ಮುದ್ದೇಬಿಹಾಳ: ಪಟ್ಟಣದಲ್ಲಿ ಬುಧವಾರ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ತನಿಖಾದಳದ ಸದಸ್ಯರ ತಂಡ ಕೊಟ್ಟಾ ೨೦೦೩ ಕಾಯ್ದೆ ಅಡಿ ದಾಳಿ ನಡೆಸಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿಣಿ ಡಾ.ಕವಿತಾ ದೊಡ್ಡಮನಿ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯನ್ನು ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯಿಂದ ಪ್ರಾರಂಭಿಸಿ ಮುಖ್ಯ ಬಜಾರದಿಂದ ಇಂದಿರಾ ವೃತ್ತದವರೆಗೆ ಮಾರ್ಗಮಧ್ಯದಲ್ಲಿ ಇರುವ ಹೋಟಲ್ ಸೇರಿದಂತೆ ಪಾನ್‌ಶಾಪ್‌ಗಳಿಗೆ ದಾಳಿಮಾಡಿ ದಂಡ ವಿಧಿಸಲಾಯಿತು.
ಮಾರ್ಗದ ಮಧ್ಯೆ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಕರಿಗೆ/ವ್ಯಾಪಾರಸ್ಥರಿಗೆ ಕೊಟ್ಟಾ ೨೦೦೩ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ಒಟ್ಟು ರೂ.೨೨೦೦ ದಂಡ ವಸೂಲು ಮಾಡಿ ಬಿಸಿ ಮುಟ್ಟಿಸಿದರು. ಕೆಲವು ಕಡೆ ಕಾಯ್ದೆಯ ಸೆಕ್ಷನ್ ೪ ಮತ್ತು ೬(ಎ)ಗಳ ನಾಮಫಲಕಗಳನ್ನು ಅಳವಡಿಸಿ ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು.
ಆರೋಗ್ಯ ಇಲಾಖೆಯಿಂದ
ದಾಳಿಯಲ್ಲಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ, ಕ್ಷೆತ್ರ ಆರೋಗ್ಯ ಶಿಕ್ಷಣಾಧಿಕಾರಿ ಎ.ಎಸ್.ತೇರದಾಳ, ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಛಲವಾದಿ, ಎಮ್.ಎಸ್.ಗೌಡರ, ಎಸ್.ಆರ್.ಸಜ್ಜನ, ವಿರೇಶ್ ಎಸ್.ಬಿ, ಇಸ್ಮಾಯಿಲ್ ವಾಲಿಕಾರ, ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಮಹಾಂತೇಶ್ ಕಟ್ಟಿಮನಿ, ವ್ಹಿಬಿಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ, ಆಶಾ ಕಾರ್ಯಕರ್ತೆಯರಾದ ಸುನಂದಾ ಖ್ಯಾತಣ್ಣವರ, ಕವಿತಾ ಅರಳದಿನ್ನಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

