ಮುದ್ದೇಬಿಹಾಳ: ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡಿರುವ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮಿ ನಿಂಗಪ್ಪ ಗರಗ ಅವರನ್ನ ನ್ಯಾಯವಾದಿಗಳ ಸಂಘದ ವತಿಯಿಂದ ದಂಪತಿಗಳ ಸಮೇತ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಗರಗ ಅವರು, ಇಲ್ಲಿನ ನ್ಯಾಯವಾದಿಗಳ ಸಂಘ ತುಂಬ ಒಳ್ಳೆಯದು. ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸಾಕಷ್ಟು ಸಹಕಾರ ನೀಡುತ್ತಾರೆ. ಅಲ್ಲದೇ ಲೋಕ್ ಅದಾಲತ್‌ನಲ್ಲಿ ಇಲ್ಲಿನ ನ್ಯಾಯಾಲಯ ಮೂರನೇ ಸ್ಥಾನದಲ್ಲಿದೆ ಎಂದರೆ ಎಲ್ಲ ನ್ಯಾಯವಾದಿಗಳ ಸಹಕಾರ ಕಾರಣವಾಗಿದೆ. ಇಲ್ಲಿನ ನ್ಯಾಯಾಲಯದ ಸಿಬ್ಬಂದಿ ಕೂಡ ಅಷ್ಟೇ ಹೃದಯವಂತರು. ಇಲ್ಲಿ ಸೇವೆಯಲ್ಲಿರುವಾಗ ನನಗೆ ಯಾವತ್ತೂ ಮನಸ್ಸಿಗೆ ನೋವು ತಂದ ಘಟನೆಗಳಿಲ್ಲ. ಎಲ್ಲರ ಸಹಕಾರವನ್ನು ನಾನು ಸ್ಮರಿಸುವೆ ಎಂದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌಡರ, ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಎಲ್.ಎಸ್.ಮೇಟಿ, ಎಂ.ಬಿ.ಬಿರಾದಾರ, ಬಸಣ್ಣ ಮುಂದಿನಮನಿ, ಸಂತೋಷ ನಾಯಕ, ಮಾಂತಗೌಡ ಪಾಟೀಲ, ಹಸೀನಾ ಅನಂತಪೂರ, ರಶ್ಮಿ ಕುಲಕರ್ಣಿ, ಜಯಾ ಸಾಲಿಮಠ, ಶ್ರೀದೇವಿ ರಾಜೂರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

