Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದಲ್ಲಿ ಬುಧವಾರ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ತನಿಖಾದಳದ ಸದಸ್ಯರ ತಂಡ ಕೊಟ್ಟಾ ೨೦೦೩ ಕಾಯ್ದೆ ಅಡಿ ದಾಳಿ ನಡೆಸಿತು.ಜಿಲ್ಲಾ ಸರ್ವೇಕ್ಷಣಾಧಿಕಾರಿಣಿ ಡಾ.ಕವಿತಾ ದೊಡ್ಡಮನಿ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯನ್ನು ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯಿಂದ ಪ್ರಾರಂಭಿಸಿ ಮುಖ್ಯ ಬಜಾರದಿಂದ ಇಂದಿರಾ ವೃತ್ತದವರೆಗೆ ಮಾರ್ಗಮಧ್ಯದಲ್ಲಿ ಇರುವ ಹೋಟಲ್ ಸೇರಿದಂತೆ ಪಾನ್‌ಶಾಪ್‌ಗಳಿಗೆ ದಾಳಿಮಾಡಿ ದಂಡ ವಿಧಿಸಲಾಯಿತು.ಮಾರ್ಗದ ಮಧ್ಯೆ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಕರಿಗೆ/ವ್ಯಾಪಾರಸ್ಥರಿಗೆ ಕೊಟ್ಟಾ ೨೦೦೩ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ಒಟ್ಟು ರೂ.೨೨೦೦ ದಂಡ ವಸೂಲು ಮಾಡಿ ಬಿಸಿ ಮುಟ್ಟಿಸಿದರು. ಕೆಲವು ಕಡೆ ಕಾಯ್ದೆಯ ಸೆಕ್ಷನ್ ೪ ಮತ್ತು ೬(ಎ)ಗಳ ನಾಮಫಲಕಗಳನ್ನು ಅಳವಡಿಸಿ ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು.ಆರೋಗ್ಯ ಇಲಾಖೆಯಿಂದದಾಳಿಯಲ್ಲಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ, ಕ್ಷೆತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್.ತೇರದಾಳ, ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಛಲವಾದಿ, ಎಮ್.ಎಸ್.ಗೌಡರ, ಎಸ್.ಆರ್.ಸಜ್ಜನ,…
ಕಳಪೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ ವಿಜಯಪುರ: ೨೦೨೪-೨೫ನೇ ಮುಂಗಾರು ಹಂಗಾಮಿನ ರೈತರ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಸರಕಾರದ ನಿಗದಿತ ಪಡೆಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ಶಾಶ್ವತ ಲೈಸನ್ಸ್ ರದ್ದು ಮಾಡಬೇಕು, ಹಾಗೆ ರೈತ ಸಂಪರ್ಕ ಕೇಂದ್ರದಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಒದಗಿಸಿ ರೈತರಿಗೆ ಅನ್ಯಾಯವಾಗದಂತೆ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೃಷಿ ಆಯುಕ್ತ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತುಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಅಧಿಕೃತ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರು ಪ್ರತಿವರ್ಷ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ, ಉದಾ : ಹತ್ತಿ ಬೀಜ- ನಾರ್ಥ ಸೀಡ್ಸ್ ಸಂಕೇತ, ಮತ್ತು ಯು ಎಸ್ ಅಗ್ರಿ ಸೀಡ್ಸ್ ೭೦೬೭ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ…
