ವಿಜಯಪುರ: 2023-24 ನೇ ಸಾಲಿನಲ್ಲಿ ನಡೆದ NMMS ಪರೀಕ್ಷೆಯಲ್ಲಿ ಜಮಖಂಡಿ ತಾಲೂಕಿನಿಂದ ಒಟ್ಟು 121 ಮಕ್ಕಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಮಕ್ಕಳಿಗೆ ಪ್ರತಿವರ್ಷ ಒಂದು ಸಾವಿರ ರೂಪಾಯಿಯಂತೆ, ವರ್ಷಕ್ಕೆ 12000 ರೂಪಾಯಿ ಸ್ಕಾಲರ್ಶಿಪ್ ಹಣ ಮಗುವಿನ ಖಾತೆಗೆ ಜಮಾ ಆಗುತ್ತದೆ. ಈ ರೀತಿ ಒಟ್ಟು ನಾಲ್ಕು ವರ್ಷಗಳವರೆಗೆ ಅಂದರೆ PUC 2ND ವರ್ಷದವರೆಗೆ ಮಗುವಿನ ಖಾತೆಗೆ ಸ್ಕಾಲರ್ಶಿಪ್ ಜಮಾ ಆಗುತ್ತದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು NMMS ಪಾಸಾದ ತಾಲೂಕು ಜಮಖಂಡಿ ಆಗಿದೆ. ಅದರಲ್ಲಿ 125 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಕುಮಾರಿ ಪ್ರಜ್ಞಾ ಪಾಟೀಲ, 121 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದ ಕುಮಾರಿ ಸ್ನೇಹ ಜಾಧವ & 120 ಅಂಕಗಳನ್ನು ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಶ್ವೇತ ಜಾಧವ ಇವರಿಗೆ ಮಾನ್ಯ ಶ್ರೀಯುತ ಎ ಕೆ ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ ಅವರ ಅಧ್ಯಕ್ಷತೆಯಲ್ಲಿ, ಶ್ರೀಮತಿ ಸಮೀನಾಕೌಸರ ಸೌದಾಗರ NMMS ನೋಡಲ್ ಜಮಖಂಡಿ ಅವರ ನೇತೃತ್ವದಲ್ಲಿ ಹಾಗೂ ಎಲ್ಲಾ ಅನುಷ್ಠಾನಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

