ವಿಜಯಪುರ: ನಗರದಲ್ಲಿ ಕನ್ನಡ ರಂಗಭೂಮಿಗೆ ಹೆಸರಾದ ಮರಾಠಿ ವಿದ್ಯಾಲಯ ಶಿಕ್ಷಣ ಪ್ರಸಾರಕ ಮಂಡಳ ಮತ್ತು ಮರಾಠಿ ವಿದ್ಯಾಲಯ ಎಂಬ ಹೆಸರಿನಿಂದ 01 ಜೂನ್ 1945 ರಲ್ಲಿ ಮುಂಬೈ
ಸರಕಾರದಿಂದ ವರ್ನಾಕ್ಯುಲರ್ ಫಾಯನಲ್ ಆಂಗ್ಲೋ ಮರಾಠಿ ಶಾಲೆ ಎಂಬ ಹೆಸರಿನಿಂದ ಮಾನ್ಯತೆ ಪಡೆದು 5ರಿಂದ 7ನೇ ತರಗತಿವರೆಗೆ ಮೊದಲ ಮರಾಠಿ ಮಾಧ್ಯಮ ಶಾಲೆ ಪ್ರಾರಂಭವಾಯಿತು.
ನಂತರದಲ್ಲಿ ಅದನ್ನು 11 ನೇ ತರಗತಿವರೆಗೆ ವಿಸ್ತರಿಸಿದರು. ಆವಾಗ ಅದಕ್ಕೆ ಎಸ್ ಎಸ್ ಎಲ್ ಸಿ ಎನ್ನುತ್ತಿದ್ದರು. ಈ 80 ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ 25 ಸಾವಿರ ವಿದ್ಯಾರ್ಥಿಗಳು ಕಲಿತಿರುತ್ತಾರೆ. 1951 ರಲ್ಲಿ ಪಂಚಮಿತ್ರ ಪ್ರಾಥಮಿಕ ಶಾಲೆಯನ್ನು 1 ರಿಂದ 4 ನೇ ತರಗತಿವರೆಗೆ ಪ್ರಾರಂಭಿಸಿದರು. ಇದರಿಂದ ಈ ಶಾಲೆಗೆ ಪ್ರತಿ ವರ್ಷ 40 ವಿದ್ಯಾರ್ಥಿಗಳು ಬರಲು ಅನುಕೂಲವಾಯಿತು.
ನಂತರದಲ್ಲಿ ಅಂದರೆ 1963 ರಲ್ಲಿ ಈ ಶಾಲೆಯನ್ನು ಸರ್ಕಾರಕ್ಕೆ ಸೇರಿಸಿದರು. 1970ರಲ್ಲಿ ಮರಾಠಿ ವಿದ್ಯಾಲಯ ಸುವರ್ಣ ಮಟ್ಟಕ್ಕೆ ತಲುಪಿತು ಎಂದರೆ ತಪ್ಪಾಗಲಾರದು. ಏಕೆಂದರೆ
ಆ ಅವಧಿಯಲ್ಲಿ 5 ರಿಂದ 10 ನೇ ತರಗತಿವರೆಗೆ 900 ವಿದ್ಯಾರ್ಥಿಗಳು,35 ಜನ ಶಿಕ್ಷಕರು, 3 ಜನ ಗುಮಾಸ್ತರು, ಜನ ಸಿಪಾಯಿಗಳು ಮತ್ತು ಒಬ್ಬ ಕಾವಲುಗಾರ ಕೆಲಸ ಮಾಡುತ್ತಿದ್ದರು.1950-51 ರಲ್ಲಿ ಈ ಶಾಲೆಯಲ್ಲಿ ಡಿ ವಿ ಕೇತಕರ ಎಂಬ ಮುಖ್ಯ ಗುರುಗಳಿದ್ದರು. ಅವರು
ಒಳ್ಳೆಯ ಫಲ ಜ್ಯೋತಿಷ್ಯಕಾರರಾಗಿದ್ದರು ಪಂಚಾಗದ ಆಧಾರದ ಮೇಲೆ ಮುಹೂರ್ತ ತೆಗೆಯುತ್ತಿದ್ದರು. ಇವರು
ವಿಜಯಪುರದ ಪ್ರಸಿದ್ಧ ಜ್ಯೋತಿಷ್ಯಶಾಸ್ತ್ರಜ ರಾಂಭಟ್ಟರವರ ಗುರುಗಳಾಗಿದ್ದರು. ಈ ಶಾಲೆಯ ಮತ್ತೋರ್ವ ಶಿಕ್ಷಕರು ಬಡವಣೆ ಗುರುಗಳು ಹಸ್ತರೇಖಾತಜರಾಗಿದ್ದು, ವಿದೇಶದಲ್ಲಿ ಕಲಿತಿದ್ದರು. ಮತ್ತೋರ್ವ ಶಿಕ್ಷಕರಾಗಿದ್ದ ಪರಚೂರೆ
ಗುರುಗಳು ಒಬ್ಬ ಒಳ್ಳೆಯ ಪತ್ರಕರ್ತರಾಗಿದ್ದು, ಈ ಶಾಲೆಯಲ್ಲಿ ಸೌಟ್ ಮತ್ತು ಗೈಡ್ನ ಪ್ರಾರಂಭಿಸಿದರು.
