ಬಸವನಬಾಗೇವಾಡಿ: ತಾಲೂಕಿನ ದೇಗಿನಾಳ ಗ್ರಾಮದ ಅಂಬಿಗರ ಚೌಡಯ್ಯ ದೇವಸ್ಥಾನ ಹತ್ತಿರವಿರುವ ಶುದ್ಧ ನೀರಿನ ಘಟಕ ಭಾನುವಾರ ಸಂಜೆ ಅಬ್ಬರದ ಗಾಳಿ-ಮಳೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ೨೦೧೯-೨೦ ರಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕವು ಅಬ್ಬರದ ಗಾಳಿ-ಮಳೆಗೆ ಸಂಪೂರ್ಣ ಕಿತ್ತುಹೋಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ವ್ಹಿ.ಬಿ.ಗೊಂಗಡಿ, ಮಸಬಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ತಳವಾರ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ಮೂರು ವಿದ್ಯುತ್ ಕಂಬಗಳು, ದೊಡ್ಡ ಮರಗಳು ಬಿದ್ದಿವೆ. ಗ್ರಾಮದ ಕೆಲ ಕುಟುಂಬದವರು ಹಾಕಿಕೊಂಡು ವಾಸವಾಗಿದ್ದ ಪತ್ರಾಸ್ ಶೆಡ್ ಅಬ್ಬರದ ಗಾಳಿಗೆ ಹಾರಿ ಹೋಗಿವೆ. ಇದರಿಂದಾಗಿ ಈ ಕುಟುಂಬದವರು ಬೀದಿ ಪಾಲಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ದ್ಯಾವನಗೌಡ ಪಾಟೀಲ ಹೇಳಿದರು.
ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆಃ ಪಟ್ಟಣ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿಗೆ ವಿದ್ಯುತ್ ಕಂಬಗಳು ಬಿದ್ದಿವೆ. ಎಷ್ಟು ಕಂಬಗಳು ಎಂಬ ಮಾಹಿತಿ ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ. ಮಾಹಿತಿ ಬಂದ ನಂತರ ತಿಳಿಸುವುದಾಗಿ ಹೆಸ್ಕಾಂ ಎಇಇ ಜಿ.ಬಿ.ಸಂಪನ್ನವರ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

