Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರು ಶೋಷಿತ ವರ್ಗಗಳ ಧ್ವನಿಯಾಗಿ ದಿನದಲಿತರ, ಅಲ್ಪ ಸಂಖ್ಯಾತರ ಜೊತೆಗೂಡಿ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ ಎಂದು ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಮಹಿಬೂಬ್ ಸಿಂದಗಿಕರ ಹೇಳಿದರು.ಪಟ್ಟಣದ ದಲಿತ ಸೇನೆ ತಾಲೂಕ ಕಾರ್ಯಾಲಯದಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಹುಟ್ಟುಹಬ್ಬದ ನಿಮಿತ್ಯವಾಗಿಪೌರ ಕಾರ್ಮಿಕರಿಗೆ ಹಣ್ಣು ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ವೇಳೆ ೨೦ಕ್ಕೂ ಅಧಿಕ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಶೇಖ್, ದಲಿತ ಸೇನೆ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಳವಾರ್, ತಾಲೂಕ ಉಪಾಧ್ಯಕ್ಷ ಶಾಹಾನೂರ ಬುಕ್ಕದ್ದ, ಜಾವಿದ್ ಕರ್ಜಗಿ, ಸಯ್ಯದ್ ಕರ್ಜಗಿವ ಸೇರಿದಂತೆ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಮತ ಎಣಿಕೆ ಸಿಬ್ಬಂದಿ ಕಡ್ಡಾಯವಾಗಿಗುರುತಿನ ಚೀಟಿ ಧರಿಸಲು ಜಿಲ್ಲಾಧಿಕಾರಿ ಸೂಚನೆ ವಿಜಯಪುರ: ಮತ ಎಣಿಕೆ ಸಿಬ್ಬಂದಿ ಮತ ಎಣಿಕೆ ಕೇಂದ್ರದ ಒಳಗಡೆ ಮೊಬೈಲ್ ಪೋನ್, ಸ್ಮಾರ್ಟ್ ವಾಚ್, ಟ್ಯಾಬ್, ವೈರಲೆಸ್ ಉಪಕರಣಗಳನ್ನು ತರುವುದು ನಿಷೇಧಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಜಿಲ್ಲಾಡಳಿತ ನೀಡಿರುವ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರುನಗರದ ಸೈನಿಕ್ ಶಾಲೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಮತ ಎಣಿಕೆ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಮತಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಕಾರಣವಾಗಬಾರದು ಎಂಬ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಎಣಿಕೆ ಕೇಂದ್ರಗಳಲ್ಲಿ ಮೊಬೈಲ್ನೊಂದಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲವು ಅಗತ್ಯತೆ ಅನುಗುಣವಾಗಿ ಸಹಾಯಕ ಚುನಾವಣೆ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಅವಶ್ಯವಿದ್ದಲ್ಲಿ ಮತ ಎಣಿಕೆಯ ಹಾಲ್‌ನ ಹೊರಗಡೆ ಮಾತ್ರ ಬಳಸಬಹುದು ಎಂದು ತಿಳಿಸಿದರು.ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುವ ಸೈನಿಕ ಶಾಲೆಯ ಸುತ್ತಲೂ ೨೦೦ ಮೀಟರ್ ಅಳತೆಯಲ್ಲಿ ನಿಷೇಧಾಜ್ಞೆ…
