Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ನಗರದಲ್ಲಿ ಕನ್ನಡ ರಂಗಭೂಮಿಗೆ ಹೆಸರಾದ ಮರಾಠಿ ವಿದ್ಯಾಲಯ ಶಿಕ್ಷಣ ಪ್ರಸಾರಕ ಮಂಡಳ ಮತ್ತು ಮರಾಠಿ ವಿದ್ಯಾಲಯ ಎಂಬ ಹೆಸರಿನಿಂದ 01 ಜೂನ್ 1945 ರಲ್ಲಿ ಮುಂಬೈಸರಕಾರದಿಂದ ವರ್ನಾಕ್ಯುಲರ್ ಫಾಯನಲ್ ಆಂಗ್ಲೋ ಮರಾಠಿ ಶಾಲೆ ಎಂಬ ಹೆಸರಿನಿಂದ ಮಾನ್ಯತೆ ಪಡೆದು 5ರಿಂದ 7ನೇ ತರಗತಿವರೆಗೆ ಮೊದಲ ಮರಾಠಿ ಮಾಧ್ಯಮ ಶಾಲೆ ಪ್ರಾರಂಭವಾಯಿತು.ನಂತರದಲ್ಲಿ ಅದನ್ನು 11 ನೇ ತರಗತಿವರೆಗೆ ವಿಸ್ತರಿಸಿದರು. ಆವಾಗ ಅದಕ್ಕೆ ಎಸ್ ಎಸ್ ಎಲ್ ಸಿ ಎನ್ನುತ್ತಿದ್ದರು. ಈ 80 ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ 25 ಸಾವಿರ ವಿದ್ಯಾರ್ಥಿಗಳು ಕಲಿತಿರುತ್ತಾರೆ. 1951 ರಲ್ಲಿ ಪಂಚಮಿತ್ರ ಪ್ರಾಥಮಿಕ ಶಾಲೆಯನ್ನು 1 ರಿಂದ 4 ನೇ ತರಗತಿವರೆಗೆ ಪ್ರಾರಂಭಿಸಿದರು. ಇದರಿಂದ ಈ ಶಾಲೆಗೆ ಪ್ರತಿ ವರ್ಷ 40 ವಿದ್ಯಾರ್ಥಿಗಳು ಬರಲು ಅನುಕೂಲವಾಯಿತು.ನಂತರದಲ್ಲಿ ಅಂದರೆ 1963 ರಲ್ಲಿ ಈ ಶಾಲೆಯನ್ನು ಸರ್ಕಾರಕ್ಕೆ ಸೇರಿಸಿದರು. 1970ರಲ್ಲಿ ಮರಾಠಿ ವಿದ್ಯಾಲಯ ಸುವರ್ಣ ಮಟ್ಟಕ್ಕೆ ತಲುಪಿತು ಎಂದರೆ ತಪ್ಪಾಗಲಾರದು. ಏಕೆಂದರೆಆ ಅವಧಿಯಲ್ಲಿ 5 ರಿಂದ 10…
ವಿಜಯಪುರ: ಇತ್ತೀಚಿಗೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದ ಸಿಂದಗಿ ಪಟ್ಟಣದ ಹಿರಿಯ ನ್ಯಾಯವಾದಿ ಅಶೋಕ ಗಾಯಕವಾಡ ಅವರನ್ನು ಖ್ವಾಜಾ ಸ್ಯೆಪನ ಮುಲ್ಕ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು.ಈ ವೇಳೆಯಲ್ಲಿ ದರ್ಗಾದ ಟ್ರಸ್ಟ್ ಅಧ್ಯಕ್ಷ ಮಹದೇವಪ್ಪ ಗಾಯಕವಾಡ ಹಾಗೂ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೌಹಾರ್ದ ಸಹಕಾರಿ ನಿಯಮಿತ ಸಿಂದಗಿ ಅಧ್ಯಕ್ಷ ಅಂಬಾಜಿ ಗಾಯಕವಾಡ, ನಾರಾಯಣ ಅಲೋಣಿ. ಅಂಬರೀಶ್ ಚೌಗಲೆ, ಶಾಂತು ರಾಣಾಗೋಳ, ಖಾದರ್ ಭಾಷಾ ವಾಲಿಕಾರ, ರವಿಕುಮಾರ ಗಾಯಕವಾಡ, ಮಹೇಶ್ ಸುಲ್ಫಿ, ಸುರೇಶ್ ಕೋರಹಳ್ಳಿ, ಆರ್ ವಿ ಕದಂಬ, ಅವಿನಾಶ ಗಾಯಕವಾಡ, ಅನಿಲ್ ಗುಮಟೆ, ರಾಜು ಗೌಳಿ, ಅಂಬಾಜಿ ಘವಾಳ್ಕರ, ಸಿಂದಗಿಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಬಾಂಧವರು ಹಾಗೂ ಇತರೆ ಸಮಾಜ ಬಾಂಧವರು ಉಪಸ್ಥಿತರಿದ್ದರು.
