Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಿದ್ಧಸಿರಿ: ೧೮ ವರ್ಷಗಳಲ್ಲಿ ರೂ.೩೪೧೨ ಕೋಟಿ ಠೇವಣಿ ಸಂಗ್ರಹ
(ರಾಜ್ಯ ) ಜಿಲ್ಲೆ

ಸಿದ್ಧಸಿರಿ: ೧೮ ವರ್ಷಗಳಲ್ಲಿ ರೂ.೩೪೧೨ ಕೋಟಿ ಠೇವಣಿ ಸಂಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

೫೧.೫ ಕೋಟಿ ಶೇರು ಬಂಡವಾಳ | ಶೇರುದಾರರಿಗೆ ೨೫% ಡಿವಿಡೆಂಟ್ | ಕೇವಲ ೧೨ ಗಂಟೆಯಲ್ಲಿ ಸಾಲ ಮಂಜೂರು

ವಿಜಯಪುರ: ಸಿದ್ಧಸಿರಿ ೧೯ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಿದ್ಧಸಿರಿ ಮಹಿಳಾ ಶಾಖೆ ಸಭಾಂಗಣದಲ್ಲಿ ಸಿಬ್ಬಂದಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ದೇಶಿಸಿ ವ್ಯವಸ್ಥಾಪಕ ನಿರ್ದೇಶಕ ಜೋತಿಬಾ ಖಂಡಾಗಳೆ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯು ಅತೀ ವೇಗವಾಗಿ ಬೆಳೆಯುತ್ತಿದ್ದು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ, ಗ್ರಾಹಕರ ಅನುಕೂಲಕ್ಕಾಗಿ ಸಿದ್ಧಸಿರಿ “ಎಕ್ಸ್ಪ್ರೆಸ್ ಸಾಲಯೋಜನೆ” ಪ್ರಾರಂಭಿಸಿದ್ದು ಸಾಲ ಬೇಡಿಬಂದ ಗ್ರಾಹಕರಿಗೆ ಕೇವಲ ೧೨ ಗಂಟೆಯಲ್ಲಿ ಸಾಲ ಮಂಜೂರು ಮಾಡಲಾಗುವದು, ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರ ನಿರ್ಣಯದಂತೆ ವಿಜಯಪುರ ನಗರದಲ್ಲಿ ಬಡ ಬೀದಿಬದಿ ವ್ಯಾಪಾರಿಗಳಿಗಾಗಿ ಶೂನ್ಯ ಬಡ್ಡಿದರಲ್ಲಿ “ಕೇಸರಿ ಸ್ವಾವಲಂಬಿ ಯೋಜನೆಯಡಿಯಲ್ಲಿ” ಸಾಲ ವಿತರಿಸಲಾಗುತ್ತಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಕೇವಲ ೧೮ ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದವು ರೂ.೩೪೧೩ ಕೋಟಿ ಠೇವಣಿ ಸಂಗ್ರಹಿಸಿ ಶೇಅರುದಾರರಿಗೆ ೨೫% ಡಿವಿಡೆಂಡ್ ನೀಡಲಾಗಿದೆ, “ಧನೇನ ದೀನಂ ಸಬಲೀ ಕುರುತ್ವಂ” ಎಂಬ ಧ್ಯೇಯೋದ್ದೇಶದೊಂದಿಗೆ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದಲ್ಲಿ ದಕ್ಷ ಆಡಳಿತ ಮಂಡಳಿಯನ್ನು ಹೊಂದಿ ದಿನಾಂಕ ೨೯.೦೫.೨೦೦೬ ರಂದು ಪ್ರಾರಂಭಗೊಂಡ ಸಿದ್ಧಸಿರಿ ಸೌಹಾರ್ದ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ ೧೫೯ ಶಾಖೆಗಳನ್ನು ಹೊಂದಿ, ರಾಜ್ಯಾದ್ಯಂತ ೧೦೭೭ ಸಿಬ್ಬಂದಿಗಳು ಹಾಗೂ ೫೯೪ ಪಿಗ್ಮಿ ಸಂಗ್ರಹಕಾರರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು ಇತಿಹಾಸ. ವಿಜಯಪುರ ನಗರದ ಸಿದ್ಧೇಶ್ವರ ದೇವಾಲಯ ಆವರಣದಲ್ಲಿರುವ ಮುಖ್ಯ ಕಚೇರಿಯಲ್ಲಿ ದಿನದ ೨೪ ಗಂಟೆ ೩೬೫ ದಿನಗಳು ನಿರಂತರ ಸೇವೆ ನೀಡುತ್ತಿರುವ ದೇಶದ ಏಕೈಕ ಸೌಹಾರ್ದ ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ವಯೋವೃದ್ಧರು, ದಿವ್ಯಾಂಗರ ಮನೆ ಬಾಗಿಲಿಗೆ ಸೇವೆ ಒದಗಿಸುವುದರ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.
೧೯ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಮೇಲೆ ಅಪಾರವಾದ ವಿಶ್ವಾಸವಿಟ್ಟು ವ್ಯವಹರಿಸುತ್ತಿರುವ ಕರ್ನಾಟಕ ರಾಜ್ಯದ ಸಮಸ್ತ ಗ್ರಾಹಕರಿಗೆ ಹಾಗೂ ಶೇರುದಾರರಿಗೆ ಇನ್ನು ಅನೇಕ ಯೋಜನೆಗಳ ಮೂಲಕ ಉತ್ತಮ ಸೇವೆ ನೀಡಲು ಕಂಕಣಬದ್ಧರಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಪ್ರಭಂದಕರಾದ ಅಭಿಜಿತ ಕೃಷ್ಣಮೂರ್ತಿ, ನೀರಜ ಕಾಕಟಿ, ರಾಜು ಜೋಶಿ, ರಾಜಶೇಖರ ಪಾಟೀಲ, ಎ.ಜಿ.ಎಂ ಸಮೀರ ಕಂಬಾಗಿ, ಶಿವಕುಮಾರ ಕಬ್ಬಿನ, ವಲಯ ಅಧಿಕಾರಿಗಳಾದ ವಾಗೇಶ ಮಠ, ಸವಿತಾ ಗುಣಾರಿ, ರಾಜು ಬಳಸಂಕರ, ರಾಜೇಸಾಬ ಹೈದರಖಾನ, ಗುರುಶಾಂತ ಮುತ್ತಗಿ, ಸಂದೀಪ ಗುಡುರ, ಸಿದ್ದಲಿಂಗ ಬಬಲಾದಿಮಠ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.