ಚಡಚಣ: ಕನ್ನಡ ಜಾನಪದ ಪರಿಷತ್ ಚಡಚಣ ತಾಲೂಕು ಘಟಕದ ಅಧ್ಯಕ್ಷರಾಗಿ ಆನಂದಪ್ಪ ಚನ್ನಪ್ಪ ಹುಣಸಗಿ ಅವರನ್ನು ಆಯ್ಕೆ ಮಾಡಿ ರಾಜ್ಯಧ್ಯಕ್ಷ ಡಾ. ಎಸ್ ಬಾಲಾಜಿ ಆದೇಶ ಹೊರಡಿಸಿದ್ದಾರೆ.ಜಾನಪದ ಕಲೆಗಳ ಕ್ಷೇತ್ರ ಕಾರ್ಯ, ಧಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಮತ್ತು ಪ್ರಮಾಣಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಗತ್ತಿನ ಖ್ಯಾತ ಬ್ರಿಟಿಷ ವೈದ್ಯಕೀಯ ಪ್ರಕಾಶನ ಸಂಸ್ಥೆಯ ಬಿ ಎಂ ಜೆ ಕೇಸ ರಿಪೋರ್ಟ ವೈದ್ಯಕೀಯ ವಿಜ್ಞಾನ ಮಾಸಿಕ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಆಯ್ಕೆ ಆಗಿದ್ದಾರೆ.ಈ ಮೂಲಕ ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಜೆಯಾದ ಭಾರತದ ಮೊದಲ ಚರ್ಮರೋಗ ತಜ್ಞ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂದಿನಿಂದ ಅಂದರೆ ಜೂನ್ 01, 2024 ರಿಂದ ಅವರು ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.ಚರ್ಮರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅವರದೇ ಆದ ಕೊಡುಗೆ ನೀಡುತ್ತಿರುವ ಡಾ. ಅರುಣ ಚಂ. ಇನಾಮದಾರ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ: 2023-24 ನೇ ಸಾಲಿನಲ್ಲಿ ನಡೆದ NMMS ಪರೀಕ್ಷೆಯಲ್ಲಿ ಜಮಖಂಡಿ ತಾಲೂಕಿನಿಂದ ಒಟ್ಟು 121 ಮಕ್ಕಳು ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಮಕ್ಕಳಿಗೆ ಪ್ರತಿವರ್ಷ ಒಂದು ಸಾವಿರ ರೂಪಾಯಿಯಂತೆ, ವರ್ಷಕ್ಕೆ 12000 ರೂಪಾಯಿ ಸ್ಕಾಲರ್ಶಿಪ್ ಹಣ ಮಗುವಿನ ಖಾತೆಗೆ ಜಮಾ ಆಗುತ್ತದೆ. ಈ ರೀತಿ ಒಟ್ಟು ನಾಲ್ಕು ವರ್ಷಗಳವರೆಗೆ ಅಂದರೆ PUC 2ND ವರ್ಷದವರೆಗೆ ಮಗುವಿನ ಖಾತೆಗೆ ಸ್ಕಾಲರ್ಶಿಪ್ ಜಮಾ ಆಗುತ್ತದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು NMMS ಪಾಸಾದ ತಾಲೂಕು ಜಮಖಂಡಿ ಆಗಿದೆ. ಅದರಲ್ಲಿ 125 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಪ್ರಜ್ಞಾ ಪಾಟೀಲ, 121 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದ ಕುಮಾರಿ ಸ್ನೇಹ ಜಾಧವ & 120 