ಬಬಲೇಶ್ವರ: ರೈತರ ವಿವಿಧ ಸಮಸ್ಯೆ ಬಗೆಹರಿಸಲು ರೈತಸಂಘ ಆಗ್ರಹ
ಬಬಲೇಶ್ವರ: ತಾಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಬಗೆಹರಿಸಬೇಕು ಇಲ್ಲವಾದಲ್ಲಿ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕಾ ಅಧ್ಯಕ್ಷ ಮಕಬುಲ ಖೀಜಿ ಮನವಿ ಸಲ್ಲಿಸಿ ಮಾತನಾಡುತ್ತಾ, ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ನಷ್ಟಗೊಂಡಿರುವ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟರಗೆ ೮೫೦೦ ರಾಜ್ಯ ಮತ್ತು ೮೫೦೦ ಕೇಂದ್ರದ ಪರಿಹಾರ ಗರಿಷ್ಟ ೨ ಹೆಕ್ಟರೆಗೆ ಪರಿಹಾರ ಹಾಕಬೇಕು, ಆದರೆ ಕೇಂದ್ರ ಸರಕಾರ ನೀಡಿದ ಪರಿಹಾರದಲ್ಲಿಯೇ ೨೦೦೦ ಕಡಿತ ಮಾಡಿರುವುದು ಖಂಡನೀಯ, ಅದನ್ನು ಕೂಡಲೇ ರಾಜ್ಯ ಸರಕಾರ ೨೦೦೦+೮೫೦೦ ಸೇರಿಸಿ ಒಟ್ಟಾರೆ ೧೦೫೦೦ ರೈತರ ಪ್ರತಿ ಹೆಕ್ಟರಗೆ ಹಾಕಬೇಕು. ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜವ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈತೊಳೆದುಕೊಂಡಿದ್ದಾರೆ, ಆದರೆ ನಿಜವಾಗಿ ತಾಲೂಕಿನ ಎಲ್ಲಾ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಬೇಕು, ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರೆಸಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಾ ಉಪಾಧ್ಯಕ್ಷ ರಾಜುಗೌಡ ಬಿರಾದಾರ ಮಾತನಾಡುತ್ತಾ, ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿರುವುದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಸಂಗ್ರಹಿಸಿಟ್ಟುಕೊಳ್ಳಬೇಕು, ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಬಿತ್ತÀನೆ, ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ತಾಲೂಕಿನಲ್ಲಿ ವಿಜೆಲೆನ್ಸ್ ತಂಡವನ್ನು ಜಾಗೃತಗೊಳಿಸಿ ಕಾರ್ಯರೂಪಕ್ಕೆ ಬರುವಂತೆ ಆದೇಶಿಸಬೇಕು ಎಂದರು.
ರಾಮು ಕಾಖಂಡಕಿ ಅವರು ಮಾತನಾಡುತ್ತಾ ಮುಂಗಾರು ಪ್ರಾರಂಭವಾಗುವ ಅಡಿಯಲ್ಲಿ ಎಲ್ಲಾ ರೈತರು ಜಮೀನುಗಳಿಗೆ ಹೋಗುವ ಮಾರ್ಗದಲ್ಲಿ ದಾರಿ ಹದಗೆಟ್ಟು, ಕಂಠಿ ಬೆಳೆದು ಸಾಕಷ್ಟು ಅನಾನುಕೂಲವಾಗುತ್ತಿವೆ, ಅವುಗಳನ್ನು ಕೂಡಾ ಸರಿಪಡಿಸಿ ಸ್ವಚ್ಚಗೊಳಿಸಬೇಕು ಎಂದರು.
ಲಾಲಸಾಬ ಕಮತೆ, ಹಸನಸಾಬ ಖೀಜಿ, ಶ್ರೀಶೈಲ ಬಿರಾದಾರ, ಪೈಂಗಬರ ಪಟೇಲ, ಲಕ್ಕಪ್ಪ ಸೊನ್ನದ, ಕಾಶಿನಾಥ ಡೋಂಗಿ, ಹೋಳೆಪ್ಪ ಬೂದಿಹಾಳ ಸೇರಿದಂತೆ ಅನೇಕರು ಇದ್ದರು.

