ಬೆಂಗಳೂರು ಪದವೀಧರ ಮತಕ್ಷೇತ್ರದ ಸಾಕ್ಷಾತ್ ಸಮೀಕ್ಷೆ
ಬೆಂಗಳೂರು: ಜಾಣವಂತರ ನಗರ ಬೆಂಗಳೂರಿನಲ್ಲಿ ನಡೆಯುತ್ತಿರುವ ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮಧ್ಯೆ ನೇರ ಹಣಾಹಣಿಯಿದ್ದು, ಪ್ರಚಾರ ಹಾಗೂ ಮತದಾರರ ಭೇಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮುಂದಿದ್ದಾರೆ.
ರಾಮೋಜಿಗೌಡರ ವೈಯಕ್ತಿಕ ವರ್ಚಸ್ಸು, ಅವರು ಕಳೆದ ಒಂದು ದಶಕದಿಂದ ಕ್ಷೇತ್ರಾದ್ಯಂತ ಮತದಾರರಿಗೆ ಸ್ಪಂದಿಸುವ ಗುಣ ಜತೆಗೆ ಸ್ವತಃ ಉಪಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರ ಜತೆಗೆ ಎರಡು ಸಲ ಸೋತಿರುವ ಅನುಕಂಪವೂ ರಾಮೋಜಿಗೌಡರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದೆ.
ಬಿಜೆಪಿಯಲ್ಲಿ ಭಿನ್ನಮತ ಉಲ್ಭಣ:
ಆರು ವರ್ಷದಿಂದ ವಿಧಾನಪರಿಷತ್ ಸದಸ್ಯರಾಗಿರುವ ಅ.ದೇವೇಗೌಡ ಕ್ಷೇತ್ರದಾದ್ಯಂತ ಒಮ್ಮೆಯೂ ಸಂಚರಿಸದ, ಕ್ರೀಯಾಶೀಲತೆಯಿಂದ ಇರದ ಕಾರಣ ಪದವೀಧರ ಮತದಾರರಲ್ಲಿ ಅವರ ಹೆಸರೇ ಗೊತ್ತಿಲ್ಲ. ಇದು ಅ. ದೇವೇಗೌಡರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ರಾಜಾಜಿನಗರ ಪದವೀಧರ ಮತದಾರ ಚಂದ್ರಶೇಖರ ಅಭಿಪ್ರಾಯಪಟ್ಟರು.
ಕ್ಷೇತ್ರದಾದ್ಯಂತ ಸಂಚರಿಸಿದಾಗ ಎಲ್ಲಿಯೂ ದೇವೇಗೌಡರ ಬಗ್ಗೆ ಒಲುವು ಕಂಡು ಬರಲಿಲ್ಲ. ಬಿಜೆಪಿಯಲ್ಲಿಯೇ ಮುಖಂಡರು ಸೇರಿದಂತೆ ಕಾರ್ಯಕರ್ತರಿಗೂ ಅವರ ಪರಿಚಯವಿಲ್ಲದಿರುವುದು ಅವರ ಮೈನಸ್. ಅಭ್ಯರ್ಥಿಯಾಗುವ ಉದ್ದೇಶದಿಂದ ಸಂಘ ಪರಿವಾರದ ಮುಖಂಡ ಆನಂದ ಕಳೆದ ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಲಿಲ್ಲ. ಅವರು ಪ್ರಚಾರದಲ್ಲಿ ಪಾಲ್ಗೊಳ್ಳದೇ ಸುಮ್ಮನಿರುವುದು ದೇವೇಗೌಡರ ಗೆಲುವಿಗೆ ಮುಳುವಾಗಿದೆ. ಅವರ ಮನೆಗೆ ಸ್ವತಃ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಭೇಟಿ ನೀಡಿ ಸಮಾಧಾನ ಪಡಿಸಿದರೂ ಆನಂದ ಅವರ ಅಸಮಾಧಾನಕ್ಕೆ ಇನ್ನೂ ಶಮನವಾಗಿಲ್ಲ. ಅವರು ಎಲ್ಲಿಯೂ ಪ್ರಚಾರದಲ್ಲಿ ಭಾಗಿಯೂ ಆಗಿಲ್ಲ.
ಸಂಘ ಪರಿವಾರದ ಹಿನ್ನಲೆಯ ಉದಯಸಿಂಗ್ ಹಾಗೂ ಜೆಡಿಎಸ್ ಮುಖಂಡ ಪುಟ್ಟಸ್ವಾಮಿಗೌಡ ಇಬ್ಬರೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ.ದೇವೇಗೌಡರಿಗೆ ತಲೆನೋವಾಗಿದೆ. ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರ ಪರ ಪಕ್ಷಾತೀತವಾಗಿ ಮತದಾರರು ಬೆಂಬಲಿಸುತ್ತಿರುವುದು ಅವರ ಗೆಲುವು ಸುಲಲಿತ ಎನ್ನಲಾಗುತ್ತಿದೆ.