ವಿಜಯಪುರ: ಕನ್ನಡ ಅನ್ನದ ಭಾಷೆಯಾಗಬೇಕು. ಜಾಗತೀಕರಣದ ಪ್ರಭಾವದಿಂದ ಕನ್ನಡ ನಾಡು ನುಡಿಗೆ ಹಿನ್ನಡೆ ಆಗುತ್ತಿರುವುದು ವಿಷಾದನೀಯ. ಕನ್ನಡಿಗರು ಇತರ ಭಾಷೆಯ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಜಾಗತೀಕರಣದ ಪೈಪೋಟಿಗೆ ವಾಲುತ್ತಿರುವುದು ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ,ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ದಿ ಗೌರಮ್ಮ ಕೊಟ್ರಬಸಯ್ಯ ತಂಬ್ರಹಳ್ಳಿಮಠ ದತ್ತಿ. ದತ್ತಿ ದಾನಿಗಳು ಶ್ರೀ ಅಭಿನವ ಶಿವಪುತ್ರ ಸ್ವಾಮಿಜಿ ಹಾಗು ದಿ ರಾಮರಾವ ಪ್ರಭಾಕರ ಶಂಕರ ದತ್ತಿ. ದತ್ತಿ ದಾನಿಗಳು ಸರೋಜಾ ರಾಮರಾವ ಕುಲಕರ್ಣಿ ಇವರುಗಳ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು.ಕನ್ನಡ ಉಳಿದರೆ ಕನ್ನಡಿಗರ ಉಳಿವು. ಸರ್ಕಾರ ಮಾತೃ ಭಾಷೆಗೆ ಪ್ರಾಧ್ಯಾನತೆ ನೀಡಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ ತಿಕೋಟಾ ವಸತಿ ಶಾಲೆಯ ಪ್ರಾಧ್ಯಾಪಕ ಸೂರ್ಯಕಾಂತ ಹೊಸಮನಿ ಮಾತನಾಡಿ, ರಾಜಕೀಯವು ಸಮಾಜದಲ್ಲಿ ಬೇದ…
ಇಂಡಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲೂಕಾ ಅಧ್ಯಕ್ಷರಾಗಿ ತಮ್ಮಾರಾಯ ಆಸಂಗಿ ಅವರನ್ನು ಆಯ್ಕೆ ಮಾಡಿ ಜಿಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಆದೇಶ ಪತ್ರ ನೀಡಿದ್ದಾರೆ.ಇಂಡಿ ಪಟ್ಟಣದ ಹಳೆ ತಹಶೀಲ್ದಾರ ಕಛೇರಿ ಹತ್ತಿರ ಇರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಛೇರಿಯಲ್ಲಿ ಇಂಡಿ ತಾಲೂಕಾ ನೂತನ ಅಧ್ಯಕ್ಷರಾಗಿ ತಮ್ಮಾರಾಯ ಆಸಂಗಿ ಅವರನ್ನು ಆಯ್ಕೆ ಮಾಡಿದರು.ನಂತರ ಜಿಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿದ ಅವರು, ತಾಲೂಕ ರೈತರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕು ನಿಲ್ಲಬೇಕು. ರಾಜ್ಯ ರೈತ ಸಂಘವು ಕೆಲವು ಸೈದ್ದಾಂತಿಕ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದು, ಈ ವಿಚಾರಗಳಿಗೆ ಮತ್ತು ಸಂವಿಧಾನ ಬದ್ದ ನೀತಿ ನಿಯಮಗಳನ್ನು ಗಾಳಿಗೆ ತೋರದೆ ಶಿಸ್ತಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ಯಾವುದೇ ಮತ ಜಾತಿಗಳಿಗೆ ಮತ್ತು ಯಾವುದೇ ರಾಜಕೀಯ ಪಕ್ಷಗಳ ಸೋಂಕಿಲ್ಲದೇ ಪ್ರಾಮಾಣಿಕವಾಗಿ ಸಂಘ ನೀಡಿರುವ ಜವಾಬ್ದಾರಿ ಹುದ್ದೆಯನ್ನು ನಿಷ್ಠೆಯಿಂದ ಮಾಡಬೇಕೆಂದು ಹೇಳಿದರು.
ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳೆದ ಐದು ವಾರದಿಂದ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆಗೆ (ದ್ಯಾಮವ್ವದೇವಿ) ಹಿಡಿದ ವಾರದ ವಾರದ ಕೊನೆಯ ದಿನ ಮಂಗಳವಾರ ಜನರು ಶ್ರದ್ದಾ ಭಕ್ತಿಯಿಂದ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಮಹಿಳೆಯರು ತಮ್ಮ ಮಕ್ಕಳು, ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಯಿ, ಕರ್ಪೂರ, ಜೋಳದ ಕಡಬು, ಹೂರಣದ ಕಡಬು ಸೇರಿದಂತೆ ವಿವಿಧ ನೈವೇದ್ಯ, ಬಾಳೆಹಣ್ಣು, ಉಡಕ್ಕಿ ಸಾಮಾನುಗಳೊಂದಿಗೆ ಗ್ರಾಮದೇವಿಯ ದೇವಸ್ಥಾನಕ್ಕೆ ಆಗಮಿಸಿ ಗ್ರಾಮದೇವಿ ದರ್ಶನ ಪಡೆದು ದೇವಿಗೆ ಉಡಿ ತುಂಬಿ ತಮ್ಮ ಭಕ್ತಿ ಸಮರ್ಪಿಸುವುದು ಕಂಡುಬಂದಿತು.