ವಿಜಯಪುರ: ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿರುವ ಮತ್ತು ಪ್ರಾಮಾಣಿಕವಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿರುವ ಹಿರಿಯ ಹೋರಾಟಗಾರ ಹಾಗೂ ಕೆಪಿಸಿಸಿ ವಕ್ತಾರರಾದ ಎಸ್.ಎಂ.ಪಾಟೀಲ್ (ಗಣಿಹಾರ) ರವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ದೇವಣಗಾಂವದ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಹೇಬ ನಾಗಾವಿ ಒತ್ತಾಯಿಸಿದ್ದಾರೆ.ವಿಜಯಪುರ ಜಿಲ್ಲಾದ್ಯಾಂತ ಅಹಿಂದ ಸಮುದಾಯವು ರಾಜಕೀಯವಾಗಿ ಕುಂಟಿತಗೊಂಡಿದ್ದು ಅಹಿಂದ ಸಮುದಾಯದ ಶಕ್ತಿಯನ್ನು ಬಲಿಷ್ಠಗೊಳಿಸಲು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿ ದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರನ್ನು ವಿಧಾನಪರಿಷತ್ತಿಗೆ ಅವಕಾಶ ನೀಡಬೇಕು. ಅಂತಹ ಅಹಿಂದ ನಾಯಕರನ್ನು ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದ ಧ್ವನಿಯಾಗಿ ಗುರುತಿಸಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಕೊಡುಗೆ ಗಣನೀಯವಾಗಿದ್ದು, ಈ ಸಮುದಾಯದ ವಿಜಯಪುರ ಜಿಲ್ಲೆಯ ಪ್ರಬಲ ನಾಯಕ…
ಅತ್ಯಾಚಾರ ಸೇರಿದಂತೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.ಅತ್ಯಾಚಾರ ಸೇರಿದಂತೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಪ್ರಜ್ವಲ್ ಪರ ವಕೀಲ ಅರುಣ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.ಹಾಸನದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್ ಆಗಿತ್ತು. ಎಪ್ರಿಲ್ 26ರಂದು ನಡೆದ ಎರಡನೇ ಹಂತದ ಚುನಾವಣೆಯ ನಂತರ ಪ್ರಜ್ವಲ್ ಅವರು ದೇಶವನ್ನು ತೊರೆದಿದ್ದರು. ಈ ಕುರಿತ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು. ಬಳಿಕ ಪ್ರಜ್ವಲ್ ಪತ್ತೆಗೆ ಲುಕ್ ಔಟ್ ನೊಟೀಸ್ ಮತ್ತು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು. ಪ್ರಜ್ವಲ್ ಅವರ ರಾಜತಾಂತ್ರಿಕ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ತ್ರಿಭುಜಕ್ಕೆ ಇರುವುದು ಮೂರು ಬಾಹುಗಳು ಮತ್ತು ಮೂರು ಕೋನಗಳು. ಈ ಮೂರು ಬಾಹುಗಳು ಒಂದನ್ನೊಂದು ಮೂರು ಕೋನಗಳಲ್ಲಿ ಸಂಧಿಸದೆ ಇದ್ದರೆ ಅದನ್ನು ತ್ರಿಭುಜವೆಂದು ಪರಿಗಣಿಸಲಾಗುವುದಿಲ್ಲ. ಹಾಗೆಯೇ ಮಕ್ಕಳ ಆಂತರಿಕ ಬೆಳವಣಿಗೆಯಲ್ಲಿ ಇರುವ ಮೂರು ಭುಜಗಳು ಪಾಲಕರು, ಶಿಕ್ಷಕರು ಮತ್ತು ಮಕ್ಕಳು. ಈ ಮೂರು ಜನರು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯನಿರ್ವಹಿಸಲೆಬೇಕು ಅದು ಅವಶ್ಯಕವೂ ಹೌದು ಅನಿವಾರ್ಯವೂ ಹೌದು. ಎಲ್ಲೋ ಒಂದೆಡೆ ಓದಿದ ನೆನಪು