. ಜವಾಹರಲಾಲ ನೆಹರು ಅವರು ೧೯೨೯ ರಲ್ಲಿ ಮೊದಲ ಬಾರಿಗೆ ಐ.ಎನ್.ಸಿ. ಅಧ್ಯಕ್ಷರಾಗಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಷ್ ಕಾಲೇಭಾಗ, ಅಫ್ಜಲ್ ಜಾನವೆಕರ, ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಶರಣಪ್ಪ ಯಕ್ಕುಂಡಿ, ಹಾಜೀಲಾಲ ದಳವಾಯಿ, ಸಂತೋಷ ಬಾಲಗಾಂವಿ, ದಿಲೀಪ ಪ್ರಭಾಕರ, ಕೃಷ್ಣ ಲಮಾಣಿ, ವಿಜಯಕುಮಾರ್ ಕಾಳೆ,ಪ್ರದೀಪ್ ಸೊರ್ಯಂಶಿ, ಪರಶುರಾಮ ಹೊಸಮನಿ, ವಿರೇಶ ಕಲಾಲ, ಡಿ ಎಚ ಕಲಾಲ, ದೇಸು ಚವ್ಹಾಣ, ಗುಲಾಬ ಚವ್ಹಾಣ, ಮಹಾದೇವ ಜಾಧವ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿರವರ ತಂದೆಯಾದ ದಿವಂಗತ ಶಿವಲಿಂಗಪ್ಪ ಗುರುಲಿಂಗಪ್ಪ ಲೋಣಿ ನಿಧನ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷ ಮೌನ ಆಚರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

