ದೇವರಹಿಪ್ಪರಗಿ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವಂತ ದುಷ್ಪರಿಣಾಮಗಳ ಬಗ್ಗೆ ಯುವಜನತೆ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಮಾತನಾಡಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಸರಕಾರ ನಿರ್ಬಂಧ ಹೇರಿದ್ದರೂ ಸಹ ಎಗ್ಗಿಲ್ಲದೆ ಎಲ್ಲೆಡೆ ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ. ಇದು ತಪ್ಪು. ತಕ್ಷಣವೇ ತಂಬಾಕು, ಮಾವಾ ಸೇರಿದಂತೆ ತಂಬಾಕುಯುಕ್ತ ಪದಾರ್ಥಗಳ ಬಗ್ಗೆ ಯುವಕರು ಅರಿಯಬೇಕು ಹಾಗೂ ಸೇವನೆ, ಮಾರಾಟ ನಿಲ್ಲಿಸಬೇಕೆಂದು ಸೂಚಿಸಿದರು.
ನಂತರ ೨೦ಕ್ಕೂ ಹೆಚ್ಚು ಪಾನ ಶಾಪ್‌ಗಳ ಮೇಲೆ ದಾಳಿ ನಡೆಸಿ ಅಂಗಡಿಕಾರರಿಗೆ ದಂಡ ವಿಧಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂದೀಪ ಕಡ್ಲೇವಾಡ, ಎಎಸ್‌ಐ ಡಿ.ಎಚ್.ಬಗಲಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಮನಗೌಡ ನೀರಲಗಿ, ಸಮುದಾಯ ಆರೋಗ್ಯ ಅಧಿಕಾರಿ ಕಿರಣ ಪಾಟೀಲ ಸೇರಿದಂತೆ ಆರೋಗ್ಯ, ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