ಪಾಲಕರು ಮತ್ತು ಶಿಕ್ಷಕರ ಮೀಟಿಂಗ್ ನಲ್ಲಿ ಮಕ್ಕಳು ಹಾದಿ ತಪ್ಪಿರುವುದಕ್ಕೆ ಕಾರಣಗಳನ್ನ ಕೇಳಿದಾಗ ಶಿಕ್ಷಕರು ಹೇಳಿದ್ದು ಪಾಲಕರು ಮಕ್ಕಳನ್ನು ಸರಿಯಾಗಿ ಕಾಳಜಿ ಮಾಡುವುದಿಲ್ಲ ಎಂದು, ಎಷ್ಟೋ ಜನ ಪಾಲಕರಿಗೆ ತಮ್ಮ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂಬ ನೆನಪು ಕೂಡ ಇರುವುದಿಲ್ಲ, ಇನ್ನೂ ಕೆಲವು ಪಾಲಕರು ಮಕ್ಕಳ ಪಠ್ಯಪುಸ್ತಕದ ಬ್ಯಾಗನ್ನು ತಾವೇ ತರಗತಿಯ ಕೋಣೆಯವರೆಗೂ ತಂದುಕೊಡುವುದರಿಂದ ಹಿಡಿದು ಮನೆ ಕೆಲಸಗಳನ್ನು ಕೂಡ ತಾವೇ ಮಾಡುವಷ್ಟು ವಿಪರೀತ ಎನಿಸುವಷ್ಟು…
ಬಬಲೇಶ್ವರ: ರೈತರ ವಿವಿಧ ಸಮಸ್ಯೆ ಬಗೆಹರಿಸಲು ರೈತಸಂಘ ಆಗ್ರಹ ಬಬಲೇಶ್ವರ: ತಾಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಬಗೆಹರಿಸಬೇಕು ಇಲ್ಲವಾದಲ್ಲಿ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ತಾಲೂಕಾ ಅಧ್ಯಕ್ಷ ಮಕಬುಲ ಖೀಜಿ ಮನವಿ ಸಲ್ಲಿಸಿ ಮಾತನಾಡುತ್ತಾ, ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ನಷ್ಟಗೊಂಡಿರುವ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟರಗೆ ೮೫೦೦ ರಾಜ್ಯ ಮತ್ತು ೮೫೦೦ ಕೇಂದ್ರದ ಪರಿಹಾರ ಗರಿಷ್ಟ ೨ ಹೆಕ್ಟರೆಗೆ ಪರಿಹಾರ ಹಾಕಬೇಕು, ಆದರೆ ಕೇಂದ್ರ ಸರಕಾರ ನೀಡಿದ ಪರಿಹಾರದಲ್ಲಿಯೇ ೨೦೦೦ ಕಡಿತ ಮಾಡಿರುವುದು ಖಂಡನೀಯ, ಅದನ್ನು ಕೂಡಲೇ ರಾಜ್ಯ ಸರಕಾರ ೨೦೦೦+೮೫೦೦ ಸೇರಿಸಿ ಒಟ್ಟಾರೆ ೧೦೫೦೦ ರೈತರ ಪ್ರತಿ ಹೆಕ್ಟರಗೆ ಹಾಕಬೇಕು. ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜವ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ…
ಕ್ಲೋಜರ್ ಕಾಮಗಾರಿಗೆ ಅನುದಾನ ನೀಡಿ | ಜಿಲ್ಲೆಯ ಎಲ್ಲಾ ಕಾಲುವೆ ಸ್ವಚ್ಛಗೊಳಿಸಿ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಸಲು ಆಗ್ರಹ ವಿಜಯಪುರ: ಜಿಲ್ಲೆಯಲ್ಲಿ ಎಲ್ಲಾ ಏತನೀರಾವರಿ ಕಾಲುವೆಗಳಲ್ಲಿ ಹುಳು ತುಂಬಿ ಕಂಠಿಗಳು ಬೆಳೆದು ನೀರು ಮುಂದೆ ಹೋಗದಂತಾಗಿದೆ, ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಕಳೆದ ೨ ವರ್ಷಗಳಿಂದ ಈ ಕೆಲಸಗಳಿಗೆ ಅನುದಾನ ಇಲ್ಲವೆಂದು ಎಲ್ಲಾ ಕಾಲುವೆಗಳಲ್ಲಿ ಸ್ವಚ್ಚತೆ ಮಾಡದೇ ಹಾಗೆ ಬಿಟ್ಟಿರುತ್ತಾರೆ, ಕೆಲವು ಕಡೆ ರೈತರೆ ಸ್ವತಃ ಹಣ ಖರ್ಚು ಮಾಡಿ ಸ್ವಚ್ಚತೆ ಮಾಡಿರುವುದು ಇದೆ ಎಂದು ಕೃಷ್ಣಾ ಜಲ ಭಾಗ್ಯ ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ಮೋಹನರಾಜ ಅವರಿಗೆ ಬೆಂಗಳೂರಿನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ಈ ವರ್ಷವಾದರೂ ಎಲ್ಲಾ ಕಾಲುವೆಗಳನ್ನು ಮಳೆಗಾಲದಲ್ಲಿ ಆಣೆಕಟ್ಟಿನಿಂದ ನೀರು ಬಿಡುವ ಮುಂಚಿತವಾಗಿ ಸ್ವಚ್ಚತೆ ಮಾಡಬೇಕೆಂದು ಮತ್ತು ಅದಕ್ಕೆ ಅವಶ್ಯಕವಾದ ಹಣವನ್ನು ಪ್ರತಿವರ್ಷ ತೆಗೆದಿಡಬೇಕು. ಹಾಗೆ…
