ವಿಜಯಪುರ: ಕನ್ನಡ ಅನ್ನದ ಭಾಷೆಯಾಗಬೇಕು. ಜಾಗತೀಕರಣದ ಪ್ರಭಾವದಿಂದ ಕನ್ನಡ ನಾಡು ನುಡಿಗೆ ಹಿನ್ನಡೆ ಆಗುತ್ತಿರುವುದು ವಿಷಾದನೀಯ. ಕನ್ನಡಿಗರು ಇತರ ಭಾಷೆಯ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಜಾಗತೀಕರಣದ ಪೈಪೋಟಿಗೆ ವಾಲುತ್ತಿರುವುದು ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ,ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ದಿ ಗೌರಮ್ಮ ಕೊಟ್ರಬಸಯ್ಯ ತಂಬ್ರಹಳ್ಳಿಮಠ ದತ್ತಿ. ದತ್ತಿ ದಾನಿಗಳು ಶ್ರೀ ಅಭಿನವ ಶಿವಪುತ್ರ ಸ್ವಾಮಿಜಿ ಹಾಗು ದಿ ರಾಮರಾವ ಪ್ರಭಾಕರ ಶಂಕರ ದತ್ತಿ. ದತ್ತಿ ದಾನಿಗಳು ಸರೋಜಾ ರಾಮರಾವ ಕುಲಕರ್ಣಿ ಇವರುಗಳ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿಬೇರು.
ಕನ್ನಡ ಉಳಿದರೆ ಕನ್ನಡಿಗರ ಉಳಿವು. ಸರ್ಕಾರ ಮಾತೃ ಭಾಷೆಗೆ ಪ್ರಾಧ್ಯಾನತೆ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ತಿಕೋಟಾ ವಸತಿ ಶಾಲೆಯ ಪ್ರಾಧ್ಯಾಪಕ ಸೂರ್ಯಕಾಂತ ಹೊಸಮನಿ ಮಾತನಾಡಿ, ರಾಜಕೀಯವು ಸಮಾಜದಲ್ಲಿ ಬೇದ ಭಾವ ನಿಲವು ತಾಳಿದ್ದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಇಂತಹ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು. ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಸಿದ್ದೇಶ್ವರ ಕೊಚಿಂಗ್ ತರಬೇತಿ ಸುರೇಶ ಜತ್ತಿ ಸಮಾಜ ಲೋಪ ದೋಷಗಳ ಕುರಿತು ಉಪನ್ಯಾಸ ನೀಡಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆಡಳಿತದ ಲೋಪ ದೋಷಗಳು ಭಾವೈಕ್ಯತೆಯ ಸಂಬಂಧಗಳಿಗೆ ದಕ್ಕೆ ಉಂಟಾಗಿದೆ. ಆಡಳಿತ ವ್ಯವಸ್ಥೆಯಲ್ಲಿರುವ ಬ್ರಷ್ಠಾಚಾರ ಅಭಿವೃದ್ಧಿಗೆ ಕುಂಟಿತವಾಗಿದೆ ಎಂದರು.
ಸಾಹಿತಿ ರೇವಣಸಿದ್ದ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯ ಪ್ರೇಮ ಕುರಿತು ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಭಾವನೆಗಳನ್ನು ಬೆಸೆಯುವ ಪವಿತ್ರ ಕಾರ್ಯ ಮಾಡುತ್ತಿದೆ. ಪಾಲಕರು ಕನ್ನಡ ಭಾಷೆ ಪ್ರಾಥಮಿಕ ಹಂತದಲ್ಲಿಯೆ ಕಲಕೆಗೆ ಪ್ರೋತ್ಸಾಹಿಸಬೇಕು. ಜಾನಪದ ಸಾಹಿತ್ಯಕ್ಕೆ ಬದುಕು ಬದಲಾಯಿಸಿ ಹಸನಗೊಳಿಸುವ ಸಾಹಿತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಕೆ ಎಸ್ ಹಣಮಾಣಿ, ಶೋಭಾ ಬಡಿಗೇರ ಮಾತನಾಡಿದರು.
ಅಣ್ಣುಗೌಡ ಬಿರಾದಾರ, ಕುಮಾರಗೌಡ ಬಿರಾದಾರ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ಸಿದ್ರಾಮಯ್ಯ ಲಕ್ಕುಂಡಿಮಠ, ಅಜು೯ನ ಶಿರೂರ, ಸುಖದೇವಿ ಅಲಬಾಳಮಠ, ಮಹಾದೇವಿ ತೆಲಗಿ, ಶಾಂತಾ ವಿಭೂತಿ, ಜಿ ಎಸ್ ಬಳ್ಳೂರ, ಅಮೋಘಸಿದ್ದ ಪೂಜಾರಿ, ಭಾಗೀರಥಿ ಸಿಂದೆ, ಟಿ ಆರ್ ಹಾವಿನಾಳ, ಜಿ ಎಸ್ ಬಳ್ಳೂರ, ಮಹಾದೇವಿ ತೆಲಗಿ, ಬಸವರಾಜ ಕೊನರಡ್ಡಿ, ಜಿ ಎಮ್ ಚಲುವಾದಿ, ಗಂಗಮ್ಮ ರಡ್ಡಿ, ಸನ್ನೀಧಿ ಬಿರಾದಾರ ಉಪಸ್ಥಿತರಿದ್ದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸ್ವಾಗತಿಸಿ ಪರಿಚಯಿಸಿದರು. ಮಮತಾ ಮುಳ್ಳಸಾವಳಗಿ ನಿರೂಪಿಸಿದರು. ಅನ್ನಪೂರ್ಣ ಬೆಳ್ಳನವರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

