ಇಂಡಿ: ಜೀವನಕ್ಕೆ ಆಶ್ರಯವಾಗಿದ್ದ, ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಬೆಳೆಸಿದ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದಷ್ಟು ಹಾನಿಯಾಗಿದ್ದು, ಆ ಕುಟುಂಬ ಸಂಕಷ್ಟದಲ್ಲಿದೆ. ಈ ಕೂಡಲೇ ಸರಕಾರ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಂಜಗಿ ರಸ್ತೆಯಲ್ಲಿ ಬರುವ ಗುರುಶಾಂತ. ಚಂದ್ರಶೇಖರ ಸಾಲೋಟಗಿ ಅವರಿಗೆ ಸೇರಿದ್ದ ಜಮೀನು ಸರ್ವೇ ನಂ- 975/5ರಲ್ಲಿ ಬರುವ 3ಏಕರೆ ಲಿಂಬೆ ಗಿಡಗಳು ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾಗಿವೆ. ಸುಮಾರು 10 ವರ್ಷದಿಂದ ಲಿಂಬೆ ಗಿಡಗಳನ್ನು ಟ್ಯಾಂಕರ ಮೂಲಕ ನೀರು ಹಾಕಿ ಮಗುವಿನಂತೆ ಜೋಪಾನ ಮಾಡಿ ಬೆಳೆಸಲಾಗಿತ್ತು. ಆದರೆ ಆಕಸ್ಮಿಕ ಬೆಂಕಿಗೆ ಆಹುತಿಯಾದ ರೈತನ ಕುಟುಂಬಕ್ಕೆ ಬರಶೀಡಿಲ ಬಡಿದಂತಾಗಿದೆ. ಕೂಡಲೇ ಸರಕಾರ ಆ ಕುಟುಂಬದ ಆಶ್ರಯ ಬರಬೇಕೆಂದು ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿದ ಅವರು, ಲಿಂಬೆ ಹಾನಿಯಾದ ಪ್ರದೇಶಕ್ಕೆ ಇಲ್ಲಿಯವರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಾಗಲಿ, ಲಿಂಬೆ ಅಬಿವೃದ್ಧಿ ಮಂಡಳಿ ಅಧಿಕಾರಿಗಳಾಗಲಿ ಬೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡದಿರುವುದು ವಿಪರ್ಯಾಸ.
ಈ ಘಟನೆಯನ್ನು ಖಂಡಿಸಿಸುತ್ತೆನೆ ಎಂದು ಹೇಳಿದರು. ಲಿಂಬೆ ನಾಡಿನಲ್ಲಿ ಲಿಂಬೆ ಬೆಳೆಗಾರರಿಗೆ ಹಿಂತಾ ಅವಘಡಗಳು ಸಂಭವಿಸಿದಾಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ನಿಂಬೆ ಅಬಿವೃದ್ಧಿ ಮಂಡಳಿ ಹಾಗೂ ಸರಕಾರ ರೈತರ ನೇರವಿಗೆ ಬರಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಜಂಟಿಯಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ,ಬಾಳು ರಾಠೋಡ, ರಮೇಶ್ ರಾಠೋಡ, ತಿಪ್ಪಣ್ಣ ಉಟಗಿ, ಸಾಹಿಬಣ್ಣಾ ಯಲ್ಲಡಗಿ,ಬಾಪುಗೌಡ ಬಿರಾದಾರ ಸಾಹೇಬಣ್ಣಾ ಪೂಜಾರಿ, ಸಿದ್ದು ಹೂಗಾರ , ಇಬ್ರಾಹಿಂ ಚಪ್ಪರಬಂದ , ಶಿವಾನಂದ ಯಂಕಂಚಿ, ಶ್ರೀಶೈಲ ಹೂಲ್ಲೂರ, ಕಲ್ಲಪ್ಪ ಪೂಜಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸಂತ್ರಸ್ತ ರೈತಗೆ ಪರಿಹಾರ ನೀಡಲು ಮೈತ್ರಿ ಪಕ್ಷದ ಮುಖಂಡರ ಆಗ್ರಹ
Related Posts
Add A Comment

