ವಿಜಯಪುರ: ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವದರಿಂದ ಮಕ್ಕಳಲ್ಲಿರುವ ಸೃಜನಶೀಲತೆ ಹಾಗು ವ್ಯಕ್ತಿತ್ವ ಬೆಳವಣಿಗೆ ಹೊಂದಲು ಸಾಧ್ಯ. ವಿದ್ಯೆಯೊಂದಿಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಬಿರಗಳು ಮಹತ್ವ ಪಡೆದುಕೊಂಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಬಿ ಎಲ್ ಡಿ ಈ ಆಸ್ಪತ್ರೆ ರಸ್ತೆಯ ಶಿವಾಲಯ ಸಭಾಂಗಣದಲ್ಲಿ ಪಿಟ್ನೆಸ್ ಕಾನ೯ರ ಹಾಗು ಬೇಸ್ಟ ಮಾಟಿ೯ಯಲ್ ಕಲಾ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಾಸಿಂಪೀರ ವಾಲಿಕಾರ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ಬೇಸಿಗೆ ಶಿಬಿರಗಳು ಯಶಸ್ವಿಯಾಗಿ ಮಾಡಿದ್ದು ಮಕ್ಕಳ ಕ್ರಿಯಾಶೀಲ ಚಟುವಟಿಕೆ ಪಾಲಕರು ಕಣ್ಣಾರೆ ಕಂಡು ಸಂತೋಷಗೊಂಡಿರುವುದು ಪ್ರಶಂಸನೀಯ ಎಂದರು.
ಪಿಟ್ನಸ ಕಾನ೯ರ ಮುಖ್ಯಸ್ಥ ಜಗದೀಶ ಗುಳೆದಗುಡ್ಡ ಮಾತನಾಡಿ. ಯೋಗಾಸನ, ಸಂಗೀತ, ನೃತ್ಯ, ಕರಾಟೆ, ಭರತನಾಟ್ಯ ವಚನ ನೃತ್ಯ, ಈಜು, ಕುದುರೆ ಸವಾರಿ ಮುಂತಾದ ವಿಷಯ ಹಾಗು ಸ್ಪಧೆ೯ಗಳಲ್ಲಿ ಎರಡು ನೂರು ವಿದ್ಯಾರ್ಥಿ ಶಿಬಿರಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ್ದು ಆನಂದನ್ನುಂಟು ಮಾಡಿದೆ. ಶಿಬಿರಾಥಿ೯ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಜವಾಬ್ದಾರಿ ಪಾಲಕರು ಸಹ ಹೊತ್ತುಕೊಳ್ಳಬೇಕು. ಸಹ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಸವಾ೯೦ಗೀಣ ಪ್ರಗತಿ ಹೊಂದಲು ಸಾಧ್ಯ ಎಂದರು.
ಪ್ರೇಮಾನಂದ ನಾಗರೇಶಿ, ಗೋಪಾಲ ಪವಾರ ವೇದಿಕೆಯ ಮೇಲಿದ್ದರು.
ಶಾಂಭವಿ ಪಾಟೀಲ, ವೈಷ್ಣವಿ ಪಾಟೀಲ ಪ್ರಾಥಿ೯ಸಿದರು.
ತರಬೇತಿ ಶಿಕ್ಷಕರಾದ ಶಿವು ಬೇವನೂರ, ಪ್ರಶಾಂತ ಹಾರವಾಳ, ಕೀರ್ತಿ ಹಂಜಿ, ಸವಿತಾ ತೋಟದ, ಬಿಲಾಲ ಹಿರಾಣಿ, ಅನೀಸ ಮಾಸ್ಟರ, ಮನೋಜ ಪೋಳ, ಸ್ನೇಹ ಮಾನೆ, ಅರುಣ್ ಜಿ, ಉದಯ್ ಜಿ, ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ :ವಾಲಿಕಾರ
Related Posts
Add A Comment