ಪಟ್ಟಣದ ಗ್ರಾಮದೇವತೆ (ದ್ಯಾಮವ್ವದೇವಿ)ಯ ಉಡಿ ತುಂಬುವ ಕಾರ್ಯಕ್ರಮದಂಗವಾಗಿ ಸಂಜೆ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಿಂದ ಬಸವೇಶ್ವರ ಭಾವಚಿತ್ರದೊಂದಿಗೆ ಗ್ರಾಮದೇವಿಗೆ ಸೀರೆ-ಕುಪ್ಪಸ, ಬಾಳೆಹಣ್ಣು, ಉಡಿ ತುಂಬುವ ಸಾಮಾನುಗಳನ್ನು ದೈವಮಂಡಳಿಯು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ತಂದಿತ್ತು. ನಂತರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಗ್ರಾಮದೇವಿಗೆ ವಿಶೇಷ ಪೂಜೆ ನೆರವೇರಿಸಿ ಉಡಿ ತುಂಬಿ ನಾಡಿಗೆ ಉತ್ತಮ ಮಳೆ-ಬೆಳೆ ನೀಡಿ ಎಲ್ಲ ಜನರನ್ನು ಸುಖ-ಸಂತೋಷ-ನೆಮ್ಮದಿಯಿಂದ ಇಡುವಂತೆ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ…
ಮುದ್ದೇಬಿಹಾಳ: ಪಟ್ಟಣದಲ್ಲಿ ರವಿವಾರ ಸದ್ದು ಮಾಡಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾದ ಪ್ರಕರಣದ ಹಿಂದೆ ಪ್ರೇಮ್ ಕಹಾನಿ ಇರೋದು ಖಚಿತವಾಗಿದೆ.ರಾಹುಲ್ ಬಿರಾದಾರ ಮತ್ತು ಐಶ್ವರ್ಯ ಮದರಿ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋ “ಉದಯರಶ್ಮಿ” ಗೆ ಲಭ್ಯವಾಗಿದ್ದು ಫೋಟೋಗಳಲ್ಲಿ ಇವರಿಬ್ಬರೂ ಸಲುಗೆಯಿಂದಿರೋದು ಸಾಬೀತಾಗಿದೆ.ಕಳೆದ ಕೆಲವು ವರ್ಷಗಳ ಹಿಂದೆ ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದು ಇವರ ಪ್ರೀತಿಗೆ ಮನೆಯವರು ಅಡ್ಡಿಯಾಗಿದ್ದಾರೆ ಎನ್ನಲಾಗಿದೆ. ಮೊದಲು ಪ್ರೀತಿಸಿ ಏಕಾಏಕಿ ನಿರಾಕರಿಸಿದ ಐಶ್ವರ್ಯಳ ಪ್ರೀತಿ ಮರು ಪಡೆಯಬೇಕು ಮತ್ತು ಆಕೆಯನ್ನ ಮದುವೆಯಾಗಬೇಕು ಎಂದು ರಾಹುಲ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಮನೆ ಎದುರೆಲ್ಲ ಹುಚ್ಚನಂತೆ ಬೈಕ್ ಒದರಿಸುತ್ತ ಓಡಾಡಿದ್ದಾನೆ. ಯಾವುದೂ ಪ್ರಯೋಜನಕ್ಕೆ ಬಾರದಿದ್ದಾಗ ಮೊಬೈಲ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.ಜೊತೆಗಿರುವ ಫೋಟೋಗಳು ಆಚೆ ಹೋದರೆ ಏಶ್ವರ್ಯಳ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ಅರಿತ ಆಕೆಯ ಮನೆಯವರು ಬುದ್ದಿವಾದ ಹೇಳಲು ಮುಂದಾಗಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.ಘಟನೆಯ ಸತ್ಯಾ ಸತ್ಯತೆಯ ಹಿಂದೆ ಬೆನ್ನಟ್ಟಿದ ಪೊಲೀಸರು…
ಮುದ್ದೇಬಿಹಾಳ: ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳರನ್ನು ಎಂಎಲ್‌ಸಿ ಮಾಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಪದ್ಮಾವತಿ ವಾಲಿಕಾರ ಭಾಜಪಾ ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೂಚಬಾಳರು ಅಪಾರ ಅಭಿಮಾನಿ ಬಳವನ್ನು ಹೊಂದಿದ್ದಾರೆ. ಪಕ್ಷದಲ್ಲಿ ಎಂತಹದ್ದೇ ಭಿನ್ನಾಭಿಪ್ರಾಯಗಳಿದ್ದರೂ ಸೂಕ್ತ ಪರಿಹಾರ ಕಂಡುಕೊಳ್ಳುವ ಇವರಿಗೆ ಎಂಎಲ್‌ಸಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಅಲ್ಪ ಸಂಖ್ಯಾತರ ಮುಖಂಡನನ್ನು ಎಂಎಲ್‌ಸಿಯನ್ನಾಗಿ ಮಾಡಬೇಕು ಎಂದು ಮಾಜಿ ಪುರಸಭೆ ಸದಸ್ಯ ಪಿಂಟು ಸಾಲಿಮನಿ ಮತ್ತು ಕಾಂಗ್ರೇಸ್ ಮುಖಂಡ ಹುಸೇನ ಮುಲ್ಲಾ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.ಅಲ್ಪಸಂಖ್ಯಾತರು ಕಾಂಗ್ರೇಸ್ ಪಕ್ಷಕ್ಕಾಗಿ ಸಾಕಷ್ಟು ಶ್ರಮನಿಸಿದ್ದಾರೆ. ಆದರೆ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸುತ್ತಿಲ್ಲ. ಸಧ್ಯ ಅವಕಾಶವಿದ್ದು ಜಿಲ್ಲೆಯ ಯಾರಾದರೂ ಒಬ್ಬ ಅಲ್ಪಸಂಖ್ಯಾತ ಮುಖಂಡನನ್ನು ಎಂಎಲ್‌ಸಿಯಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