ಅಂಕಗಳನ್ನು ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಶ್ವೇತ ಜಾಧವ ಇವರಿಗೆ ಮಾನ್ಯ ಶ್ರೀಯುತ ಎ ಕೆ ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ಅವರ ಅಧ್ಯಕ್ಷತೆಯಲ್ಲಿ, ಶ್ರೀಮತಿ ಸಮೀನಾಕೌಸರ ಸೌದಾಗರ NMMS ನೋಡಲ್ ಜಮಖಂಡಿ ಅವರ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ್ ನಿವೃತ್ತರೇ ಗಮನಿಸಿ.. ಪ್ರವೃತ್ತಿಗೆ ಇದು ಸಕಾಲ ಪ್ರತಿ ವರ್ಷ ಜೂನ್ ತಿಂಗಳು ಬಂತೆಂದರೆ ಸಾಲು ಸಾಲಾಗಿ ಹುಟ್ಟು ಹಬ್ಬಗಳ ಆಚರಣೆ. ಅದೂ ಜೂನ್ ತಿಂಗಳ ಮೊದಲನೇ ದಿನವೇ ಹೆಚ್ಚಾಗಿ ಈ ಸಾಲು ಸಾಲು ಹುಟ್ಟುಹಬ್ಬಗಳ ಹಿಂದಿನ ಗುಟ್ಟೇನು ? ಮತ್ತೇನೂ ಇಲ್ಲ. ಅಂದು ವಾರ, ತಿಥಿ, ನಕ್ಷತ್ರಗಳ ಮೂಲಕ ದಿನಗಳನ್ನು ಗೊತ್ತು ಪಡಿಸುತ್ತಿದ್ದ ಕಾಲ. ಅಮಾವಾಸ್ಯೆಗೆ 3 ದಿನ ಮುಂಚೆ, ಹುಣ್ಣಿವೆಗೆ 4 ದಿನ ಹಿಂದೆ, ಬಸವ ಜಯಂತಿ, ಎಳ್ಳಮಾಸೆ ಹೀಗೆ ತಮ್ಮಮಕ್ಕಳ ಹುಟ್ಟುಹಬ್ಬ, ವಿಶೇಷ ದಿನಗಳನ್ನು, ಹಿರಿಯರ ಸಾವುಗಳನ್ನ ಗುರುತಿಸುತ್ತಿದ್ದ ಕಾಲ. ಆಗಿನ ಕಾಲದ ಮಕ್ಕಳನ್ನು ಶಾಲಾ ಪ್ರವೇಶಾತಿಗೆ ದಾಖಲು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಶಿಕ್ಷಕರು ಜೂನ್ ಒಂದನೇ ತಾರೀಕು ಅವರ ಹುಟ್ಟಿದ ದಿನ ಎಂದು ಬರೆದುಕೊಂಡು ಬಿಡುತ್ತಿದ್ದರು. ಅದುವೇ ಇಂದು ಮೇ ತಿಂಗಳ ಕೊನೆಯ ದಿನಾಂಕದಲ್ಲಿ ನಿವೃತ್ತಿ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಲು ಕಾರಣ. ಜೂನ್ ತಿಂಗಳ ಮೊದಲ ದಿನ ಹುಟ್ಟಿದ…
ಬೆಂಗಳೂರು ಪದವೀಧರ ಮತಕ್ಷೇತ್ರದ ಸಾಕ್ಷಾತ್ ಸಮೀಕ್ಷೆ ಬೆಂಗಳೂರು: ಜಾಣವಂತರ ನಗರ ಬೆಂಗಳೂರಿನಲ್ಲಿ ನಡೆಯುತ್ತಿರುವ ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮಧ್ಯೆ ನೇರ ಹಣಾಹಣಿಯಿದ್ದು, ಪ್ರಚಾರ ಹಾಗೂ ಮತದಾರರ ಭೇಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮುಂದಿದ್ದಾರೆ.ರಾಮೋಜಿಗೌಡರ ವೈಯಕ್ತಿಕ ವರ್ಚಸ್ಸು, ಅವರು ಕಳೆದ ಒಂದು ದಶಕದಿಂದ ಕ್ಷೇತ್ರಾದ್ಯಂತ ಮತದಾರರಿಗೆ ಸ್ಪಂದಿಸುವ ಗುಣ ಜತೆಗೆ ಸ್ವತಃ ಉಪಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರ ಜತೆಗೆ ಎರಡು ಸಲ ಸೋತಿರುವ ಅನುಕಂಪವೂ ರಾಮೋಜಿಗೌಡರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದೆ.ಬಿಜೆಪಿಯಲ್ಲಿ ಭಿನ್ನಮತ ಉಲ್ಭಣ:ಆರು ವರ್ಷದಿಂದ ವಿಧಾನಪರಿಷತ್ ಸದಸ್ಯರಾಗಿರುವ ಅ.ದೇವೇಗೌಡ ಕ್ಷೇತ್ರದಾದ್ಯಂತ ಒಮ್ಮೆಯೂ ಸಂಚರಿಸದ, ಕ್ರೀಯಾಶೀಲತೆಯಿಂದ ಇರದ ಕಾರಣ ಪದವೀಧರ ಮತದಾರರಲ್ಲಿ ಅವರ ಹೆಸರೇ ಗೊತ್ತಿಲ್ಲ. ಇದು ಅ. ದೇವೇಗೌಡರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ರಾಜಾಜಿನಗರ ಪದವೀಧರ ಮತದಾರ ಚಂದ್ರಶೇಖರ ಅಭಿಪ್ರಾಯಪಟ್ಟರು.ಕ್ಷೇತ್ರದಾದ್ಯಂತ ಸಂಚರಿಸಿದಾಗ ಎಲ್ಲಿಯೂ ದೇವೇಗೌಡರ ಬಗ್ಗೆ ಒಲುವು ಕಂಡು ಬರಲಿಲ್ಲ. ಬಿಜೆಪಿಯಲ್ಲಿಯೇ ಮುಖಂಡರು ಸೇರಿದಂತೆ ಕಾರ್ಯಕರ್ತರಿಗೂ ಅವರ ಪರಿಚಯವಿಲ್ಲದಿರುವುದು ಅವರ ಮೈನಸ್. ಅಭ್ಯರ್ಥಿಯಾಗುವ ಉದ್ದೇಶದಿಂದ ಸಂಘ…
ಚಿಮ್ಮಡ: ಕಷ್ಟಪಟ್ಟು ಪ್ರಯತ್ನಿಸಿದರೆ ಯಾವುದೇ ಸಾಧನೆ ಸಾಧ್ಯ ಆದರೆ ಯಶಸ್ಸಿನ ಅಮಲಿನಲ್ಲಿ ಮೈಮರೆತರೆ ಗುರಿ ತಲುಪುವುದು ಕಷ್ಠದಾಯಕವಾಗಲಿದೆ ಎಂದು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಹೇಳಿದರು.ಗ್ರಾಮದ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಾಧನೆ ವಿದ್ಯಾರ್ಥಿ ಜೀವನದ ಮೊದಲ ಹೆಜ್ಜೆಯಾಗಿದ್ದು ಗುರಿ ತಲುಪುವುದು ಇನ್ನೂ ದೂರದಲ್ಲಿದೆ ಅದಕ್ಕೆ ಆರಂಭದಲ್ಲಿಯೇ ಮೈಮರೆತು ಮುಂದಿನ ಜೀವನವನ್ನು ನಿರ್ಲಕ್ಷ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸ್ಥಳಿಯ ಸರಕಾರಿ ಪದವಿಪೂರ್ವ ವಿದ್ಯಾಲಯದ ಪ್ರಾದ್ಯಾಪಕ ಬಿ.ಬಿ. ಕುದರಿಮನಿ ಮಾತನಾಡಿ ಗ್ರಾಮದಲ್ಲಿ ಹಲವಾರು ಸೌಲಭ್ಯಗಳ ಕೊರತೆಯ ನಡುವೆಯೂ ೧೦೦ ಪ್ರತಿಶತ ಫಲಿತಾಂಶ ಅದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತ್ಯತ್ತಮ ಫಲಿತಾಂಶ ಪಡೆದುಕೊಂಡಿರುವುದು ನಮ್ಮ ಸರಕಾರಿ ಪದವಿಪೂರ್ವ ವಿದ್ಯಾಲಯದ ಸಾಧನೆ. ಇದಕ್ಕೆ ವಿದ್ಯಾರ್ಥಿಗಳ ಸತತ ಪರೀಶ್ರಮ, ಗ್ರಾಮಸ್ಥರ ಸಹಕಾರ ಪ್ರಮುಖ ಕಾರಣವಾಗಿದೆ ಎಂದರು.ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್.ಜಿಟ್ಟಿ, ಸಿಆರ್‌ಪಿ ಸಮನ್ವಯ ಅಧಿಕಾರಿ ಶ್ರೀಮತಿ ದ್ರಾಕ್ಷಾಯಿಣಿ ಮಂಡಿ ಮಾತನಾಡಿದರು.ಕಾರ್ಯಕ್ರಮದ…
