ಚಿಮ್ಮಡ: ಕಷ್ಟಪಟ್ಟು ಪ್ರಯತ್ನಿಸಿದರೆ ಯಾವುದೇ ಸಾಧನೆ ಸಾಧ್ಯ ಆದರೆ ಯಶಸ್ಸಿನ ಅಮಲಿನಲ್ಲಿ ಮೈಮರೆತರೆ ಗುರಿ ತಲುಪುವುದು ಕಷ್ಠದಾಯಕವಾಗಲಿದೆ ಎಂದು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ಹೇಳಿದರು.
ಗ್ರಾಮದ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಾಧಕ ವಿದ್ಯಾರ್ಥಿಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಾಧನೆ ವಿದ್ಯಾರ್ಥಿ ಜೀವನದ ಮೊದಲ ಹೆಜ್ಜೆಯಾಗಿದ್ದು ಗುರಿ ತಲುಪುವುದು ಇನ್ನೂ ದೂರದಲ್ಲಿದೆ ಅದಕ್ಕೆ ಆರಂಭದಲ್ಲಿಯೇ ಮೈಮರೆತು ಮುಂದಿನ ಜೀವನವನ್ನು ನಿರ್ಲಕ್ಷ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ಥಳಿಯ ಸರಕಾರಿ ಪದವಿಪೂರ್ವ ವಿದ್ಯಾಲಯದ ಪ್ರಾದ್ಯಾಪಕ ಬಿ.ಬಿ. ಕುದರಿಮನಿ ಮಾತನಾಡಿ ಗ್ರಾಮದಲ್ಲಿ ಹಲವಾರು ಸೌಲಭ್ಯಗಳ ಕೊರತೆಯ ನಡುವೆಯೂ ೧೦೦ ಪ್ರತಿಶತ ಫಲಿತಾಂಶ ಅದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅತ್ಯತ್ತಮ ಫಲಿತಾಂಶ ಪಡೆದುಕೊಂಡಿರುವುದು ನಮ್ಮ ಸರಕಾರಿ ಪದವಿಪೂರ್ವ ವಿದ್ಯಾಲಯದ ಸಾಧನೆ. ಇದಕ್ಕೆ ವಿದ್ಯಾರ್ಥಿಗಳ ಸತತ ಪರೀಶ್ರಮ, ಗ್ರಾಮಸ್ಥರ ಸಹಕಾರ ಪ್ರಮುಖ ಕಾರಣವಾಗಿದೆ ಎಂದರು.
ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್.ಜಿಟ್ಟಿ, ಸಿಆರ್‌ಪಿ ಸಮನ್ವಯ ಅಧಿಕಾರಿ ಶ್ರೀಮತಿ ದ್ರಾಕ್ಷಾಯಿಣಿ ಮಂಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಅಶೋಕ ಮೋಟಗಿ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ ಪ್ರಭು ಗೋವಿಂದಗೋಳ, ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪುಜಾರಿ, ಆನಂದ ಕವಟಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮನೋಜ ಹಟ್ಟಿ, ಅಸೋಕ ಮೋಟಗಿ, ಬಾಳೇಶ ಬ್ಯಾಕೋಡ, ಅಶೋಕ ಧಡೂತಿ, ರಮೇಶ ಮೇತ್ರಿ, ನಾಗಪ್ಪಾ ಆಲಕನೂರ, ಶ್ರೀಮತಿ ಮೇಘಾ ಗಾಣಿಗೇರ, ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ, ಪ್ರಾದ್ಯಾಪಕ ಹಣಮಂತ ಕುಂಬಾರ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ಸ್ಥಳಿಯ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಅತ್ತುತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗ್ರಾಮ ಪಂಚಾಯತಿಯಿಂದ ಸತ್ಕರಿಸಿ ನಗದು ನೀಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

