ವಿಜಯಪುರ: ಬೇಸಿಗೆ ರಜೆ ಮುಗಿಸಿಕೊಂಡು 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಆಗಮಿಸುವ ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಎಲ್ಲ ಮುಖ್ಯಗುರುಗಳಿಗೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ತಿಳಿಸಿದ ಅವರು ಮೇ 29 ಹಾಗೂ 30 ರಂದು ಪ್ರಾರಂಭೋತ್ಸವದ ಪೂರ್ವ ತಯಾರಿ ಶಾಲಾ ಸ್ವಚ್ಚತೆ, ಮೈದಾನ ಸ್ವಚ್ಚತೆ ಮಾಡಿಕೊಳ್ಳಬೇಕು. ಶಿಥಿಲಾವ್ಯಸ್ಥೆಯ ಕಟ್ಟಡ, ಮಳೆಯಿಂದ ಸೋರುವ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳನ್ನು ಬಳಕೆ ಮಾಡದೇ ಆ ಮಾಹಿತಿಯನ್ನು ಗ್ರಾಮ ಪಂಚಾಯತಿ ಹಾಗೂ ಬಿಇಓ ಕಛೇರಿಗೆ ಮಾಹಿತಿ ನೀಡುವದು.
ಎಸ್ಡಿಎಂಸಿ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವ ಕುರಿತು ಚರ್ಚಿಸಿ ವಿವಿಧ ಸುರಕ್ಷಾ ಕ್ರಮ ಕೈಗೊಳ್ಳುವದು. ಶಾಲಾ ವೇಳಾಪಟ್ಟಿ, ವಾರ್ಷಿಕ ಕ್ರೀಯಾಯೋಜನೆ ಸೇರಿದಂತೆ ಇತರೆ ದಾಖಲೆ ಸಿದ್ದಪಡಿಸಿಕೊಳ್ಳುವದು. ಮೇ 31ರಂದು ಉತ್ಸಾಹದಿಂದ ಮುಖ್ಯಗುರುಗಳು, ಶಿಕ್ಷಕರು, ಎಸ್ಡಿಎಂಸಿ ಹಾಗೂ ಪೋಷಕರು ಸೇರಿ ಕಲಿಕಾ ಸಾಧಕರಂತೆ ಮಕ್ಕಳನ್ನು ಸ್ವಾಗತಿಸಿಕೊಳ್ಳುವದು. ಈ ದಿನದಂದು ಶಾಲೆಯನ್ನು ತಳಿರು ರೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಸಿಹಿಊಟದೊಂದಿಗೆ ಅಕ್ಷರ ದಾಸೋಹ ಆಯೋಜಿಸುವದು ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಶಾಲೆಗಳ ಪ್ರಾರಂಭೋತ್ಸವ ಸಿದ್ದತೆ ಮಾಡಿಕೊಳ್ಳಿ :ಬಿಇಓ ಪ್ರಮೋದಿನಿ
Related Posts
Add A Comment