೫೧.೫ ಕೋಟಿ ಶೇರು ಬಂಡವಾಳ | ಶೇರುದಾರರಿಗೆ ೨೫% ಡಿವಿಡೆಂಟ್ | ಕೇವಲ ೧೨ ಗಂಟೆಯಲ್ಲಿ ಸಾಲ ಮಂಜೂರು ವಿಜಯಪುರ: ಸಿದ್ಧಸಿರಿ ೧೯ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಿದ್ಧಸಿರಿ ಮಹಿಳಾ ಶಾಖೆ ಸಭಾಂಗಣದಲ್ಲಿ ಸಿಬ್ಬಂದಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಶಿಬಿರ ಉದ್ದೇಶಿಸಿ ವ್ಯವಸ್ಥಾಪಕ ನಿರ್ದೇಶಕ ಜೋತಿಬಾ ಖಂಡಾಗಳೆ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯು ಅತೀ ವೇಗವಾಗಿ ಬೆಳೆಯುತ್ತಿದ್ದು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ, ಗ್ರಾಹಕರ ಅನುಕೂಲಕ್ಕಾಗಿ ಸಿದ್ಧಸಿರಿ “ಎಕ್ಸ್ಪ್ರೆಸ್ ಸಾಲಯೋಜನೆ” ಪ್ರಾರಂಭಿಸಿದ್ದು ಸಾಲ ಬೇಡಿಬಂದ ಗ್ರಾಹಕರಿಗೆ ಕೇವಲ ೧೨ ಗಂಟೆಯಲ್ಲಿ ಸಾಲ ಮಂಜೂರು ಮಾಡಲಾಗುವದು, ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರ ನಿರ್ಣಯದಂತೆ ವಿಜಯಪುರ ನಗರದಲ್ಲಿ ಬಡ ಬೀದಿಬದಿ ವ್ಯಾಪಾರಿಗಳಿಗಾಗಿ ಶೂನ್ಯ ಬಡ್ಡಿದರಲ್ಲಿ “ಕೇಸರಿ ಸ್ವಾವಲಂಬಿ ಯೋಜನೆಯಡಿಯಲ್ಲಿ” ಸಾಲ ವಿತರಿಸಲಾಗುತ್ತಿದೆ ಎಂದರು.ಸಭೆಯನ್ನು ಉದ್ದೇಶಿಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಕೇವಲ ೧೮ ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದವು ರೂ.೩೪೧೩ ಕೋಟಿ ಠೇವಣಿ ಸಂಗ್ರಹಿಸಿ ಶೇಅರುದಾರರಿಗೆ ೨೫% ಡಿವಿಡೆಂಡ್ ನೀಡಲಾಗಿದೆ, “ಧನೇನ ದೀನಂ…
ಇಂಡಿ: ಜೀವನಕ್ಕೆ ಆಶ್ರಯವಾಗಿದ್ದ, ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಬೆಳೆಸಿದ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದಷ್ಟು ಹಾನಿಯಾಗಿದ್ದು, ಆ ಕುಟುಂಬ ಸಂಕಷ್ಟದಲ್ಲಿದೆ. ಈ ಕೂಡಲೇ ಸರಕಾರ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಹಂಜಗಿ ರಸ್ತೆಯಲ್ಲಿ ಬರುವ ಗುರುಶಾಂತ. ಚಂದ್ರಶೇಖರ ಸಾಲೋಟಗಿ ಅವರಿಗೆ ಸೇರಿದ್ದ ಜಮೀನು ಸರ್ವೇ ನಂ- 975/5ರಲ್ಲಿ ಬರುವ 3ಏಕರೆ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾಗಿವೆ. ಸುಮಾರು 10 ವರ್ಷದಿಂದ ಲಿಂಬೆ ಗಿಡಗಳನ್ನು ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಜೋಪಾನ ಮಾಡಿ ಬೆಳೆಸಲಾಗಿತ್ತು. ಆದರೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ರೈತನ ಕುಟುಂಬಕ್ಕೆ ಬರಶೀಡಿಲ ಬಡಿದಂತಾಗಿದೆ. ಕೂಡಲೇ ಸರಕಾರ ಆ ಕುಟುಂಬದ ಆಶ್ರಯ ಬರಬೇಕೆಂದು ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ…