ಹೆಚ್ಚಿದ ಮತದಾರರು:
ಪ್ರತಿ ಬಾರಿ ೬೦ ಸಾವಿರ ಮತದಾರ ದಾಟದ ಕ್ಷೇತ್ರದಲ್ಲಿ ಈ ಬಾರಿ ೧,೨೧,೮೬೦ ಮತದಾರರು ನೋಂದಣಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರು ಈಗಾಗಲೇ ಎಲ್ಲಾ ಮತದಾರರಿಗೆ ಮೂರು ಬಾರಿ ಭೇಟಿ ನೀಡಿ ಮತದಾರರಿಗೆ ಮನವೊಲಿಸಿದ್ದಾರೆ. ಹೆಚ್ಚಿನ ಮತದಾರರಾಗಿರುವುದರಿಂದ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಮತದಾರರ ಭೇಟಿ ಸಾಧ್ಯವಾಗುತ್ತಿಲ್ಲ. ಬಿಜೆಪಿ ತನ್ನ ಅಭ್ಯರ್ಥಿಯನ್ನು ನಾಮಪತ್ರ ಸಲ್ಲಿಸುವ ವೇಳೆಯ ಕೊನೆ ಗಳಿಗೆಯಲ್ಲಿ ಘೋಷಿಸಿದ ಕಾರಣ ದೇವೇಗೌಡರು ಮತದಾರರನ್ನು ಸಂರ್ಪಕಿಸಲು ಹರಸಾಹಸ ಪಡುತ್ತಿದ್ದಾರೆ.

ಸುಮಾರು ೭೦ ಸಾವಿರಕ್ಕೂ ಅಧಿಕ ಪದವೀಧರರನ್ನು ರಾಮೋಜಿಗೌಡರು ನೋಂದಣಿ ಮಾಡಿಸಿದ್ದು, ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ.
ನೌಕರರ ಸಂಘಟನೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ವಕೀಲರ ಸಂಘಟನೆಯವರು, ನಾನಾ ಶಿಕ್ಷಕ ಸಂಘಟನೆಗಳು, ಖಾಸಗಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘಗಳು, ಪ್ರೌಢಶಾಲಾ ಶಿಕ್ಷಕ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು ರಾಮೋಜಿಗೌಡರಿಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ರಾಮೋಜಿಗೌಡರ ಬಗ್ಗೆ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಲ್ಲಿ ಹೆಚ್ಚಿನ ಒಲುವು ಕಂಡು ಬರುತ್ತಿದೆ.
ಡಿಜಿಟಲ್ ಪ್ರಚಾರ ತಂತ್ರದಲ್ಲಿಯೂ ಮುಂಚೂಣಿ:
ಮತದಾರರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರೂ ಮತಕ್ಷೇತ್ರ ವ್ಯಾಪ್ತಿಯ ೩೬ ವಿಧಾನಸಭಾ ಮತಕ್ಷೇತ್ರವಾರು ಪ್ರಚಾರ ಸಭೆ ನಡೆಸಿದ್ದಾರೆ. ಸಾಫ್ಟವೇರ್ ತಂತ್ರಜ್ಞಾನದ ಮೂಲಕವೂ ಡಿಜಿಟಲ್ ಪ್ರಚಾರಕ್ಕೂ ಒತ್ತು ನೀಡಿದ್ಧಾರೆ. ಪ್ಲೇ ಸ್ಟೋರ್ ನಿಂದ ರಾಮೋಜಿಗೌಡ ಎಂದು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡರೇ ಮತದಾನ ಮಾಡುವ ವಿವರ, ಮತದಾನ ಕೇಂದ್ರ ಸೇರಿದಂತೆ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದೆ. ಇಲ್ಲಿಯವರೆಗೆ ಒಂದು ಲಕ್ಷ ಜನ ಈ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದು ವಿಶೇಷ.
ಮತದಾರರಿಗೆ ಎಸ್ ಎಂಎಸ್ ಹಾಗೂ ವಾಯಸ್ ಕಾಲ್ ಮೂಲಕ ಜತೆಗೆ ಪ್ರತಿನಿತ್ಯವೂ ನೀತಿ ಸಂದೇಶಗಳನ್ನು ಕಳಿಸುವುದರ ಮೂಲಕ ಡಿಜಿಟಲ್ ಪ್ರಚಾರದಲ್ಲಿಯೂ ರಾಮೋಜಿಗೌಡರು ಮುಂಚೂಣಿಯಲ್ಲಿದ್ದಾರೆ.
ಒಟ್ಟಾರೆ ಕ್ಷೇತ್ರಾದ್ಯಂತ ಸಂಚರಿಸಿದಾಗ ರಾಮೋಜಿಗೌಡರ ಪರ ಒಲವು ಹೆಚ್ಚಾಗಿ ಕಂಡು ಬಂತು. ಜತೆಗೆ ಕಾಂಗ್ರೆಸ್ ಸರ್ಕಾರದ ಆಡಳಿತವೂ ಇದ್ದು, ಗೆಲುವು ಸುಲಭವಾಗಲಿದೆ ಎಂದೇ ಕ್ಷೇತ್ರದಾದ್ಯಂತ ವಿಶ್ಲೇಷಿಸಲಾಗುತ್ತಿದೆ.