ಕೊಲ್ಹಾರ: ಬಾಲ್ಯಾವಸ್ಥೆಯಿಂದ ಪ್ರಾರಂಭವಾಗುವ ವಿದ್ಯೆ ಕಲಿಯುವ ಹಂತದಲ್ಲಿ ಶಿಸ್ತು ಸಂಯಮತೆ, ಗುರುಗಳ ಪಾಠ ಬೋಧನೆಯನ್ನು ತದೇಕಚಿತ್ತದಿಂದ ಆಲಿಸಿದರೆ ಎಂಥಹ ಕಠಿಣವಾದ ಪರಿಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಈ ದಿಸೆಯಲ್ಲಿ ವಿಧ್ಯಾರ್ಥಿಗಳು ಆಸಕ್ತಿಯನ್ನು ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಶ್ರೀ ದ್ಯಾಮವ್ವದೇವಿ ದೇವಸ್ಥಾನದ ಸೇವಾ ಸಮೀತಿಯವರು ಹಮ್ಮಿಕೊಂಡಿದ್ದ ದ್ಯಾಮವ್ವ ಹಾಗೂ ದುರ್ಗಾ ಮಾತೆಯ ಉಡಿತುಂಬುವ ಮಂಗಲೋತ್ಸವ ಜಾತ್ರಾ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.ಶಿಕ್ಷಣ ಎನ್ನುವದನ್ನು ಕಬ್ಬಿಣದ ಕಡಲೆ ಎಂದು ತಿಳಿಯಬಾರದು ದಿನನಿತ್ಯ ಶಾಲೆಗೆ ಹೋಗಿ ಓದು ಬರಹ ರೂಡಿಗತಮಾಡಿಕೊಂಡು ಅಭ್ಯಸಿಸಿದರೆ ಪರೀಕ್ಷೆಗಳಲ್ಲಿ ಸುಲಲಿತವಾಗಿ ಪಾಸಾಗಬಹುದು ಅದೇರೀತಿ ಸಮಾಜದಲ್ಲಿಯೂ ಕೂಡ ಬದುಕುವದು ದುಸ್ತಿರ ಎಂದುಕೊಳ್ಳಬಾರದು ಸಮಸ್ಯೆಗಳಿಗೆ ಎದೆ ಗುಂದದೇ ಡೊಂಕು ಅಣಕದ ಮಾತುಗಳಿಗೆ ಕಿವಿಕೊಡದೇ ನಾವುಗಳು ಇಟ್ಟ ಹೆಜ್ಜೆಯನ್ನು ಗುರಿ ತಲುಪುವವರೆಗೆ ನಿಲ್ಲಿಸದೇ ಸಾಗಬೇಕು ಆವಾಗ ಇದೇ ಸಮಾಜ ನಮ್ಮನ್ನು ಗೌರವಿಸುವಂತಾಗಲು ಕಾರಣೀಕರ್ತರಾಗುತ್ತೇವೆ ಎಂದರು.೫ ದಿನಗಳ…
ವಿಜಯಪುರ: ಮನರೇಗಾ ಯೋಜನೆಗಳ ಮೂಲಕ ಹಮ್ಮಿಕೊಂಡ ಚಟುವಟಿಕೆಗಳು ಬರಪೀಡಿತ ಪ್ರದೇಶವಾದ ವಿಜಯಪುರ ಜಿಲ್ಲೆಯಲ್ಲಿ ಜನ ಜಾನುವಾರಗಳಿಗೆ, ಅಂತರ್ಜಲ ವೃದ್ಧಿಗೆ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ.ಈ ವರ್ಷ ಜಿಲ್ಲೆ ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಮನರೇಗಾ ಯೋಜನೆಯಡಿ ಮಳೆ ನೀರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಬೋರವೆಲ್ ಗಳಿಗೆ ರೀಚಾರ್ಜ್ ಪಿಟ್, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಹೊಸದಾಗಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳ ಅನುಷ್ಟಾನಕ್ಕೆ ಆದೇಶಿಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಾದ ಕೆರೆ, ನಾಲಾ, ಹಳ್ಳಗಳಲ್ಲಿ ಮತ್ತು ಕೃಷಿ ಹೊಂಡ, ಬದುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಶಿ ಆನಂದ ತಿಳಿಸಿದ್ದಾರೆ.ಈ ಬೇಸಿಗೆಯಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿ ಮಾಡಿ ಕೂಲಿಕಾರರ ಸಂಕಷ್ಟ್ಟಕ್ಕೆ ನರೇಗಾ ಯೋಜನೆಯಲ್ಲಿ ಸ್ಪಂದಿಸಲಾಗಿದೆ. ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ಕೆರೆ, ನಾಲಾ, ಹಳ್ಳ ಅಭಿವೃದ್ಧಿ, ಕೃಷಿ ಹೊಂಡ, ಬದು…
