ವಿಜಯಪುರ: ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿರುವ ಮತ್ತು ಪ್ರಾಮಾಣಿಕವಾಗಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿರುವ ಹಿರಿಯ ಹೋರಾಟಗಾರ ಹಾಗೂ ಕೆಪಿಸಿಸಿ ವಕ್ತಾರರಾದ ಎಸ್.ಎಂ.ಪಾಟೀಲ್ (ಗಣಿಹಾರ) ರವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ದೇವಣಗಾಂವದ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಹೇಬ ನಾಗಾವಿ ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲಾದ್ಯಾಂತ ಅಹಿಂದ ಸಮುದಾಯವು ರಾಜಕೀಯವಾಗಿ ಕುಂಟಿತಗೊಂಡಿದ್ದು ಅಹಿಂದ ಸಮುದಾಯದ ಶಕ್ತಿಯನ್ನು ಬಲಿಷ್ಠಗೊಳಿಸಲು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿ ದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರನ್ನು ವಿಧಾನಪರಿಷತ್ತಿಗೆ ಅವಕಾಶ ನೀಡಬೇಕು. ಅಂತಹ ಅಹಿಂದ ನಾಯಕರನ್ನು ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದ ಧ್ವನಿಯಾಗಿ ಗುರುತಿಸಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಕೊಡುಗೆ ಗಣನೀಯವಾಗಿದ್ದು, ಈ ಸಮುದಾಯದ ವಿಜಯಪುರ ಜಿಲ್ಲೆಯ ಪ್ರಬಲ ನಾಯಕ ಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ಅವಕಾಶ ಕಲ್ಪಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಕೆಪಿಸಿಸಿ ನಾಯಕರಿಗೆ ಯುವ ಮುಖಂಡ ಗಾಲೀಬಸಾಹೇಬ ನಾಗಾವಿ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

