ಕೊಲ್ಹಾರ: ಗಾಯನ ಕ್ಷೇತ್ರದಲ್ಲಿ ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಸಲುವಾಗಿ ಪ್ರಪ್ರಥಮಬಾರಿಗೆ ಕೊಲ್ಹಾರ ಪಟ್ಟಣದಲ್ಲಿ ವಿಜಯಪೂರ ಜಿಲ್ಲೆಯ ಗಾಯನ ಪ್ರತಿಭೆಗಳನ್ನು ಹೊರಹಾಕುವ ಪ್ರತಿಭಾನ್ವೇಷನೆಯ ಕಾರ್ಯಕ್ರಮವನ್ನು ಮೇ.೨೯ ಬುಧವಾರ ಮತ್ತು ೩೦ ಗುರುವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಕೆ.ಶರಣಬಸವ, ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದ್ದಾರೆ.
ವಿಜಯ ವ್ಹಾಯ್ಸ್ ಆಪ್ ಕರ್ನಾಟಕ ಹಾಗೂ ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮೀತಿ, ಸಹಯೋಗದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಹಾಡುವ ಸ್ಪರ್ದೆಗಳು ಪಟ್ಟಣದ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆಮರೆಯ ಕಾಯಿಯಂತೆ ಇರುವ ಗಾಯಕರಿಗೆ ಅವಕಾಶ ಕಲ್ಪಿಸಲಾಗಿದೆ ಆದ್ದರಿಂದ ಜಿಲ್ಲೆಯ ಗಾಯಕರು ವಿಧ್ಯಾರ್ಥಿಗಳು ಮಹಿಳೆಯರು, ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕೆಂದು ವಿನಂತಿಸಿದರು.
ಈ ಸಿಂಗಿಂಗ್ ಕಾಂಪಿಟೇಶನ್ ಮೆಗಾ ಆಡಿಶನ್‌ನಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ದಾವಣಗೆರೆಯಲ್ಲಿ ನಡೆಯುವ ಅಚಿತಿಮ ಹಂತದ ಸ್ಪರ್ದೆಯಲ್ಲಿ ಅವಕಾಶ ಕೊಡಲಾಗುವದು. ಆಸಕ್ತ ಗಾಯಕರು ತಮ್ಮ ಹೆಸರನ್ನು ಪರಶುರಾಮ ಬಸಲಿಂಗಪ್ಪ ಗಣಿ ಸಂಚಾರಿ ದೂರವಾಣಿ ಸಂಖ್ಯೆ: ೯೮೪೪೨೦೭೨೧೦ ಸಂಪರ್ಕಿಸಬಹುದು ಎಂದು ಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