ವಿಜಯಪುರ: ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವದರಿಂದ ಮಕ್ಕಳಲ್ಲಿರುವ ಸೃಜನಶೀಲತೆ ಹಾಗು ವ್ಯಕ್ತಿತ್ವ ಬೆಳವಣಿಗೆ ಹೊಂದಲು ಸಾಧ್ಯ. ವಿದ್ಯೆಯೊಂದಿಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಬಿರಗಳು ಮಹತ್ವ ಪಡೆದುಕೊಂಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಸೋಮವಾರ ಸಂಜೆ ಬಿ ಎಲ್ ಡಿ ಈ ಆಸ್ಪತ್ರೆ ರಸ್ತೆಯ ಶಿವಾಲಯ ಸಭಾಂಗಣದಲ್ಲಿ ಪಿಟ್ನೆಸ್ ಕಾನ೯ರ ಹಾಗು ಬೇಸ್ಟ ಮಾಟಿ೯ಯಲ್ ಕಲಾ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಾಸಿಂಪೀರ ವಾಲಿಕಾರ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಬೇಸಿಗೆ ಶಿಬಿರಗಳು ಯಶಸ್ವಿಯಾಗಿ ಮಾಡಿದ್ದು ಮಕ್ಕಳ ಕ್ರಿಯಾಶೀಲ ಚಟುವಟಿಕೆ ಪಾಲಕರು ಕಣ್ಣಾರೆ ಕಂಡು ಸಂತೋಷಗೊಂಡಿರುವುದು ಪ್ರಶಂಸನೀಯ ಎಂದರು.ಪಿಟ್ನಸ ಕಾನ೯ರ ಮುಖ್ಯಸ್ಥ ಜಗದೀಶ ಗುಳೆದಗುಡ್ಡ ಮಾತನಾಡಿ. ಯೋಗಾಸನ, ಸಂಗೀತ, ನೃತ್ಯ, ಕರಾಟೆ, ಭರತನಾಟ್ಯ ವಚನ ನೃತ್ಯ, ಈಜು, ಕುದುರೆ ಸವಾರಿ ಮುಂತಾದ ವಿಷಯ ಹಾಗು ಸ್ಪಧೆ೯ಗಳಲ್ಲಿ ಎರಡು ನೂರು ವಿದ್ಯಾರ್ಥಿ ಶಿಬಿರಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ್ದು ಆನಂದನ್ನುಂಟು ಮಾಡಿದೆ. ಶಿಬಿರಾಥಿ೯ ಮಕ್ಕಳಲ್ಲಿರುವ…
ದೇವರಹಿಪ್ಪರಗಿ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವಂತ ದುಷ್ಪರಿಣಾಮಗಳ ಬಗ್ಗೆ ಯುವಜನತೆ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದಲ್ಲಿ ಬುಧವಾರ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಮಾತನಾಡಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಸರಕಾರ ನಿರ್ಬಂಧ ಹೇರಿದ್ದರೂ ಸಹ ಎಗ್ಗಿಲ್ಲದೆ ಎಲ್ಲೆಡೆ ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ. ಇದು ತಪ್ಪು. ತಕ್ಷಣವೇ ತಂಬಾಕು, ಮಾವಾ ಸೇರಿದಂತೆ ತಂಬಾಕುಯುಕ್ತ ಪದಾರ್ಥಗಳ ಬಗ್ಗೆ ಯುವಕರು ಅರಿಯಬೇಕು ಹಾಗೂ ಸೇವನೆ, ಮಾರಾಟ ನಿಲ್ಲಿಸಬೇಕೆಂದು ಸೂಚಿಸಿದರು.ನಂತರ ೨೦ಕ್ಕೂ ಹೆಚ್ಚು ಪಾನ ಶಾಪ್‌ಗಳ ಮೇಲೆ ದಾಳಿ ನಡೆಸಿ ಅಂಗಡಿಕಾರರಿಗೆ ದಂಡ ವಿಧಿಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂದೀಪ ಕಡ್ಲೇವಾಡ, ಎಎಸ್‌ಐ ಡಿ.ಎಚ್.ಬಗಲಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮನಗೌಡ ನೀರಲಗಿ, ಸಮುದಾಯ ಆರೋಗ್ಯ ಅಧಿಕಾರಿ ಕಿರಣ ಪಾಟೀಲ ಸೇರಿದಂತೆ ಆರೋಗ್ಯ, ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.