ಈ ಶಾಲೆಯ ಗೋಖಲೆ ಸರ್ ಮತ್ತು ಶ್ರೀ ಕೇರಕರ ಸರ್ ಈ ಶಾಲೆಯ ಶಿಕ್ಷಕರಾಗಿದ್ದು
ಬಿ ಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಗಣಿತ, ಅರ್ಥಶಾಸ್ತ್ರ ವಿಷಯದ ತರಗತಿ ತೆಗೆದುಕೊಳ್ಳುತ್ತಿದ್ದರು. ಶ್ರೀನಿವಾಸ ತಾವರಗಿರಿ ಯವರು ಈ ಶಾಲೆಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರು ಕನ್ನಡ ರಂಗಭೂಮಿಯ ರಂಗಕಲಾವಿದರಾಗಿದ್ದರು. 1963 ರಲ್ಲಿ ಈ ಶಾಲೆ ಶಾಪೇಟೆಯಿಂದ ಮರಾಠಿ ವಿದ್ಯಾಲಯ(ಮನಗೋಳಿ ರಸ್ತೆ) ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡಾಗ ಶ್ರೀನಿವಾಸ ತಾವರಗಿರಿಯವರು ಡಾ| ದ.ರಾ.ಬೇಂದ್ರೆಯವರ ಅಮೃತಹಸ್ತದಿಂದ ಶಾಲೆಯನ್ನು ಉದ್ಘಾಟನೆ ಮಾಡಿಸಿದರು. ಇದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಂಗತಿಯಾಗಿದೆ.
1963ರಿಂದ 1986ರ ವರೆಗೆ ಮರಾಠಿ ವಿದ್ಯಾಲಯ ರಂಗ ಮಂಟಪ ಕನ್ನಡದ ನಾಟಕಗಳಿಗೆ ಬಹಳ ಉಪಯುಕ್ತವಾಯಿತು. ಕರ್ನಾಟಕದ ಯಾವ-ಯಾವ ನಾಟಕಗಳು ವಿಜಯಪುರಕ್ಕೆ ಬರುತ್ತಿದ್ದವೋ ಅವು ಮರಾಠಿ ವಿದ್ಯಾಲಯ ರಂಗಮಂಟಪದಲ್ಲಿಯೆ ಪ್ರದರ್ಶನಗೊಳ್ಳುತ್ತಿದ್ದವು. ಶಾಲೆಯ ರಂಗ ಮಂಚದಲ್ಲಿ ಡಾ! ರಾಜಕುಮಾರ, ಅನಂತನಾಗ, ಶಂಕರನಾಗ, ವಿಷ್ಣುವರ್ಧನ, ಅಂಬರೀಷ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು ಸಾಕಷ್ಟು ಕಲಾವಿದರು ಬಂದು ಹೋಗಿದ್ದಾರೆ. ಹೀಗಾಗಿ ಮರಾಠಿ ವಿದ್ಯಾಲಯದ ಹೆಸರು ಉತ್ತುಂಗ ಶಿಖರಕ್ಕೆ ಏರಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತು ಶ್ರೀನಿವಾಸ ತಾವರಗಿರಿಯವರು ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ, ನಾಟಕದಲ್ಲಿ ಸಿನಿಮಾದಲ್ಲಿ ಕೂಡಾ ಪಾತ್ರನಿರ್ವಹಿಸಿದ್ದಾರೆ. ಇದು ಶಾಲೆಯ ಹೆಮ್ಮೆಯ ವಿಷಯವಾಗಿದೆ. ಇಂದು ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಯಾಗಿದ್ದು, ಪಾಲಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಾಗಿರುವುದರಿಂದ ಶಾಲೆಯಲ್ಲಿ 120 ವಿದ್ಯಾರ್ಥಿಗಳು, ಜನ ಶಿಕ್ಷಕರು, ಒಬ್ಬರು ಗುಮಾಸ್ತರು ಮತ್ತು ಒಬ್ಬ ಸಿಪಾಯಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ವಿಪರ್ಯಾಸ ಸಂಗತಿಯಾಗಿದೆ.


